ಬೆಂಗಳೂರು: ಆಸ್ಟ್ರೇಲಿಯಾದ ರಾಷ್ಟ್ರೀಯ ವಿಮಾನಯಾನ ಕಂಪನಿಯಾಗಿರುವ ‘ಕ್ವಂಟಾಸ್’, ಬೆಂಗಳೂರಿನಿಂದ ಸಿಡ್ನಿಗೆ ಹೊಸ ನೇರ ವಿಮಾನ ಸೇವೆಯನ್ನು ಆರಂಭಿಸಿದೆ.

ದಕ್ಷಿಣ ಭಾರತದಿಂದ ಆಸ್ಟ್ರೇಲಿಯಾಕ್ಕೆ ನೇರ ವಿಮಾನ ಸಂಪರ್ಕ ಕಲ್ಪಿಸುವಲ್ಲಿ ತಾನೇ ಮೊದಲಿಗ ಎಂದು ಕಂಪನಿ ಹೇಳಿದೆ. ಹೊಸ ಸೇವೆಯು ಎರಡೂ ನಗರಗಳ ನಡುವಿನ ಪ್ರಯಾಣ ಅವಧಿಯನ್ನು ಮೂರು ಗಂಟೆಗಳಷ್ಟು ಕಡಿಮೆ ಮಾಡಲಿದೆ.

ಬೆಂಗಳೂರು–ಸಿಡ್ನಿ ವಿಮಾನ ಸೇವೆಯು ಭಾರತಕ್ಕೆ ಹೊಸ ಪ್ರವಾಸೋದ್ಯಮ ಅವಕಾಶಗಳನ್ನು ತೆರೆಯಲಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಕ್ವಂಟಾಸ್ ವಿಮಾನ ಸೇವೆಯು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಿಡ್ನಿಗೆ ವಾರಕ್ಕೆ ನಾಲ್ಕು ದಿನ (ಬುಧವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ) ಲಭ್ಯವಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.