ಬೆಂಗಳೂರು: ‘ಕೊರೊನಾ–2’ ವೈರಸ್ ಕಾರಣಕ್ಕೆ ಜಾರಿಯಲ್ಲಿ ಇರುವ ದಿಗ್ಬಂಧನದ ಹಿನ್ನೆಲೆಯಲ್ಲಿ ಮನೆಯಿಂದಲೇ ಕೆಲಸ ನಿರ್ವಹಿಸುವವರಿಗೆ ಮತ್ತು ಮನರಂಜನೆಗಾಗಿ ಇಂಟರ್ನೆಟ್ ನೆಚ್ಚಿಕೊಂಡಿರುವವರಿಗೆ ನೆರವಾಗಲು ರಿಲಯನ್ಸ್ ಜಿಯೊ ಕಂಪನಿ ವಿಶೇಷ ಕೊಡುಗೆ ಪ್ರಕಟಿಸಿದೆ.

ಮನೆಯಲ್ಲಿದ್ದಾಗ ಎಲ್ಲರೂ ಸಂಪರ್ಕದಲ್ಲಿ ಇರಲಿ ಎನ್ನುವ ಕಾರಣಕ್ಕೆ ಜಿಯೊ ಫೈಬರ್ನ ಹೊಸ ಗ್ರಾಹಕರಿಗೆ ಬೇಸಿಕ್ ಜಿಯೊ ಫೈಬರ್ ಬ್ರಾಡ್ಬ್ಯಾಂಡ್ ಸಂಪರ್ಕವನ್ನು ಯಾವುದೇ ಸೇವಾ ಶುಲ್ಕವಿಲ್ಲದೆ ಉಚಿತವಾಗಿ 30 ದಿನಗಳವರೆಗೆ ನೀಡಲು ಮುಂದಾಗಿದೆ.

ಈ ಕೊಡುಗೆಯಲ್ಲಿ ಮೊದಲ 100 ಜಿಬಿ 10 ಎಮ್ಬಿಪಿಎಸ್ ವೇಗದ ಇಂಟರ್ನೆಟ್ನೊಂದಿಗೆ ದೊರೆಯಲಿದೆ. ನಂತರ 1 ಎಮ್ಬಿಪಿಎಸ್ನಲ್ಲಿ ಅನಿಯಮಿತ ಇಂಟರ್ನೆಟ್ ಬಳಸಬಹುದು. ಇದರಿಂದಾಗಿ ಮನೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಸಹಾಯವಾಗಲಿದೆ. ವಿಡಿಯೊ ವೀಕ್ಷಣೆ ಮತ್ತು ಆನ್ಲೈನ್ ಗೇಮಿಂಗ್ ಆಡಲು ಸಹಾಯವಾಗಲಿದೆ.

ಈ ಕೊಡುಗೆಯು ಕೇವಲ ಹೊಸ ಬಳಕೆದಾರರಿಗೆ ಮಾತ್ರವೇ ಲಭ್ಯ ಇರಲಿದೆ. ಈ ಸೇವೆ ಪಡೆಯಲು ಗ್ರಾಹಕರು ₹ 1,500 ಭದ್ರತಾ ಠೇವಣಿ ಮತ್ತು ₹ 1,000 ಇನ್ಸ್ಟಾಲೇಷನ್ ಶುಲ್ಕ ಪಾವತಿಸಬೇಕಾಗುತ್ತದೆ. ಈ ಯೋಜನೆಗಾಗಿ ಯಾವುದೇ ಸೇವಾ ಶುಲ್ಕವನ್ನು ಜಿಯೊ ವಿಧಿಸುತ್ತಿಲ್ಲ.

ಇದಕ್ಕಿಂತ ಹೆಚ್ಚಿನ ವೇಗದ ಇಂಟರ್ನೆಟ್ ಬೇಕಾದರೆ ಬಳಕೆದಾರರು ಮೈ ಜಿಯೊ ಆ್ಯಪ್ ಅಥವಾ ಇಲ್ಲವೇ, ‘ಮೈಜಿಯೊಡಾಟ್ಕಾಮ್‘ನಲ್ಲಿ ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.