ನವದೆಹಲಿ: ಜಸ್ಟ್ ಡಯಲ್ ಕಂಪನಿಯಲ್ಲಿ ನಿಯಂತ್ರಣ ಸಾಧಿಸಿರುವುದಾಗಿ ಗುರುವಾರ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (ಆರ್‌ಆರ್‌ವಿಎಲ್) ಗುರುವಾರ ಪ್ರಕಟಿಸಿದೆ. ₹ 3,497 ಕೋಟಿ ಮೊತ್ತದ ಹೂಡಿಕೆಯ ಮೂಲಕ ಜಸ್ಟ್ ಡಯಲ್‌ನಲ್ಲಿ ಶೇಕಡ 40ಕ್ಕೂ ಹೆಚ್ಚು ಷೇರುಗಳನ್ನು ಖರೀದಿಸುತ್ತಿರುವುದಾಗಿ ಜುಲೈನಲ್ಲಿ ಆರ್‌ಆರ್‌ವಿಎಲ್ ಪ್ರಕಟಿಸಿತ್ತು.

ಸೆಬಿ ಸ್ವಾಧೀನ ನಿಯಮಾವಳಿಗಳ ಅನ್ವಯ ಸೆಪ್ಟೆಂಬರ್ 1, 2021ರಿಂದ ಜಸ್ಟ್ ಡಯಲ್ ಮೇಲೆ ಆರ್‌ಆರ್‌ವಿಎಲ್ ನಿಯಂತ್ರಣ ಹೊಂದಿದೆ.

ಆರ್‌ಆರ್‌ವಿಎಲ್ 2021ರ ಜುಲೈ 20ರಂದು ಜಸ್ಟ್ ಡಯಲ್‌ನ ₹ 10 ಮುಖಬೆಲೆಯ 1.31 ಕೋಟಿ ಈಕ್ವಿಟಿ ಷೇರುಗಳನ್ನು ₹ 1,020 ನೀಡಿ ಖರೀದಿಸಿತ್ತು. ಜಸ್ಟ್ ಡಯಲ್ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ವಿಎಸ್ಎಸ್ ಮಣಿ ಅವರಿಂದ ಆರಂಭಿಕ ಒಪ್ಪಿತ ಶೇಕಡ 15.63ರಷ್ಟು ಷೇರುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು.

ಸೆಪ್ಟೆಂಬರ್ 1ರಂದು ಜಸ್ಟ್ ಡಯಲ್ ₹ 10 ಮುಖಬೆಲೆಯ 2.12 ಕೋಟಿ ಈಕ್ವಿಟಿ ಷೇರುಗಳಿಗೆ (ಶೇ 25.35) ಪ್ರತಿ ಷೇರಿಗೆ ₹ 1,022.25 ನೀಡಿ ಖರೀದಿಸಲಾಗಿದೆ. ಈ ಮೂಲಕ ಒಟ್ಟು ಶೇಕಡ 40.90ರಷ್ಟು ಷೇರುಗಳನ್ನು ಆರ್‌ಆರ್‌ವಿಎಲ್ ಸ್ವಾಧೀನ ಪಡಿಸಿಕೊಂಡಿದೆ.

ಜಸ್ಟ್ ಡಯಲ್ ತನ್ನ ವೆಬ್‌ಸೈಟ್, ಮೊಬೈಲ್ ಆ್ಯಪ್‌ಗಳು ಹಾಗೂ ಟೆಲಿಫೋನ್ ಮೂಲಕ ಇ–ಕಾಮರ್ಸ್, ಸ್ಥಳೀಯ ಮಾಹಿತಿಗಳನ್ನು ಒದಗಿಸುವ ಸೇವೆ ನೀಡುತ್ತಿದೆ. ಕೊಳಾಯಿ ಕೆಲಸಗಾರರಿಂದ ಹಿಡಿದು ಹೊಟೇಲ್‌ನ ವರೆಗೂ ಸ್ಥಳೀಯ ಮಾಹಿತಿಗಳನ್ನು 8888888888 ಸಂಖ್ಯೆಗೆ ಕರೆ ಮಾಡುವ ಮೂಲಕ ಪಡೆಯಬಹುದಾಗಿದೆ.

ಜಸ್ಟ್ ಡಯಲ್‌ನ ಇತರೆ ಷೇರುದಾರರಿಂದ ಶೇಕಡ 26ರಷ್ಟು ಷೇರುಗಳನ್ನು ಆರ್‌ಆರ್‌ವಿಎಲ್ ಮುಕ್ತ ಕೊಡುಗೆ ಮೂಲಕ ಖರೀದಿಸಲು ಉದ್ದೇಶಿಸಿದೆ.

ರಿಲಯನ್ಸ್ ಸಮೂಹವು ಡಿಜಿಟಲ್ ಜಗತ್ತಿನಲ್ಲಿ ತನ್ನ ಜಾಲವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಭಾಗವಾಗಿ ಜಸ್ಟ್ ಡಯಲ್ ಕಂಪನಿಯ ಷೇರುಗಳನ್ನು ಖರೀದಿಸಿದೆ. ನೆಟ್‌ಮೆಡ್ಸ್ (ಶೇ 60) , ಅರ್ಬನ್ ಲ್ಯಾಡರ್‌ನಂತಹ ಕಂಪನಿಗಳಲ್ಲಿಯೂ ರಿಲಯನ್ಸ್ ಹೂಡಿಕೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.