ಮುಂಬೈ: ‘ಮಹಾಭಾರತದ ದ್ರೌಪದಿ ಸ್ವಯಂವರದಲ್ಲಿ ಸಭಾಂಗಣದ ಗದ್ದಲ, ತಿರುಗುವ ಚಕ್ರದ ನಡುವೆಯೂ ಅರ್ಜುನ ಗಿಳಿಯ ಕಣ್ಣಿಗೆ ಗುರಿ ಇಟ್ಟು ಬಾಣ ಬಿಟ್ಟಂತೆ ಕೇಂದ್ರೀಯ ಬ್ಯಾಂಕ್ ಕೂಡಾ ಎಲ್ಲಾ ಅಡೆತಡೆಗಳ ನಡುವೆ ಹಣದುಬ್ಬರ ತಡೆಗೆ ತನ್ನ ಗಮನ ಕೇಂದ್ರೀಕರಿಸಿದೆ’ ಎಂದು ಶಕ್ತಿಕಾಂತ್ ದಾಸ್ ಹೇಳಿದರು.

ಎಫ್ಐಬಿಎಸಿಯ ವಾರ್ಷಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಗೃಹ ಬಳಕೆ ವಸ್ತುಗಳ ಹಣದುಬ್ಬರಕ್ಕೆ ಕಡಿವಾಣ ಬಿದ್ದಿರುವ ಲಕ್ಷಣಗಳಿವೆ. ಮುಖ್ಯವಾಗಿ ಹಣದುಬ್ಬರವು ಆಗಾಗ ಮರುಕಳಿಸುವ ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಆಗುತ್ತವೆ’ ಎಂದಿದ್ದಾರೆ.

‘ಸದ್ಯ ಜಗತ್ತಿನ ಇತರ ಆರ್ಥಿಕತೆಯ ಕರೆನ್ಸಿಗಳಿಗೆ ಹೋಲಿಸಿದಲ್ಲಿ ರೂಪಾಯಿಯ ಚಂಚಲತೆ ಕ್ಷೀಣಿಸಿದೆ. ರೂಪಾಯಿ ಮೌಲ್ಯವು ಅಮೆರಿಕ ಡಾಲರ್ ಎದುರು ಸರ್ವಕಾಲಿಕ ಕನಿಷ್ಠ ₹83.35ಕ್ಕೆ ಸೋಮವಾರ ಅಂತಿಮಗೊಂಡಿತ್ತು. ಆದರೆ ಮಂಗಳವಾರ ಮತ್ತೆ ಚೇತರಿಕೆಗೊಂಡಿದೆ. ಡಾಲರ್ ಭಾರತದ ರೂಪಾಯಿ ಕಡಿಮೆ ಏರಿಳಿತ ಹೊಂದಿದೆ’ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

‘ಹಣದುಬ್ಬರವನ್ನು ಶೇ 4ಕ್ಕೆ ತಗ್ಗಿಸುವ ಗುರಿಯನ್ನು ಆರ್ಬಿಐ ಹೊಂದಿದೆ. ಆಹಾರ ಪದಾರ್ಥಗಳ ಹಣ ದುಬ್ಬರ ನಿರಂತರವಾಗಿ ಮುಂದುವರಿದಿದ್ದರಿಂದ ಕಳೆದ ಅಕ್ಟೋಬರ್ನಲ್ಲಿ ಇದು ಶೇ 4.9ರಷ್ಟಿತ್ತು. ವಿತ್ತೀಯ ನೀತಿಯ ಉದಯೋನ್ಮುಖ ನೀತಿಗಳ ಕುರಿತು ಬ್ಯಾಂಕ್ ಎಚ್ಚರಿಕೆಯಿಂದ ಇರುತ್ತದೆ’ ಎಂದು ದಾಸ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.