ನವದೆಹಲಿ : ಅರ್ಜಾಸ್ ಸ್ಟೀಲ್ ಪ್ರೈವೆಟ್ ಲಿಮಿಟೆಡ್‌ನಲ್ಲಿ ಶೇ 80ರಷ್ಟು ಷೇರನ್ನು ಖರೀದಿಸಲು ಸಂಡೂರ್ ಮ್ಯಾಂಗನೀಸ್ ಮತ್ತು ಕಬ್ಬಿಣದ ಅದಿರು ಲಿಮಿಟೆಡ್‌ನ (ಸ್ಮಯೋರ್) ಮಂಡಳಿ ಅನುಮೋದನೆ ನೀಡಿದೆ.

ಈ ಒಪ್ಪಂದದ ಹಣಕಾಸಿನ ವಿವರವನ್ನು ಕಂಪನಿ ಬಹಿರಂಗಪಡಿಸಿಲ್ಲ. ಆದರೆ, ಅರ್ಜಾಸ್ ಸ್ಟೀಲ್ ಪ್ರೈವೇಟ್ ಲಿಮಿಟೆಡ್‌ನ (ಎಎಸ್‌ಪಿಎಲ್) ಮೌಲ್ಯ ₹3 ಸಾವಿರ ಕೋಟಿಯಷ್ಟಾಗಿದೆ.

ಎಎಸ್‌ಪಿಎಲ್‌ನ ಷೇರನ್ನು ಖರೀದಿಸುವ ಮೂಲಕ ವ್ಯವಹಾರ ಸ್ವಾಧೀನಕ್ಕೆ ನಿರ್ದೇಶಕರ ಮಂಡಳಿಯು ಅನುಮೋದನೆ ನೀಡಿದೆ. ಈ ಮೂಲಕ ಷೇರು ಖರೀದಿ ಒಪ್ಪಂದಕ್ಕೆ ಪ್ರವೇಶಿಸಿದೆ ಎಂದು ಕಂಪನಿ ಷೇರುಪೇಟೆಗೆ ತಿಳಿಸಿದೆ.

ಹೆಚ್ಚುವರಿಯಾಗಿ, ಎಎಸ್‌ಪಿಎಲ್‌ನಲ್ಲಿ ಶೇ19.12ರಷ್ಟು ಪಾಲನ್ನು ಸ್ಮಯೋರ್‌ನ ಪ್ರವರ್ತಕರಾದ ಬಹಿರ್ಜಿ ಎ ಘೋರ್ಪಡೆ ಒಡೆತನದ ಬಿಎಜಿ ಹೋಲ್ಡಿಂಗ್ಸ್ ಪ್ರೈವೆಟ್ ಲಿಮಿಟೆಡ್ ಸ್ವಾಧೀನಪಡಿಸಿಕೊಳ್ಳಲಿದೆ. ಷೇರು ಖರೀದಿ ಒಪ್ಪಂದವು ಏಳು ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.