ನವದೆಹಲಿ: ಕಂಪನಿಯ ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಹೋಮ್ ಫೈನಾನ್ಸ್ (ಆರ್‌ಎಚ್‌ಎಫ್‌ಎಲ್), ಉದ್ಯಮಿ ಅನಿಲ್ ಅಂಬಾನಿ ಮತ್ತು ಇತರ ಮೂವರನ್ನು ಸಾಲಪತ್ರ ಮಾರುಕಟ್ಟೆಯಿಂದ ನಿಷೇಧಿಸಿರುವುದಾಗಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ತಿಳಿಸಿದೆ.

ಅಮಿತ್ ಬಾಪ್ನಾ, ರವೀಂದ್ರ ಸುಧಾಕರ್ ಮತ್ತು ಪಿಂಕೇಶ್ ಆರ್. ಶಾ ಅವರು ನಿಷೇಧಿಕ್ಕೆ ಒಳಗಾಗಿರುವ ಇನ್ನುಳಿದ ಮೂವರಾಗಿದ್ದಾರೆ.

ಸೆಬಿಯಲ್ಲಿ ನೋಂದಾಯಿತ ಯಾವುದೇ ಮಧ್ಯವರ್ತಿಗಳ ಜೊತೆವ್ಯವಹರಿಸುವಂತಿಲ್ಲ. ಅಲ್ಲದೆ, ಸಾರ್ವಜನಿಕರಿಂದ ಹಣ ಸಂಗ್ರಹಿಸುವ ಉದ್ದೇಶ ಇಟ್ಟುಕೊಂಡಿರುವ ಯಾವುದೇ ಸಾರ್ವಜನಿಕ ಕಂಪನಿ ಅಥವಾ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರು/ಪ್ರವರ್ತಕರೊಂದಿಗೆತನ್ನ ಮುಂದಿನ ಆದೇಶದವರೆಗೆ ವ್ಯವಹರಿಸುವಂತೆ ಇಲ್ಲ ಎಂದು ಮಧ್ಯಂತರ ಆದೇಶದಲ್ಲಿ ಸೆಬಿ ತಿಳಿಸಿದೆ.

2018–19ರಲ್ಲಿ ರಿಲಯನ್ಸ್ ಹೋಮ್ ಫೈನಾನ್ಸ್‌ನಿಂದ ಹಲವು ಸಂಸ್ಥೆಗಳಿಗೆ ಯಾವ ರೀತಿಯಲ್ಲಿ ಸಾಲ ನೀಡಲಾಗಿದೆ ಎನ್ನುವ ಕುರಿತು ಸೆಬಿ ತನಿಖೆ ನಡೆಸುತ್ತಿದೆ.

ಕಂಪನಿಯು ಸಾಮಾನ್ಯ ಉದ್ದೇಶದ ಕಾರ್ಪೊರೇಟ್ ಸಾಲದ ಅಡಿಯಲ್ಲಿ ನೀಡಿರುವ ಸಾಲದ ಮೊತ್ತವು 2018ರ ಮಾರ್ಚ್ 31ರಂದು ₹ 900 ಕೋಟಿ ಇತ್ತು. ಇದು 2019ರ ಮಾರ್ಚ್ 31ಕ್ಕೆ ₹ 7,900 ಕೋಟಿಗಳಿಗೆ ಭಾರಿ ಏರಿಕೆ ಕಂಡಿದೆ ಎಂದು ಸೆಬಿ ತನ್ನ ಆದೇಶದಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.