ಬೆಂಗಳೂರು: ದೇಶದಲ್ಲಿ ಇಂಧನ ಬಳಕೆಯು ಅಕ್ಟೋಬರ್‌ನಲ್ಲಿ ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ಸೋಮವಾರ ತಿಳಿಸಿವೆ.

ಸೆಪ್ಟೆಂಬರ್‌ನಲ್ಲಿ 1.82 ಕೋಟಿ ಟನ್‌ನಷ್ಟು ಇಂಧನ ಮಾರಾಟ ಆಗಿತ್ತು. ಅಕ್ಟೋಬರ್‌ನಲ್ಲಿ 1.92 ಕೋಟಿ ಟನ್‌ನಷ್ಟು ಮಾರಾಟ ಆಗಿದ್ದು, ಶೇ 5.5ರಷ್ಟು ಹೆಚ್ಚಳ ಆಗಿದೆ ಎಂದು ಪೆಟ್ರೋಲಿಯಂ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಘಟಕ (ಪಿಪಿಎಸಿ) ಮಾಹಿತಿ ನೀಡಿದೆ.

ಪೆಟ್ರೋಲ್ ಮಾರಾಟವು ಅಕ್ಟೋಬರ್‌ನಲ್ಲಿ ಶೇ 2.6ರಷ್ಟು ಹೆಚ್ಚಾಗಿ 31.4 ಲಕ್ಷ ಟನ್‌ಗೆ ತಲಪಿದೆ. ಡೀಸೆಲ್ ಮಾರಾಟವು ಶೇ 17ರಷ್ಟು ಹೆಚ್ಚಾಗಿ 76.3 ಲಕ್ಷ ಟನ್‌ನಷ್ಟು ಆಗಿದೆ ಪಿಪಿಎಸಿ ತಿಳಿಸಿದೆ.

ಹಬ್ಬದ ಋತುವು ದೇಶದಲ್ಲಿ ಇಂಧನ ಬಳಕೆಯನ್ನು ಹೆಚ್ಚಿಸಿದೆ. ಚಳಿಗಾಲ ಆರಂಭ ಆಗಿರುವುದರಿಂದ ನಿರ್ಮಾಣ ಚಟುವಟಿಕೆಗಳು ಹೆಚ್ಚಾಗಿರುವುದು ಮತ್ತು ಮೂಲಸೌಕರ್ಯ ಯೋಜನೆಗಳಿಗೆ ವೇಗ ದೊರೆತಿರುವುದು ಸಹ ಇಂಧನ ಬಳಕೆ ಹೆಚ್ಚಾಗುವಂತೆ ಮಾಡಿದೆ ಎಂದು ಕೇಪ್ಲರ್ ಸಂಸ್ಥೆಯ ವಿಶ್ಲೇಷಕ ವಿಕ್ಟರ್ ಕಟೊನಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.