ನವದೆಹಲಿ: ದೇಶದ ಜನಪ್ರಿಯ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ವೊಡಾಫೋನ್ ಐಡಿಯಾ ‘ವಿ’ ಇದೀಗ ತನ್ನ ಪೋಸ್ಟ್ಪೇಯ್ಡ್ ಗ್ರಾಹಕರಿಗಾಗಿ ಹೊಸ Vi Max ಯೋಜನೆಗಳನ್ನು ಘೋಷಿಸಿದೆ.

ಹೊಸ Vi Max ಯೋಜನೆಗಳು ಈವರೆಗೆ ಲಭ್ಯವಿದ್ದ RedX ಯೋಜನೆಗಳ ದರದಲ್ಲೇ ಸಿಗಲಿವೆ ಎಂದು ಕಂಪನಿ ತಿಳಿಸಿದೆ.

ಕಂಪನಿಯು ನಾಲ್ಕು ಹೊಸ ಯೋಜನೆಗಳನ್ನು ಪರಿಚಯಿಸಿದೆ. ₹401, ₹501, ₹701 ಮತ್ತು ರೆಡ್ಎಕ್ಸ್ ₹1101 ದರವನ್ನು ನಿಗದಿಪಡಿಸಿದೆ.

ಪೋಸ್ಟ್ಪೇಯ್ಡ್ ಗ್ರಾಹಕರು ತಿಂಗಳಿಗೆ 3000 ಎಸ್ಎಂಎಸ್, Sony Liv, Amazon Prime, Disney+ Hotstar ಮತ್ತು Vi Movies ಮತ್ತು TVಗೆ ಉಚಿತ ಚಂದಾದಾರಿಕೆ ಪಡೆಯಬಹುದು. Vi Max ಪ್ಲಾನ್ ಚಂದಾದಾರರು Vi ಅಪ್ಲಿಕೇಶನ್ನಲ್ಲಿ Vi Games ಮೂಲಕ ಜಾಹೀರಾತು ಮುಕ್ತ ಸಂಗೀತ ಮತ್ತು 1000+ ಗೇಮ್ಗಳಿಗೆ ಪ್ರವೇಶ ಪಡೆಯಬಹುದು ಎಂದು ಕಂಪನಿ ತಿಳಿಸಿದೆ.

ಈ ಎಲ್ಲ ಪ್ರಯೋಜನಗಳ ಹೊರತಾಗಿ ಗ್ರಾಹಕರು ಮೇಕ್ಮೈಟ್ರಿಪ್ ಮೂಲಕ ವಿಮಾನ ಮತ್ತು ಹೋಟೆಲ್ ಬುಕಿಂಗ್ಸ್ನಲ್ಲಿ ರಿಯಾಯಿತಿಗಳನ್ನು ಪಡೆಯಬಹುದು.

ವೊಡಾಫೋನ್ ಐಡಿಯಾ ಪೋಸ್ಟ್ಪೇಯ್ಡ್ ಗ್ರಾಹಕರು ಹೆಚ್ಚುವರಿ ಡೇಟಾ ಜೊತೆಗೆ ಸೋನಿಲೈವ್ ಪ್ರೀಮಿಯಂ ಆಡ್-ಆನ್ ಡೇಟಾ ಪ್ಯಾಕ್ ಆಯ್ದುಕೊಳ್ಳುವ ಅವಕಾಶವನ್ನು ಒದಗಿಸಲಾಗಿದ್ದು, ₹401ಕ್ಕೆ ಸೋನಿಲೈವ್ ಪ್ರೀಮಿಯಂ ಓಟಿಟಿ ಮತ್ತು 50GB ಡೇಟಾದ ಹೊಸ ಕೊಡುಗೆ ಘೋಷಿಸಿದೆ.

₹501ಕ್ಕೆ ಸೋನಿಲೈವ್ ಪ್ರೀಮಿಯಂ ಓಟಿಟಿ ಮತ್ತು 90GB ಡೇಟಾ ಒದಗಿಸುತ್ತಿದೆ. ₹701 ಹಾಗೂ ₹1101ಕ್ಕೆ ಸೋನಿಲೈವ್ ಪ್ರೀಮಿಯಂ ಓಟಿಟಿ ಜತೆಗೆ ಅನ್ಲಿಮಿಟೆಡ್ ಡೇಟಾದ ಹೊಸ ಕೊಡುಗೆಗಳನ್ನು ಘೋಷಿಸಿದೆ.

‘ವಿ ಫ್ಯಾಮಿಲಿ ಪ್ಲ್ಯಾನ್ಸ್’ ಅಡಿಯಲ್ಲಿ ₹999ಕ್ಕೆ 4 ಸಂಪರ್ಕಗಳನ್ನು ಮತ್ತು ₹1149ಕ್ಕೆ 5 ಸಂಪರ್ಕಗಳು ಪಡೆಯಬಹುದು. ಜತೆಗೆ ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ+ಹಾಟ್ಸ್ಟಾರ್ನೊಂದಿಗೆ ಚಂದಾದಾರಿಕೆ ಪಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.