ನವದೆಹಲಿ: ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾವು (ಎಸ್‌ಪಿಎನ್‌ಐ) ಒಪ್ಪಂದ ರದ್ದುಪಡಿಸಿರುವುದನ್ನು ಪ್ರಶ್ನಿಸಿ ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ ಬುಧವಾರ, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಮೊರೆ ಹೋಗಿದೆ.

ಒಪ್ಪಂದವನ್ನು ಅನುಷ್ಠಾನಗೊಳಿಸುವಂತೆ ಸೋನಿ ಕಂಪನಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ನ್ಯಾಯಮಂಡಳಿಗೆ ಕೋರಿದೆ.

ಜೀ ಕಂಪನಿಯು ಒಪ್ಪಂದ ಉಲ್ಲಂಘಿಸಿದೆ. ಹಾಗಾಗಿ, ₹748.5 ಕೋಟಿ ಶುಲ್ಕ ಪಾವತಿಸಬೇಕು ಎಂದು ಸೋನಿ ಕಂಪನಿಯು ನೋಟಿಸ್ ನೀಡಿತ್ತು.

ಇದನ್ನು ಪ್ರಶ್ನಿಸಿ ಜೀ ಕಂಪನಿಯು ಸಿಂಗಪುರದ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದ ಮೆಟ್ಟಿಲನ್ನೂ ಹತ್ತಿದೆ ಎಂದು ಮೂಲಗಳು ತಿಳಿಸಿವೆ.

2021ರ ಡಿಸೆಂಬರ್ 22ರಂದು ₹83 ಸಾವಿರ ಕೋಟಿ ಮೊತ್ತದ ವಿಲೀನ ಒಪ್ಪಂದಕ್ಕೆ ಎರಡೂ ಕಂಪನಿಗಳು ಒಪ್ಪಿಗೆ ನೀಡಿದ್ದವು. ಈ ಒಪ್ಪಂದವನ್ನು ಸೋನಿ ಕೊನೆಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.