ಷೇರುಪೇಟೆ ಸೂಚ್ಯಂಕಗಳ ಓಟಕ್ಕೆ ತಡೆ
ಆಗಸ್ಟ್ 2ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಕುಸಿತ ದಾಖಲಿಸಿವೆ. 80981 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.43ರಷ್ಟು ಇಳಿಕೆಯಾಗಿದೆ. 24717 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.47ರಷ್ಟು ತಗ್ಗಿದೆ. ಅಮೆರಿಕದ ಮಾಹಿತಿ ತಂತ್ರಜ್ಞಾನ ಕಂಪನಿಗಳ ಫಲಿತಾಂಶಗಳಲ್ಲಿ ಹಿನ್ನಡೆ ಅಮೆರಿಕದಲ್ಲಿ ಉದ್ಯೋಗ ಕೊರತೆ ಹೆಚ್ಚಳ ಚೀನಾದಲ್ಲಿ ಪ್ರಗತಿಯ ವೇಗ ಕುಂಠಿತ ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡು ಬಂದ ಕುಸಿತ ಅಮೆರಿಕ ಫೆಡರಲ್ ಬ್ಯಾಂಕ್‌ನ ಬಡ್ಡಿದರದಲ್ಲಿ ಯಥಾಸ್ಥಿತಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಹೂಡಿಕೆ ಹಿಂತೆಗೆತ ಸೇರಿ ಹಲವು ಅಂಶಗಳು ಸೂಚ್ಯಂಕಗಳ ಮೇಲೆ ಪರಿಣಾಮ ಬೀರಿವೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ರಿಯಲ್ ಎಸ್ಟೇಟ್ ಶೇ 3.76 ನಿಫ್ಟಿ ಐ.ಟಿ ಶೇ 3.04 ನಿಫ್ಟಿ ಆಟೊ ಶೇ 2.04 ಎಫ್‌ಎಂಸಿಜಿ ಶೇ 1.57 ಲೋಹ ಶೇ 1.16 ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 1.01ರಷ್ಟು ಕುಸಿದಿವೆ. ನಿಫ್ಟಿ ಎನರ್ಜಿ ಶೇ 2.53 ಫಾರ್ಮಾ ಶೇ 1.39 ಮಾಧ್ಯಮ ಶೇ 1.19 ಅನಿಲ ಮತ್ತು ತೈಲ ಶೇ 0.68 ಫೈನಾನ್ಸ್ ಶೇ 0.21 ಮತ್ತು ನಿಫ್ಟಿ ಬ್ಯಾಂಕ್ ಶೇ 0.11ರಷ್ಟು ಹೆಚ್ಚಳ ಕಂಡಿವೆ. ಏರಿಕೆ-ಇಳಿಕೆ: ನಿಫ್ಟಿಯಲ್ಲಿ ಎನ್‌ಟಿಪಿಸಿ ಶೇ 5.95 ಬಿಪಿಸಿಎಲ್ ಶೇ 5.89 ಏಷ್ಯನ್ ಪೇಂಟ್ಸ್ ಶೇ 5.31 ಪವರ್ ಗ್ರಿಡ್ ಶೇ 4.01 ಡಿವೀಸ್ ಲ್ಯಾಬ್ಸ್ ಶೇ 3.33 ಕೋಲ್ ಇಂಡಿಯಾ ಶೇ 3.03 ಅದಾನಿ ಪೋರ್ಟ್ಸ್ ಶೇ 2.97 ಅದಾನಿ ಎಂಟರ್ ಪ್ರೈಸಸ್ ಶೇ 2.71 ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 2.52 ಬಜಾಜ್ ಫಿನ್‌ಸರ್ವ್ ಶೇ 2.46 ಶ್ರೀರಾಮ್ ಫೈನಾನ್ಸ್ ಶೇ 2.05 ಮತ್ತು ಬಜಾಜ್ ಆಟೊ ಶೇ 1.33ರಷ್ಟು ಏರಿಕೆ ಕಂಡಿವೆ. ಐಷರ್ ಮೋಟರ್ಸ್ ಶೇ 5.63 ಎಲ್‌ಟಿಐ ಮೈಂಡ್ ಟ್ರೀ ಶೇ 5.24 ಗ್ರಾಸಿಮ್ ಇಂಡಸ್ಟ್ರೀಸ್ ಶೇ 5.21 ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 4.51 ವಿಪ್ರೊ ಶೇ 4.34 ಹೀರೊ ಮೋಟೊಕಾರ್ಪ್ ಶೇ 3.4 ಸಿಪ್ಲಾ ಶೇ 3.23 ಇನ್ಫೊಸಿಸ್ ಶೇ 3.22 ಹಿಂಡಾಲ್ಕೋ ಇಂಡಸ್ಟ್ರೀಸ್ ಶೇ 3.06 ಐಟಿಸಿ ಶೇ 2.71 ಟಾಟಾ ಸ್ಟೀಲ್ ಶೇ 2.58 ಟಿಸಿಎಸ್ ಶೇ 2.35ರಷ್ಟು ಕುಸಿದಿವೆ. ಮುನ್ನೋಟ: ಈ ವಾರ ಏರ್‌ಟೆಲ್ ಒಎನ್‌ಜಿಸಿ ಬಿಇಎಂಎಲ್ ವಿಆರ್‌ಎಲ್ ಲಾಜಿಸ್ಟಿಕ್ಸ್ ಎಬಿಬಿ ಇಂಡಿಯಾ ಹನಿವೆಲ್ ಆಟೊಮೇಷನ್ ಗ್ರಾಫೈಟ್ ಇಂಡಿಯಾ ರೇಮಂಡ್ ಪಿಡಿಲೈಟ್ ಇಂಡಸ್ಟ್ರೀಸ್ ಎನ್‌ಎಚ್‌ಪಿಸಿ ಬಾಷ್ ಟಿವಿಎಸ್ ಮೋಟರ್ ಕಂಪನಿ ಇಂಡಿಗೊ ಪೇಂಟ್ಸ್ ಎಂಆರ್‌ಎಫ್ ಆಯಿಲ್ ಇಂಡಿಯಾ ಬಯೋಕಾನ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ಕಂಪನಿಗಳ ತ್ರೈಮಾಸಿಕ ಫಲಿತಾಂಶ ಆಧರಿಸಿ ಕೆಲ ಕಂಪನಿಗಳ ಷೇರುಗಳು ಮಾರುಕಟ್ಟೆಯಲ್ಲಿ ಏರಿಳಿತ ಕಾಣಲಿವೆ. ಉಳಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿನ ಪ್ರಭಾವವು ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳ ಮೇಲೆ ಇರಲಿದೆ.