ಮ್ಯೂಚುವಲ್ ಫಂಡ್ ಆಯ್ಕೆ ಮಾಡುವಾಗ ಪ್ರಮುಖವಾಗಿ ಪರಿಗಣಿಸಬೇಕಾದ ಅಂಶಗಳಲ್ಲಿ ವೆಚ್ಚ ಅನುಪಾತ (ಎಕ್ಸ್ಪೆನ್ಸ್ ರೇಷಿಯೊ) ಪ್ರಮುಖವಾದುದು. ವೆಚ್ಚ ಅನುಪಾತ ಅಂದರೆ ಮ್ಯೂಚುವಲ್ ಫಂಡ್ ನಿರ್ವಹಣೆಗೆ ಪಡೆಯುವ ಕಮಿಷನ್.

ವೆಚ್ಚ ಅನುಪಾತವನ್ನು ಮ್ಯೂಚುವಲ್ ಫಂಡ್ ಕಂಪನಿಗಳು ಹೇಗೆ ಲೆಕ್ಕಾಚಾರ ಮಾಡುತ್ತವೆ. ವೆಚ್ಚ ಅನುಪಾತ ಎಷ್ಟಿದ್ದರೆ ಆ ಫಂಡ್ ಅನ್ನು ಹೂಡಿಕೆಗೆ ಪರಿಗಣಿಸಬಹುದು. ಡೈರೆಕ್ಟ್ ಮ್ಯೂಚುವಲ್ ಫಂಡ್ನಲ್ಲಿ ವೆಚ್ಚ ಅನುಪಾತ ಜಾಸ್ತಿ ಇರುತ್ತದೆಯೇ? ರೆಗ್ಯೂಲರ್ ಮ್ಯುಚುವಲ್ ಫಂಡ್ನಲ್ಲಿ ವೆಚ್ಚ ಅನುಪಾತ ದುಬಾರಿಯೋ? ಬನ್ನಿ ಇದರ ಬಗ್ಗೆ ವಿವರವಾಗಿ ತಿಳಿಯೋಣ.

ವೆಚ್ಚ ಅನುಪಾತ/ ಕಮಿಷನ್: ಮ್ಯೂಚುವಲ್ ಫಂಡ್ ನಿರ್ವಹಣೆಗೆ ಮ್ಯೂಚುವಲ್ ಫಂಡ್ ಸಂಸ್ಥೆಯು ಅನೇಕ ವೆಚ್ಚಗಳನ್ನು ಮಾಡಬೇಕಾಗುತ್ತದೆ. ನೊಂದಣಿ ಶುಲ್ಕ, ನಿರ್ವಹಣಾ ಶುಲ್ಕ, ಏಜೆಂಟ್ ಶುಲ್ಕ, ಲೆಕ್ಕ ನಿರ್ವಹಣೆ ಶುಲ್ಕ, ಜಾಹಿರಾತು ಶುಲ್ಕ ಹೀಗೆ ಹತ್ತಾರು ಖರ್ಚುಗಳನ್ನು ಫಂಡ್ ಹೌಸ್ ಹೊರಬೇಕಾಗುತ್ತದೆ. ಈ ವೆಚ್ಚಗಳನ್ನು
ನಿಭಾಯಿಸಲು ಹೂಡಿಕೆದಾರರಿಂದ ಪಡೆಯುವ ವಾರ್ಷಿಕ ಶುಲ್ಕವೇ ವೆಚ್ಚ ಅನುಪಾತ.

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಪ್ರತಿ ಮಾದರಿಯ ಮ್ಯೂಚುವಲ್ ಫಂಡ್ಗೂ ಗರಿಷ್ಠ ವೆಚ್ಚದ ಮಿತಿಯನ್ನು ಗೊತ್ತುಪಡಿಸಿದೆ. ಇಂಡೆಕ್ಸ್ ಫಂಡ್ಗೆ ಶೇ 1.5, ಡೆಟ್ ಫಂಡ್ಗೆ ಶೇ 2.25 ಮತ್ತು ಈಕ್ವಿಟಿ ಫಂಡ್ಗೆ ಶೇ 2.5ರ ವರೆಗೆ ಶುಲ್ಕ ವಿಧಿಸಬಹುದು. ವೆಚ್ಚ ಅನುಪಾತ ಎಷ್ಟು ಕಡಿಮೆಯೋ ಹೂಡಿಕೆದಾರನಿಗೆ ಅಷ್ಟರ ಮಟ್ಟಿಗೆ ಲಾಭವಾಗುತ್ತದೆ.

ಉದಾಹರಣೆಗೆ ಮ್ಯೂಚುವಲ್ ಫಂಡ್ ಕಂಪನಿಯು ಶೇ 2.50ರಷ್ಟು ಎಕ್ಸ್ಪೆನ್ಸ್ ರೇಷಿಯೊ (ಕಮಿಷನ್) ಪಡೆಯುತ್ತದೆ ಎಂದುಕೊಳ್ಳೋಣ. ಅದರಂತೆ ನೀವು ಹೂಡಿಕೆ ಮಾಡುವ ಪ್ರತಿ ₹1 ಲಕ್ಷಕ್ಕೆ ಮ್ಯೂಚುವಲ್ ಫಂಡ್ ಕಂಪನಿಯು ನಿರ್ವಹಣೆ ಶುಲ್ಕವಾಗಿ ₹2,500 ಪಡೆಯುತ್ತದೆ. ಮ್ಯೂಚುವಲ್ ಫಂಡ್ ಕಂಪನಿಗಳು ತ್ರೈಮಾಸಿಕ, ಅರೆ ವಾರ್ಷಿಕ ಅಥವಾ ವಾರ್ಷಿಕ ಲೆಕ್ಕಾಚಾರದಲ್ಲಿ ನಿರ್ವಹಣೆ ಶುಲ್ಕ ಪಡೆಯುವುದಿಲ್ಲ. ಪ್ರತಿದಿನ ಶುಲ್ಕ ತೆಗೆದುಕೊಳ್ಳುತ್ತವೆ.

₹2,500 ನಿರ್ವಹಣೆ ಶುಲ್ಕವನ್ನು ₹365ರೊಂದಿಗೆ ಭಾಗಿಸಿದರೆ (₹2,500/365= ₹6.85) ಪ್ರತಿದಿನ ₹6.85 ಶುಲ್ಕವಾಗಿ ಪಡೆಯುತ್ತವೆ. ಹೂಡಿಕೆ ಮೇಲೆ ಗಳಿಕೆ ಬರಲಿ ಬಿಡಲಿ ಎಷ್ಟು ದಿನ ಹೂಡಿಕೆ ಮಾಡಿರುತ್ತಿರೋ ಅಲ್ಲಿಯತನಕ ಪ್ರತಿದಿನ ₹6.85 ಶುಲ್ಕವನ್ನು ಮ್ಯೂಚುವಲ್ ಫಂಡ್ ಕಂಪನಿ ಮುರಿದುಕೊಳ್ಳುತ್ತದೆ. ಹಾಗಾಗಿ,
ಮ್ಯೂಚುವಲ್ ಫಂಡ್ ಆಯ್ಕೆ ಮಾಡಿಕೊಳ್ಳುವಾಗ ನಿರ್ದಿಷ್ಟ ಫಂಡ್ ಎಷ್ಟರ ಮಟ್ಟಿಗೆ ಲಾಭಾಂಶ ತಂದುಕೊಟ್ಟಿದೆ ಎನ್ನುವ ಅಂಶ ಪರಿಗಣಿಸುವ ಜೊತೆಗೆ, ನಿರ್ವಹಣಾ ಶುಲ್ಕ ಎಷ್ಟು ಪಡೆದುಕೊಳ್ಳುತ್ತಿದೆ ಎನ್ನುವುದನ್ನೂ ತಿಳಿದುಕೊಳ್ಳಬೇಕು. ಯಾವ ಫಂಡ್ ಉತ್ತಮವಾಗಿದ್ದು, ನಿರ್ವಹಣೆ ಶುಲ್ಕ ಕಡಿಮೆಯಿದೆ ಅದನ್ನು ಹೂಡಿಕೆಗೆ ಪರಿಗಣಿಸಬೇಕಿದೆ.

ಈ ಪಟ್ಟಿಯಲ್ಲಿ ಇರುವಂತೆ ಮೂರು ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್ಗಳ ವೆಚ್ಚ ಅನುಪಾತ ಒಂದೊಂದು ರೀತಿಯಿದೆ. ಹಾಗಾಗಿ, ಮ್ಯೂಚುಯಲ್ ಫಂಡ್ ಆಯ್ಕೆ ಮಾಡಿಕೊಳ್ಳುವಾಗ ನಿರ್ದಿಷ್ಟ ಮ್ಯೂಚುಯಲ್ ಫಂಡ್ ಎಷ್ಟು ಲಾಭ ಕೊಟ್ಟಿದೆ ಎನ್ನುವುದರ ಜೊತೆಗೆ ಎಷ್ಟು ವೆಚ್ಚ ಅನುಪಾತ ನಿಗದಿಪಡಿಸಿದೆ ಎಂಬ ಬಗ್ಗೆಯೂ ಗಮನಹರಿಸಬೇಕಿದೆ.

ಡೈರೆಕ್ಟ್ನಲ್ಲಿ ವೆಚ್ಚ ಅನುಪಾತ ಕಡಿಮೆ, ರೆಗ್ಯೂಲರ್ನಲ್ಲಿ ಜಾಸ್ತಿ:

ಮ್ಯೂಚುವಲ್ ಫಂಡ್ ಹೂಡಿಕೆಗೆ ಎರಡು ಮಾರ್ಗಗಳಿವೆ. ಒಂದನೆಯದು ಡೈರೆಕ್ಟ್ ಮತ್ತೊಂದು ರೆಗ್ಯೂಲರ್ ಮ್ಯೂಚುವಲ್ ಫಂಡ್ ಮಾರ್ಗ. ನೇರವಾಗಿ ನಾವೇ ಮ್ಯೂಚುವಲ್ ಫಂಡ್ ವೆಬ್ಸೈಟ್ ಅಥವಾ ಇನ್ವೆಸ್ಟ್ಮೆಂಟ್ ಆ್ಯಪ್ಗಳಿಗೆ ಹೋಗಿ ಮ್ಯೂಚುವಲ್ ಫಂಡ್ಗಳನ್ನು ಖರೀದಿಸೋದು ಡೈರೆಕ್ಟ್ ಮ್ಯೂಚುವಲ್ ಫಂಡ್ ಆಗುತ್ತದೆ. ಮ್ಯೂಚುವಲ್ ಫಂಡ್ ವಿತರಕರು, ಏಜೆಂಟ್ ಮತ್ತಿತರ
ಮಧ್ಯವರ್ತಿಗಳ ಸಹಾಯ ಪಡೆದು ಹೂಡಿಕೆ ಮಾಡಿದರೆ ಅದು ರೆಗ್ಯೂಲರ್ ಮ್ಯೂಚುವಲ್ ಫಂಡ್ ಆಗುತ್ತದೆ.

ಡೈರೆಕ್ಟ್ ಮ್ಯೂಚುವಲ್ ಫಂಡ್ನಲ್ಲಿ ವೆಚ್ಚ ಅನುಪಾತ ಕಡಿಮೆ. ಆದರೆ, ರೆಗ್ಯೂಲರ್ ಮ್ಯೂಚುವಲ್ ಫಂಡ್ನಲ್ಲಿ ವೆಚ್ಚ ಅನುಪಾತ ಜಾಸ್ತಿ.

ಉದಾಹರಣೆ: ಐಸಿಐಸಿಐ ಪ್ರುಡೆನ್ಶಿಯಲ್ ಬ್ಲೂಚಿಪ್ ಫಂಡ್ ಡೈರೆಕ್ಟ್ ಗ್ರೋತ್ ಪ್ಲಾನ್ನ ವೆಚ್ಚಅನುಪಾತ ಶೇ 0.9ರಷ್ಟಿದ್ದರೆ, ಐಸಿಐಸಿಐ ಪ್ರುಡೆನ್ಶಿಯಲ್ ಬ್ಲೂಚಿಪ್ ಫಂಡ್ ರೆಗ್ಯೂಲರ್ ಪ್ಲಾನ್ನ ವೆಚ್ಚ ಅನುಪಾತ ಶೇ 1.46 ರಷ್ಟಿದೆ. ಹಾಗಾಗಿ. ಡೈರೆಕ್ಟ್ ಪ್ಲಾನ್ ಮೂಲಕ ಹೂಡಿಕೆ ಮಾಡಿದರೆ ಲಾಭ ಜಾಸ್ತಿ ಸಿಗಲಿದೆ.

(ಲೇಖಕ: ಚಾರ್ಟರ್ಡ್ ಅಕೌಂಟೆಂಟ್)

ಗಳಿಕೆ ಕಂಡ ಸೂಚ್ಯಂಕಗಳು...

ಸತತ ಏಳನೇ ವಾರವೂ ಷೇರುಪೇಟೆ ಸೂಚ್ಯಂಕಗಳು ಗಳಿಕೆ ದಾಖಲಿಸಿವೆ. ಜುಲೈ 19ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಅಲ್ಪ ಮೊತ್ತದ ಹೆಚ್ಚಳ ಕಂಡಿವೆ. 80604 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.11ರಷ್ಟು ಗಳಿಸಿಕೊಂಡಿದೆ. 24530 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.12ರಷ್ಟು ಜಿಗಿದಿದೆ.

ಅಮೆರಿಕ ಚೀನಾ ವ್ಯಾಪಾರ ಬಿಕ್ಕಟ್ಟು ಮೈಕ್ರೊಸಾಫ್ಟ್ನ ಜಾಗತಿಕ ತಾಂತ್ರಿಕ ಅಡಚಣೆ ಕೇಂದ್ರ ಬಜೆಟ್ ಘೋಷಣೆಗಳ ಬಗ್ಗೆ ಕಾತುರ ಕಂಪನಿಗಳ ತ್ರೈಮಾಸಿಕ ಫಲಿತಾಂಶ ಸೇರಿ ಹಲವು ಅಂಶಗಳು ಷೇರು ಸೂಚ್ಯಂಕಗಳ ಮೇಲೆ ಪರಿಣಾಮ ಬೀರಿವೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ಮಾಧ್ಯಮ ಶೇ 5.36 ಲೋಹ ಶೇ 4.65 ಎನರ್ಜಿ ಶೇ 1.83 ಅನಿಲ ಮತ್ತು ತೈಲ ಶೇ 0.98 ಫಾರ್ಮಾ ಶೇ 0.91 ಮತ್ತು ನಿಫ್ಟಿ ವಾಹನ ವಲಯ ಶೇ 0.72ರಷ್ಟು ಕುಸಿದಿವೆ. ನಿಫ್ಟಿ ಮಾಹಿತಿ ತಂತ್ರಜ್ಞಾನ ಶೇ 2.31 ಎಫ್ಎಂಸಿಜಿ ಶೇ 2.28 ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕ ಶೇ 1.38 ಮತ್ತು ರಿಯಲ್ ಎಸ್ಟೇಟ್ ಶೇ 0.27ರಷ್ಟು ಗಳಿಸಿಕೊಂಡಿವೆ.

ಗಳಿಕೆ–ಇಳಿಕೆ: ನಿಫ್ಟಿಯಲ್ಲಿ ಎಸ್ಬಿಐ ಲೈಫ್ ಇನ್ಶೂರೆನ್ಸ್ ಕಂಪನಿ ಶೇ 5.7 ಇನ್ಫೊಸಿಸ್ ಶೇ 4.72 ಒಎನ್ಜಿಸಿ ಶೇ 4.14 ಹಿಂದುಸ್ತಾನ್ ಯೂನಿಲಿವರ್ ಶೇ 3.98 ಎಸ್ಬಿಐ ಶೇ 3.44 ಐಟಿಸಿ ಶೇ 3.33 ಟಾಟಾ ಕನ್ಸ್ಯೂಮರ್ ಶೇ 3.1 ಟಿಸಿಎಸ್ ಶೇ 2.82 ಎಚ್ಸಿಎಲ್ ಟೆಕ್ನಾಲಜೀಸ್ ಶೇ 2.18 ಮತ್ತು ಏರ್ಟೆಲ್ ಶೇ 2.14ರಷ್ಟು ಗಳಿಸಿಕೊಂಡಿವೆ.

ಟಾಟಾ ಸ್ಟೀಲ್ ಶೇ 6.49 ಜೆಎಸ್ಡಬ್ಲ್ಯು ಶೇ 4.8 ಹಿಂಡಾಲ್ಕೊ ಇಂಡಸ್ಟ್ರೀಸ್ ಶೇ 4.22 ಎನ್ಟಿಪಿಸಿ ಶೇ 3.38 ಅಲ್ಟ್ರಾಟೆಕ್ ಸಿಮೆಂಟ್ ಶೇ 3.28 ಪವರ್ಗ್ರಿಡ್ ಶೇ 3.19 ಗ್ರಾಸಿಮ್ ಇಂಡಸ್ಟ್ರೀಸ್ ಶೇ 3.15 ರಿಲಯನ್ಸ್ ಇಂಡಸ್ಟ್ರೀಸ್ ಶೇ 2.63 ಟಾಟಾ ಮೋಟರ್ಸ್ ಶೇ 2.63ರಷ್ಟು ಕುಸಿದಿವೆ. ಮುನ್ನೋಟ: ಈ ವಾರ ಫೆಡರಲ್ ಬ್ಯಾಂಕ್ ಕರ್ಣಾಟಕ ಬ್ಯಾಂಕ್ ಹಿಂದುಸ್ತಾನ್ ಯೂನಿಲಿವರ್ ಐಸಿಐಸಿಐ ಸೆಕ್ಯೂರಿಟೀಸ್ ಐಡಿಬಿಐ ಬ್ಯಾಂಕ್ ಬಜಾಜ್ ಫೈನಾನ್ಸ್ ಬಜಾಜ್ ಫಿನ್ಸರ್ವ್ ಎಲ್ ಆ್ಯಂಡ್ ಟಿ ಆಕ್ಸಿಸ್ ಬ್ಯಾಂಕ್ ಎಸ್ಬಿಐ ಲೈಫ್ ಇನ್ಶೂರೆನ್ಸ್ ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶೂರೆನ್ಸ್ ಇಂದ್ರಪ್ರಸ್ಥ ಗ್ಯಾಸ್ ಜೆಕೆ ಪೇಪರ್ ನೆಸ್ಲೆ ಇಂಡಿಯಾ ಕೆನರಾ ಬ್ಯಾಂಕ್ ವಿ ಗಾರ್ಡ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಸಾಧನೆ ವರದಿ ಪ್ರಕಟಿಸಲಿವೆ. ಜಾಗತಿಕ ವಿದ್ಯಮಾನಗಳು ಬಜೆಟ್ ಸೇರಿ ಇನ್ನಿತರ ಬೆಳವಣಿಗೆಗಳು ಷೇರುಪೇಟೆಯ ಮೇಲೆ ಪರಿಣಾಮ ಬೀರಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.