ಲಂಡನ್: ಜಾಗತಿಕವಾಗಿ ಯಶಸ್ಸು ಕಾಣುವ ನವೋದ್ಯಮ ಕಟ್ಟಲು ಪೂರಕವಾದ ವ್ಯವಸ್ಥೆ ಇರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು 23ನೆಯ ಸ್ಥಾನ ಪಡೆದಿದೆ. ಅಮೆರಿಕದ ಸಿಲಿಕಾನ್ ವ್ಯಾಲಿ ಮೊದಲ ಸ್ಥಾನದಲ್ಲಿದೆ.

ದೆಹಲಿಯು 36ನೆಯ ಸ್ಥಾನದಲ್ಲಿದೆ ಎಂದು ‘ಜಾಗತಿಕ ನವೋದ್ಯಮ ವ್ಯವಸ್ಥೆ ವರದಿ – 2021’ ಹೇಳಿದೆ. ಪ್ರವರ್ಧಮಾನಕ್ಕೆ ಬರುತ್ತಿರುವ ವ್ಯವಸ್ಥೆಗಳ ಪಟ್ಟಿಯಲ್ಲಿ ಮುಂಬೈ ಮೊದಲ ಸ್ಥಾನದಲ್ಲಿದೆ. ನವೋದ್ಯಮಗಳು ಜಾಗತಿಕ ಮಟ್ಟದಲ್ಲಿ ಯಶಸ್ಸು ಕಾಣಲು ಅಗತ್ಯವಿರುವ ವ್ಯವಸ್ಥೆಗಳು ಯಾವ ನಗರಗಳಲ್ಲಿ ಇವೆ ಎಂಬುದನ್ನು ವಿಶ್ಲೇಷಿಸಿ ಸ್ಟಾರ್ಟ್‌ಅಪ್ ಜಿನೋಮ್ ಸಂಸ್ಥೆ ಈ ವರದಿ ಸಿದ್ಧಪಡಿಸುತ್ತದೆ.

‘ಬಂಡವಾಳ ಸಂಗ್ರಹ, ಮಾಹಿತಿ ಹಾಗೂ ಇತರ ಪ್ರದೇಶಗಳ ಜೊತೆಗಿನ ಸಂಪರ್ಕದ ವಿಚಾರದಲ್ಲಿ ಸುಧಾರಣೆ ಕಂಡಿರುವ ಬೆಂಗಳೂರು 23ನೆಯ ಸ್ಥಾನ ಪಡೆದಿದೆ’ ಎಂದು ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.