ಬೆಂಗಳೂರು: ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ (ಐಐಎಂಬಿ) ‘ಎನ್.ಎಸ್. ರಾಘವನ್ ಸೆಂಟರ್ ಫಾರ್ ಎಂಟರ್‌ಪ್ರೆನ್ಯುರಲ್ ಲರ್ನಿಂಗ್ (ಎನ್‌ಎಸ್‌ಆರ್‌ಸಿಇಎಲ್) ಕೇಂದ್ರ’ವು 100 ಉದಯೋನ್ಮುಖ ಮಹಿಳಾ ಉದ್ಯಮಿಗಳನ್ನು ಮತ್ತು ಅವರ ಸ್ಟಾರ್ಟ್ಅಪ್ ಮಾದರಿಗಳನ್ನು ಅಗತ್ಯ ನೆರವು ನೀಡಲು ಆಯ್ಕೆ ಮಾಡಿದೆ.

ಈ ಉತ್ತೇಜನ ಯೋಜನೆಗೆ ಗೋಲ್ಡ್‌ಮನ್ ಸ್ಯಾಷ್, ಗ್ಲೋಬಲ್ ಬ್ಯಾಂಕ್ ಮತ್ತು ಆ್ಯಕ್ಟಿವ್ ಇನ್ವೆಸ್ಟರ್ ಇನ್ ಇಂಡಿಯಾ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗ ನೀಡಿವೆ.

ಡಬ್ಲ್ಯೂಎಸ್‌ಪಿ (ವುಮೆನ್ ಸ್ಟಾರ್ಟ್‌ಅಪ್ ಇನ್‌ಕ್ಯುಬೇಷನ್ ಪ್ರೋಗಾಂ) 2016ರಲ್ಲಿ ಯಶಸ್ವಿಯಾಗಿ ಪ್ರಾಯೋಗಿಕ ಕಾರ್ಯಕ್ರಮ ನಡೆಸಿದ್ದು, ಅದರಲ್ಲಿ 1,700 ಉದ್ಯಮಿಗಳು ಭಾಗವಹಿಸಿದ್ದರು.

ಇದೊಂದು ಬಹು ದೊಡ್ಡ ಮಹಿಳಾ ಸ್ಟಾರ್ಟ್‌ಅಪ್ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಉದ್ಯಮಿಗಳಿಗೆ ಮಾರ್ಗದರ್ಶನ, ರೋಡ್‌ಶೋ ಮತ್ತು ಕಾರ್ಯಾಗಾರಗಳನ್ನು ಆಯೋಜಿಸಲು ಬೆಂಬಲ ನೀಡಲಿದೆ. ಆಯ್ಕೆಯಾಗಿರುವ ಮಹಿಳಾ ಉದ್ಯಮಿಗಳು ತಿಂಗಳಿಗೆ ₹ 30,000 ಫೆಲೋಶಿಪ್ ಪಡೆಯುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.