ನವದೆಹಲಿ: ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ದೇಶದ ಷೇರುಪೇಟೆಗಳಲ್ಲಿ ಕರಡಿ ಕುಣಿತ ಜೋರಾಗಿದೆ. ಸತತ ಮೂರು ದಿನಗಳ ವಹಿವಾಟಿನಲ್ಲಿ ಸೂಚ್ಯಂಕಗಳು ಕುಸಿತದ ಹಾದಿ ಹಿಡಿದಿದ್ದು, ಹೂಡಿಕೆದಾರರ ಸಂಪತ್ತು ₹7.93 ಲಕ್ಷ ಕೋಟಿ ಕರಗಿದೆ.

ಮಂಗಳವಾರ ಕೂಡ ಇಸ್ರೇಲ್–ಇರಾನ್ ನಡುವಿನ ಸಂಘರ್ಷದ ಜೊತೆಗೆ ಐ.ಟಿ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಸೂಚ್ಯಂಕಗಳು ಕುಸಿತ ಕಂಡಿವೆ. ಮುಂಬೈ ಷೇರುಪೇಟೆ ಸೂಚ್ಯಂಕ 456 ಅಂಶ (ಶೇ 0.62ರಷ್ಟು) ಇಳಿಕೆ ಕಂಡು 72,943 ಅಂಶಗಳಲ್ಲಿ ವಹಿವಾಟನ್ನು ಅಂತ್ಯಗೊಳಿಸಿತು. ದಿನದ ವಹಿವಾಟಿನಲ್ಲಿ 714 ಅಂಶ ಕುಸಿತ ಕಂಡಿತ್ತು.

ನಿಫ್ಟಿ 124 ಅಂಶ ಕುಸಿತ ಕಂಡು 22,147 ಅಂಶಗಳಲ್ಲಿ ಸ್ಥಿರವಾಯಿತು.

ಮೂರು ದಿನಗಳಲ್ಲಿ ಸೆನ್ಸೆಕ್ಸ್ ಒಟ್ಟು 2,094 ಅಂಶಗಳಷ್ಟು (ಶೇ 2.79) ಕುಸಿತ ಕಂಡಿದೆ.

ಇನ್ಫೊಸಿಸ್, ಇಂಡಸ್‌ಇಂಡ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ವಿಪ್ರೊ, ಎಚ್‌ಸಿಎಲ್ ಟೆಕ್ನಾಲಜೀಸ್, ಬಜಾಜ್ ಫೈನಾನ್ಸ್, ಟೆಕ್ ಮಹೀಂದ್ರ, ಟಿಸಿಎಸ್, ಎಲ್ ಆ್ಯಂಡ್ ಟಿ ಷೇರುಗಳು ಕುಸಿತ ಕಂಡಿವೆ.

ಟೈಟನ್, ಹಿಂದುಸ್ತಾನ್ ಯೂನಿಲಿವರ್, ಎಚ್‌ಡಿಎಫ್‌ಸಿ ಬ್ಯಾಂಕ್, ಮಾರುತಿ, ಐಟಿಸಿ, ಪವರ್ ಗ್ರಿಡ್ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಗಳಿಕೆ ಕಂಡಿವೆ.

ಸಿಯೋಲ್, ಟೋಕಿಯೊ, ಶಾಂಘೈ ಹಾಗೂ ಹಾಂಗ್‌ಕಾಂಗ್ ಮಾರುಕಟ್ಟೆ ಕೂಡ ಕುಸಿತ ಕಂಡಿವೆ. ಯುರೋಪ್ ಮಾರುಕಟ್ಟೆಗಳು ಕುಸಿತದ ಹಾದಿ ಹಿಡಿದಿವೆ. ಬ್ರೆಂಟ್ ಕಚ್ಚಾತೈಲ ಶೇ 0.26ರಷ್ಟು ಕುಸಿತ ಕಂಡು ಒಂದು ಬ್ಯಾರಲ್‌ಗೆ 89.87ಕ್ಕೆ ಮಾರಾಟವಾಯಿತು.

‘ಇಸ್ರೇಲ್–ಇರಾನ್ ನಡುವಿನ ಸಂಘರ್ಷವು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಕಚ್ಚಾ ತೈಲದ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಇದು ಹಣದುಬ್ಬರ ಏರಿಕೆಗೆ ಕಾರಣವಾಗಲಿದೆ. ಇದು ದೇಶೀಯ ಷೇರುಪೇಟೆಗಳ ಮೇಲೆ ಪರಿಣಾಮ ಬೀರಿದೆ’ ಎಂದು ಮೆಹ್ತಾ ಈಕ್ವಿಟೀಸ್ ಹಿರಿಯ ಉಪಾಧ್ಯಕ್ಷ (ಸಂಶೋಧನೆ) ಪ್ರಶಾಂತ್ ತಾಪ್ಸೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.