ನವದೆಹಲಿ: ಬ್ಯಾಂಕಿಂಗ್ ಯೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಮತ್ತು ಗೃಹ ಹಣಕಾಸು ಸಂಸ್ಥೆಗಳ (ಎಚ್‌ಎಫ್‌ಸಿ) ಷೇರುಗಳು ಅತಿಯಾದ ಮಾರಾಟದ ಒತ್ತಡದಲ್ಲಿವೆ.

ಈ ಸಂಸ್ಥೆಗಳಲ್ಲಿ ನಗದು ಕೊರತೆ ಎದುರಾಗುವ ಆತಂಕ ಮೂಡಿರುವುದರಿಂದ ಹೂಡಿಕೆದಾರರು ನಿರಂತರವಾಗಿ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಶುಕ್ರವಾರದ ವಹಿವಾಟಿನಲ್ಲಿಈ ಸಂಸ್ಥೆಗಳಷೇರುಗಳು ಶೇ 9ರವರೆಗೂ ಕುಸಿತ ಕಂಡಿವೆ.

ಚೇತರಿಸಿಕೊಳ್ಳದ ವಹಿವಾಟು: ದೇಶದ ಷೇರುಪೇಟೆಗಳಲ್ಲಿ ನಕಾರಾತ್ಮಕ ವಹಿವಾಟು ಮುಂದುವರಿದಿದೆ. ಎರಡೂ
ವರೆ ವರ್ಷಗಳಲ್ಲಿಯೇ (2016ರ ಫೆಬ್ರುವರಿ ನಂತರ) ಸೆಪ್ಟೆಂಬರ್ ತಿಂಗಳಿನಲ್ಲಿ ಸೂಚ್ಯಂಕಗಳು ಅತಿ ಹೆಚ್ಚು ನಷ್ಟಕ್ಕೆ ಒಳಗಾಗಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 97 ಅಂಶ ಇಳಿಕೆ ಕಂಡು, 36,227 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 47 ಅಂಶ ಇಳಿಕೆಯಾಗಿ 10,930 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ರೂಪಾಯಿ ಮೌಲ್ಯ ಕುಸಿತ, ತೈಲ ದರ ಏರಿಕೆ ಸೂಚ್ಯಂಕದ ಇಳಿಕೆಗೆ ಕಾರಣವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.