ಮುಂಬೈ: ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರದ ಆರಂಭದ ವಹಿವಾಟಿನ ವೇಳೆ ಸುಮಾರು 500 ಅಂಶ ಕುಸಿತ ದಾಖಲಿಸಿದೆ.

ಬೆಳಿಗ್ಗೆ 9.40ರ ವಹಿವಾಟಿನ ವೇಳೆ ಸೆನ್ಸೆಕ್ಸ್ 555.72 ಅಂಶ ಕುಸಿತ ಕಂಡು 35,114.93ರಷ್ಟಾಗಿದೆ. ನಿಫ್ಟಿಯೂ 174.65 ಅಂಶ ಕುಸಿತ ದಾಖಲಿಸಿ 10,519.05ರಷ್ಟಾಗಿದೆ.

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟಗೊಳ್ಳಲಿದೆ. ಯಾವೊಂದು ಪಕ್ಷಕ್ಕೂ ಸ್ಪಷ್ಟ ಬಹುತಮತ ದೊರೆಯದು ಎಂಬುದು ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶದಿಂದ ತಿಳಿದುಬಂದಿದೆ. ಮತ್ತೊಂದೆಡೆ, ಜಾಗತಿಕ ಮಾರುಕಟ್ಟೆಯಲ್ಲಿ ವಹಿವಾಟು ಕುಸಿತ ದಾಖಲಿಸಿದೆ. ಈ ಎಲ್ಲ ಕಾರಣಗಳಿಂದಾಗಿ ಸೆನ್ಸೆಕ್ಸ್ ಕುಸಿತ ಕಂಡಿದೆ ಎನ್ನಲಾಗಿದೆ.

ಮಧ್ಯ ಪ್ರದೇಶ ಮತ್ತು ಛತ್ತೀಸಗಡದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನಿಕಟ ಸ್ಪರ್ಧೆ ಇದೆ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಕೈ ಮೇಲು ಎಂದು ಸಮೀಕ್ಷಾ ಫಲಿತಾಂಶ ತಿಳಿಸಿದೆ.

‘ಸಮೀಕ್ಷಾ ಫಲಿತಾಂಶ ಅತಂತ್ರವಾಗಿದೆ. ಆದರೆ ನಾವು ಅಂತಿಮ ಫಲಿತಾಂಶ ಪ್ರಕಟವಾಗುವವರೆಗೂ ಸಮಸ್ಯೆ ಮೈಮೇಲೆಳೆದುಕೊಳ್ಳಲು ಹೋಗುವುದಿಲ್ಲ. ಫಲಿತಾಂಶ ಪ್ರಕಟವಾಗುವವರೆಗೂ ಇದೇ ಪರಿಸ್ಥಿತಿ ಮುಂದುವರಿಯಲಿದೆ’ ಎಂದು ವಿದೇಶಿ ಬ್ಯಾಂಕೊಂದರ ವಹಿವಾಟುದಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.