ಮುಂಬೈ/ನವದೆಹಲಿ: ಐ.ಟಿ ಮತ್ತು ತಂತ್ರಜ್ಞಾನ ಷೇರುಗಳ ಖರೀದಿಯಲ್ಲಿನ ಹೆಚ್ಚಳದಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ಶುಕ್ರವಾರ ಶೇ 1ರಷ್ಟು ಏರಿಕೆ ಕಂಡಿದ್ದವು.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್ಇ) ಸೆನ್ಸೆಕ್ಸ್ 622 ಅಂಶ ಏರಿಕೆಯಾಗಿ 80,519ಕ್ಕೆ ಸ್ಥಿರಗೊಂಡಿತು. ವಹಿವಾಟಿನ ವೇಳೆ 80,893 ಅಂಶಕ್ಕೆ ತಲುಪಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್ಇ) ನಿಫ್ಟಿ 186 ಅಂಶ ಹೆಚ್ಚಳವಾಗಿ 24,502ಕ್ಕೆ ಅಂತ್ಯಗೊಂಡಿತು. ವಹಿವಾಟಿನ ವೇಳೆ 24,592ಕ್ಕೆ ಮುಟ್ಟಿತ್ತು.

ಷೇರುಗಳ ಮೌಲ್ಯ ಏರಿಕೆಯಿಂದ ಬಿಎಸ್ಇ ನೊಂದಾಯಿತ ಕಂಪನಿಗಳ ಮಾರುಕಟ್ಟೆ ಮೌಲ್ಯಕ್ಕೆ ₹1.17 ಲಕ್ಷ ಕೋಟಿ ಸೇರ್ಪಡೆಯಾಗಿದ್ದು, ಒಟ್ಟು ಕಂಪನಿಗಳ ಎಂ–ಕ್ಯಾಪ್ ₹452 ಲಕ್ಷ ಕೋಟಿಗೆ ಮುಟ್ಟಿದೆ.

ಸೆನ್ಸೆಕ್ಸ್ ಏರಿಕೆಯಲ್ಲಿ ಅತಿ ಹೆಚ್ಚು ಲಾಭ ಆಗಿರುವುದು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ಗೆ. ಈ ಕಂಪನಿಯ ಷೇರಿನ ಮೌಲ್ಯ ಶೇ 7ರಷ್ಟು ಏರಿಕೆಯಾಗಿದೆ. ಇನ್ಫೊಸಿಸ್, ಎಚ್ಸಿಎಲ್ ಟೆಕ್ನಾಲಜೀಸ್, ಟೆಕ್ ಮಹೀಂದ್ರ, ಎಕ್ಸಿಸ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಜೆಎಸ್ಡಬ್ಲ್ಯು ಸ್ಟೀಲ್, ಬಜಾಜ್ ಫೈನಾನ್ಸ್ ಮತ್ತು ಲಾರ್ಸೆನ್ ಆ್ಯಂಡ್ ಟೊಬ್ರೊ ಷೇರಿನ ಮೌಲ್ಯದಲ್ಲಿ ಹೆಚ್ಚಳವಾಗಿದೆ.

ಏಷ್ಯನ್ ಪೇಂಟ್ಸ್, ಟೈಟನ್, ಕೋಟಕ್ ಮಹೀಂದ್ರ ಬ್ಯಾಂಕ್, ಭಾರ್ತಿ ಏರ್ಟೆಲ್ ಮತ್ತು ಐಸಿಐಸಿಐ ಬ್ಯಾಂಕ್ನ ಷೇರಿನ ಮೌಲ್ಯ ಇಳಿದಿದೆ. ಏಷ್ಯಾದ ಮಾರುಕಟ್ಟೆಯಲ್ಲಿ ಶಾಂಘೈ ಮತ್ತು ಹಾಂಗ್ಕಾಂಗ್ ಸಕಾರಾತ್ಮಕ ವಹಿವಾಟು ದಾಖಲಿಸಿದ್ದರೆ, ಸೋಲ್ ಮತ್ತು ಟೋಕಿಯೊ ಇಳಿಕೆ ಕಂಡಿವೆ.

ಜಾಗತಿಕ ಬ್ರೆಂಟ್ ಕಚ್ಚಾ ತೈಲವು ಶೇ 0.78 ಏರಿಕೆಯಾಗಿ, ಪ್ರತಿ ಬ್ಯಾರೆಲ್ಗೆ 86.13 ಡಾಲರ್ (₹7,193) ಆಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಗುರುವಾರ ನಡೆದ ವಹಿವಾಟಿನಲ್ಲಿ ₹1,137 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಷೇರು ಸೂಚ್ಯಂಕ ಹೆಚ್ಚಳಕ್ಕೆ ಕಾರಣವೇನು?:

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ನ (ಟಿಸಿಎಸ್) ಜೂನ್ ತ್ರೈಮಾಸಿಕದ ಗಳಿಕೆಯಲ್ಲಿನ ಹೆಚ್ಚಳ, ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೊಸಿಸ್ ಷೇರುಗಳ ಮೌಲ್ಯ ಏರಿಕೆ ಮತ್ತು ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರ ಕಡಿತಗೊಳಿಸುವ ನಿರೀಕ್ಷೆ ಷೇರು ಸೂಚ್ಯಂಕಗಳ ದಾಖಲೆಯ ಹೆಚ್ಚಳಕ್ಕೆ ಕಾರಣವಾಯಿತು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಟಿಸಿಎಸ್ ಎಂ–ಕ್ಯಾಪ್ ₹15 ಲಕ್ಷ ಕೋಟಿಗೆ ಏರಿಕೆ:

ದೇಶದ ಅತಿದೊಡ್ಡ ಸಾಫ್ಟ್ವೇರ್ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ನ (ಟಿಸಿಎಸ್) ಷೇರಿನ ಮೌಲ್ಯ ಶೇ 7ರಷ್ಟು ಏರಿಕೆಯಾಗಿದೆ.

ಬಿಎಸ್ಇ ಮತ್ತು ಎನ್ಎಸ್ಇಯಲ್ಲಿ ಷೇರಿನ ಬೆಲೆ ಕ್ರಮವಾಗಿ ₹4,184 ಮತ್ತು ₹4,182ಕ್ಕೆ ಮುಟ್ಟಿದೆ.

ಷೇರಿನ ಮೌಲ್ಯ ಏರಿಕೆಯಿಂದ ಕಂಪನಿಯ ಮಾರುಕಟ್ಟೆ ಮೌಲ್ಯಕ್ಕೆ (ಎಂ–ಕ್ಯಾಪ್) ಒಂದೇ ದಿನ ₹94,866 ಕೋಟಿ ಸೇರ್ಪಡೆಯಾಗಿದೆ. ಕಂಪನಿಯ ಒಟ್ಟು ಎಂ–ಕ್ಯಾಪ್ ₹15.14 ಲಕ್ಷ ಕೋಟಿಗೆ ತಲುಪಿದೆ.

ಪ್ರಸಕ್ತ ಹಣಕಾಸು ವರ್ಷದ ಜೂನ್ ತ್ರೈಮಾಸಿಕದಲ್ಲಿ ಟಿಸಿಎಸ್ ₹12,040 ಕೋಟಿ ನಿವ್ವಳ ಲಾಭ ಗಳಿಸಿದೆ. ಇದರಿಂದ ಕಂಪನಿಯ ಷೇರಿನ ಮೌಲ್ಯ ಶುಕ್ರವಾರ ಏರಿಕೆಯಾಗಿದೆ ಎಂದು ಎಚ್ಡಿಎಫ್ಸಿ ಸೆಕ್ಯುರಿಟೀಸ್ನ ದೀಪಕ್ ಜಸಾನಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.