ನವದೆಹಲಿ: ಟಾಟಾ ಕನ್ಸಲ್ಟನ್ಸಿ ಸರ್ವೀಸ್ನ (ಟಿಸಿಎಸ್) ಮಾರುಕಟ್ಟೆ ಬಂಡವಾಳ ಮೌಲ್ಯವು ಮಂಗಳವಾರದ ವಹಿವಾಟಿನಲ್ಲಿ ₹ 14 ಲಕ್ಷ ಕೋಟಿಯ ಗಡಿಯನ್ನು ದಾಟಿತು.

ರಿಲಯನ್ಸ್ ಇಂಡಸ್ಟ್ರೀಸ್ ಬಳಿಕ ಈ ಮೈಲಿಗಲ್ಲು ತಲುಪಿದ ಎರಡನೇ ಕಂಪನಿಯಾಗಿ ಟಿಸಿಎಸ್ ಹೊರಹೊಮ್ಮಿದೆ.

ಬಿಎಸ್ಇನಲ್ಲಿ ಮಂಗಳವಾರ ಟಿಸಿಎಸ್ ಷೇರು ಮೌಲ್ಯ ಶೇ 2.30ರಷ್ಟು ಏರಿಕೆ ಕಂಡು, ವಹಿವಾಟಿನ ಅಂತ್ಯದ ವೇಳೆಗೆ ಪ್ರತಿ ಷೇರಿನ ಬೆಲೆ ₹ 3,786.55ಕ್ಕೆ ತಲುಪಿತು. ಇದರಿಂದಾಗಿ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯವು ₹ 14,00,664.30 ಕೋಟಿಗಳಿಗೆ ಏರಿಕೆಯಾಯಿತು.

ಇದನ್ನೂ ಓದಿ: 17,000 ಅಂಶ ದಾಟಿದ ನಿಫ್ಟಿ; ಆಗಸ್ಟ್ನಲ್ಲಿ 4,000 ಅಂಶ ಏರಿಕೆಯಾದ ಸೆನ್ಸೆಕ್ಸ್

ಆಗಸ್ಟ್ 17ರಂದು ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯವು ₹ 13 ಲಕ್ಷ ಕೋಟಿಯ ಗಡಿ ದಾಟಿತ್ತು.

ಸದ್ಯ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯು ₹ 14.32 ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳ ಮೌಲ್ಯ ಹೊಂದಿದ್ದು, ಷೇರುಪೇಟೆಯಲ್ಲಿ ಅತ್ಯಂತ ಮೌಲ್ಯಯುತ ಕಂಪನಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.