ಬೆಂಗಳೂರು: ದೇಶದ ಸಾಫ್ಟ್ವೇರ್ ಸೇವೆಗಳ ಬೃಹತ್ ಕಂಪನಿ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ (ಟಿಸಿಎಸ್) ಡಿಸೆಂಬರ್ ತ್ರೈಮಾಸಿಕದಲ್ಲಿ ₹ 8,118 ಕೋಟಿ ನಿವ್ವಳ ಲಾಭ ಗಳಿಸಿರುವುದಾಗಿ ಶುಕ್ರವಾರ ಘೋಷಿಸಿಕೊಂಡಿದೆ.

ಕಳೆದ ತ್ರೈಮಾಸಿಕದಲ್ಲಿ ₹ 8,042 ಕೋಟಿ ಲಾಭ ಗಳಿಸಿದ್ದ ಟಿಸಿಎಸ್ 2019ರ ಡಿಸೆಂಬರ್ ಆಂತ್ಯಕ್ಕೆ ಶೇ 0.9ರಷ್ಟು ಹೆಚ್ಚಳದೊಂದಿಗೆ ₹ 8,118 ಕೋಟಿ ಗಳಿಸಿದೆ. ಟಿಸಿಎಸ್ ಆದಾಯ ಶೇ 2.25ರಷ್ಟು, ಅಂದರೆ ₹ 38,977 ಕೋಟಿಯಿಂದ ₹ 39,854 ಕೋಟಿಗೆ ಏರಿಕೆಯಾಗಿದೆ.

ಕಂಪನಿ ಪ್ರತಿ ಷೇರಿಗೆ ₹ 5ರಂತೆ ಮಧ್ಯಂತರ ಲಾಭಾಂಶ ಘೋಷಿಸಿದೆ. ವರ್ಷದಿಂದ ವರ್ಷಕ್ಕೆ ಟಿಸಿಎಸ್ ಆದಾಯ ಶೇ 6.8ರಷ್ಟು ಹೆಚ್ಚಳವಾಗುತ್ತಿದೆ.

ಶುಕ್ರವಾರದ ವಹಿವಾಟಿನಲ್ಲಿ ಟಿಸಿಎಸ್ ಷೇರು ಶೇ 0.91ರಷ್ಟು ಇಳಿಕೆಯಾಗಿದ್ದು, ₹ 2,218ರಲ್ಲಿ ವಹಿವಾಟು ಮುಕ್ತಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.