ನವದೆಹಲಿ: ಅತಿ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ದೇಶದ 10 ಕಂಪನಿಗಳ ಪೈಕಿ ಮೂರು ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ ₹98,622.89 ಕೋಟಿಯಷ್ಟು ಹೆಚ್ಚಿದೆ.

ಕಳೆದ ವಾರದ ಷೇರುಪೇಟೆ ವಹಿವಾಟಿನಲ್ಲಿ ಪ್ರಮುಖ ಏಳು ಕಂಪನಿಗಳು ಒಟ್ಟಾರೆ ₹37,701.1 ಕೋಟಿ ನಷ್ಟಕ್ಕೆ ಒಳಗಾದರೆ, ಇನ್ಫೊಸಿಸ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ಹಿಂದುಸ್ತಾನ್ ಯೂನಿಲಿವರ್ ಕಂಪನಿಗಳು ಒಟ್ಟಾರೆ ₹98,622.89 ಕೋಟಿಯಷ್ಟು ಮಾರುಕಟ್ಟೆ ಮೌಲ್ಯ ಹೆಚ್ಚಿಸಿಕೊಂಡಿವೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಇನ್ಫೊಸಿಸ್ ಶೇ 12.4ರಷ್ಟು ಲಾಭ ಗಳಿಕೆ ದಾಖಲಿಸಿತು. ಇದರ ಪರಿಣಾಮ ಗುರುವಾರ ಇನ್ಫೊಸಿಸ್ ಷೇರು ಬೆಲೆ ಶೇ 9ರಷ್ಟು ಹೆಚ್ಚಳ ಕಂಡಿತು. ಮಾರುಕಟ್ಟೆ ಮೌಲ್ಯದಲ್ಲಿ ₹52,046.87 ಕೋಟಿ ಏರಿಕೆಯಾಗಿ ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯ ₹3,85,027.58 ಕೋಟಿಯಷ್ಟಾಗಿದೆ.

ಹಿಂದುಸ್ತಾನ್ ಯೂನಿಲಿವರ್ ಲಿಮಿಟೆಡ್ ₹25,751.07 ಕೋಟಿ ಹೆಚ್ಚಿಸಿಕೊಂಡು ಮಾರುಕಟ್ಟೆ ಮೌಲ್ಯ ₹5,48,232.26 ಕೋಟಿ ಮುಟ್ಟಿದೆ. ರಿಲಯನ್ಸ್ ಇಂಡಸ್ಟ್ರೀಸ್ ₹20,824.95 ಕೋಟಿ ಏರಿಕೆಯೊಂದಿಗೆ ಒಟ್ಟು ಮಾರುಕಟ್ಟೆ ಮೌಲ್ಯ ₹12,11,682.08 ಕೋಟಿ ತಲುಪಿದೆ.

ಎಚ್ಡಿಎಫ್ ಮಾರುಕಟ್ಟೆ ಮೌಲ್ಯ ₹13,920.21 ಕೋಟಿ ಕಡಿಮೆಯಾಗಿ ₹3,13,269.70 ಕೋಟಿ ಹಾಗೂ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ₹7,617.34 ಕೋಟಿ ಇಳಿಕೆಯೊಂದಿಗೆ ₹8,26,031.21 ಕೋಟಿ ಆಗಿದೆ.

ಐಸಿಐಸಿಐ ಬ್ಯಾಂಕ್ ₹4,205.71 ಕೋಟಿ, ಕೊಟ್ಯಾಕ್ ಮಹೀಂದ್ರಾ ಬ್ಯಾಂಕ್ ₹4,175.28 ಕೋಟಿ, ಭಾರ್ತಿ ಏರ್ಟೆಲ್ ₹4,009.83 ಕೋಟಿ, ಎಚ್ಡಿಎಫ್ಸಿ ಬ್ಯಾಂಕ್ ₹3,403.97 ಕೋಟಿ ಹಾಗೂ ಐಟಿಸಿ ₹368.76 ಕೋಟಿ ನಷ್ಟ ಅನುಭವಿಸಿವೆ.

ಒಟ್ಟು ಮಾರುಕಟ್ಟೆ ಮೌಲ್ಯದ ಲೆಕ್ಕಚಾರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮೊದಲ ಸ್ಥಾನದಲ್ಲಿದೆ. ಮುಂದಿನ ಸ್ಥಾನಗಳಲ್ಲಿ ಕ್ರಮವಾಗಿ ಟಿಸಿಎಸ್, ಎಚ್ಡಿಎಫ್ಸಿ ಬ್ಯಾಂಕ್, ಎಚ್ಯುಎಲ್, ಇನ್ಫೊಸಿಸ್, ಎಚ್ಡಿಎಫ್ಸಿ, ಭಾರ್ತಿ ಏರ್ಟೆಲ್, ಕೊಟ್ಯಾಕ್ ಮಹೀಂದ್ರಾ ಬ್ಯಾಂಕ್, ಐಟಿಸಿ ಹಾಗೂ ಐಸಿಐಸಿಐ ಬ್ಯಾಂಕ್ ಇದೆ. ಕಳೆದ ವಾರ 30 ಕಂಪನಿಗಳ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 425.81 ಅಂಶ ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.