ಮುಂಬೈ: ದೇಶದ ಷೇರುಪೇಟೆಯಲ್ಲಿ ಬುಧವಾರ ನಡೆದ ವಹಿವಾಟಿನಲ್ಲಿ ಸೂಚ್ಯಂಕಗಳು ಶೇ 1ರಷ್ಟು ಏರಿಕೆ ಕಂಡಿವೆ. ಎರಡು ದಿನದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ₹10.47 ಲಕ್ಷ ಕೋಟಿ ಹೆಚ್ಚಳವಾಗಿದೆ.

ಟ್ರಂಪ್ ಗೆಲುವು ಸಾಧಿಸಿದ್ದರಿಂದ ಐ.ಟಿ ಮತ್ತು ಫಾರ್ಮಾ ಷೇರುಗಳ ಮಾರಾಟ ಹೆಚ್ಚಾಯಿತು. ಇದರಿಂದ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 901 ಅಂಶ ಏರಿಕೆ ಕಂಡು 80378 ಅಂಶಗಳಲ್ಲಿ ಸ್ಥಿರಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 270 ಅಂಶ ಹೆಚ್ಚಳಗೊಂಡು 24484 ಅಂಶಗಳಲ್ಲಿ ಮುಕ್ತಾಯಗೊಂಡಿತು.

ಸೆನ್ಸೆಕ್ಸ್ ಗುಚ್ಛದಲ್ಲಿನ ಟಿಸಿಎಸ್ ಮತ್ತು ಇನ್ಫೊಸಿಸ್ ಷೇರಿನ ಮೌಲ್ಯದಲ್ಲಿ ತಲಾ ಶೇ 4ರಷ್ಟು ಏರಿಕೆಯಾಗಿದೆ. ಎಚ್ಸಿಎಲ್ ಟೆಕ್ನಾಲಜೀಸ್ ಟೆಕ್ ಮಹೀಂದ್ರ ಅದಾನಿ ಪೋರ್ಟ್ಸ್ ಎಲ್ ಆ್ಯಂಡ್ ಟಿ ಮಾರುತಿ ರಿಲಯನ್ಸ್ ಇಂಡಸ್ಟ್ರಿಸ್ ಷೇರುಗಳ ಮೌಲ್ಯದಲ್ಲಿ ಏರಿಕೆಯಾಗಿದೆ. ಟೈಟನ್ ಇಂಡಸ್ ಇಂಡ್ ಬ್ಯಾಂಕ್ ಹಿಂದುಸ್ತಾನ್ ಯೂನಿಲಿವರ್ ಎಕ್ಸಿಸ್ ಬ್ಯಾಂಕ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ನ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯಲ್ಲಿ ಶೇ 2ರಷ್ಟು ಏರಿಕೆಯಾಗಿದ್ದು ಪ್ರತಿ ಬ್ಯಾರೆಲ್ಗೆ 74.02 ಡಾಲರ್ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.