ಬಾಗಲಕೋಟೆ: ಜಿಲ್ಲೆಯಲ್ಲಿ ಹರಿಯುವ ಮಲಪ್ರಭಾ, ಘಟಪ್ರಭಾ ನದಿಗಳ ಪಾತ್ರ ಒತ್ತುವರಿ ಆಗಿರುವುದು ಸರ್ವೆಯಿಂದ ಗೊತ್ತಾಗಿದೆ. ಒತ್ತುವರಿಯ ಪರಿಣಾಮ ನದಿಗಳು ಹರಿಯುವ ಮಾರ್ಗವನ್ನೇ ಬದಲಿಸಿಕೊಂಡು ಹೊಲಗಳಿಗೆ ನುಗ್ಗಿರುವುದು ವರದಿಯಿಂದ ಗೊತ್ತಾಗಿದೆ.

ಮಲಪ್ರಭಾ ನದಿ ಹರಿಯುವ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಭೂ ದಾಖಲೆಗಳ ಇಲಾಖೆ ಸರ್ವೆ ಮಾಡಿದ್ದು, 424 ಎಕರೆ ಒತ್ತುವರಿಯಾಗಿದೆ. ಘಟಪ್ರಭಾ ನದಿಪಾತ್ರದ ಎರಡು ತಾಲ್ಲೂಕುಗಳಲ್ಲಿ ಸರ್ವೆ ನಡೆದಿದ್ದು, 62 ಎಕರೆ ನದಿ ಪ್ರದೇಶ ಒತ್ತುವರಿಯಾಗಿದೆ.

ಮಲಪ್ರಭಾ ನದಿಯು ಮಳೆಗಾಲದಲ್ಲೇ ತುಂಬಿ ಹರಿಯುವುದು ಅಪರೂಪ. ಆದ್ದರಿಂದ ನದಿ ದಂಡೆಯನ್ನು ರೈತರು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಪ್ರವಾಹದಿಂದ ನೀರು ಹೆಚ್ಚಾದಾಗ ನದಿ ತನ್ನ ಹರಿಯುವ ಮಾರ್ಗ ಬದಲಿಸಿಕೊಂಡು ಹೊಲಗಳಿಗೆ ನುಗ್ಗಿದೆ.

ಹರಿಯುವ ಮಾರ್ಗ ಬದಲಾಗಿರುವ ಕಾರಣ ಮಲಪ್ರಭಾ ನದಿಯು 551 ಎಕರೆ ಮತ್ತು ಘಟಪ್ರಭಾ ನದಿ 114 ಎಕರೆ ಜಮೀನಿನಲ್ಲಿ ಹರಿಯುತ್ತವೆ. ಮಲಪ್ರಭಾ ನದಿಪಾತ್ರದಲ್ಲಿ ಬಾದಾಮಿ ತಾಲ್ಲೂಕಿನ 31 ಗ್ರಾಮಗಳ 680 ಹೊಲಗಳ ಸರ್ವೆ ನಡೆದಿದೆ. 103 ಹೊಲಗಳ ಮಾಲೀಕರು 157 ಎಕರೆ ಒತ್ತುವರಿ ಮಾಡಿದ್ದಾರೆ. ಹುನಗುಂದ ತಾಲ್ಲೂಕಿನ 37 ಗ್ರಾಮಗಳ 485 ಸಂಖ್ಯೆಗಳ ಸರ್ವೆಯಲ್ಲಿ 128 ಹೊಲಗಳ ಮಾಲೀಕರು 267 ಎಕರೆ, ಇಳಕಲ್ ತಾಲ್ಲೂಕಿನಲ್ಲಿ 31 ಗುಂಟೆ ಒತ್ತುವರಿ ಮಾಡಿರುವುದು 2022ರಲ್ಲಿ ಮಾಡಿದ ಸರ್ವೆಯಲ್ಲಿ ಬಯಲಾಗಿದೆ.

ಘಟಪ್ರಭಾ ನದಿ ಒತ್ತುವರಿ ಕಂಡು ಬಂದಂತಹ ಮುಧೋಳ ತಾಲ್ಲೂಕಿನ 34 ಗ್ರಾಮಗಳ 464 ಸಂಖ್ಯೆಗಳಲ್ಲಿ ಸರ್ವೆ ನಡೆದಿದೆ. ಇಲ್ಲಿ, 88 ಹೊಲಗಳ ಮಾಲೀಕರು 62 ಎಕರೆ ಒತ್ತುವರಿ ಮಾಡಿದ್ದಾರೆ. ರಬಕವಿ ಬನಹಟ್ಟಿ ತಾಲ್ಲೂಕಿನಲ್ಲಿ 12 ಗುಂಟೆ ಭೂಮಿ ಒತ್ತುವರಿಯಾಗಿದೆ.

ಗ್ರಾಮಗಳಲ್ಲಿ ಪ್ರವಾಹ, ಹಾನಿ: ನದಿಪಾತ್ರದ ಒತ್ತುವರಿಯಿಂದ ಆಗಾಗ ನದಿಗಳು ಉಕ್ಕಿ ಹರಿದು, ಗ್ರಾಮಗಳಿಗೆ ನುಗ್ಗಲಾರಂಭಿಸಿವೆ. ಕಳೆದ ವರ್ಷ ವಾಡಿಕೆಗಿಂತ ಮಳೆ ಹೆಚ್ಚಾದಾಗ ಹಲವಾರು ಗ್ರಾಮಗಳಿಗೆ ನೀರು ನುಗ್ಗಿತ್ತು. 2009 ಮತ್ತು 2019ರಲ್ಲಿ ಪ್ರವಾಹ ಉಂಟಾದಾಗ ಮಲಪ್ರಭಾ ನದಿ ನೀರು 71 ಗ್ರಾಮಗಳಿಗೆ, ಹಾಗೆಯೇ ಘಟಪ್ರಭಾ ನದಿ ನೀರು 70 ಗ್ರಾಮಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯನ್ನುಂಟು ಮಾಡಿದ್ದವು.

‘ಪ್ರವಾಹ ಬಂದಾಗ ಒತ್ತುವರಿ ತೆರವುಗೊಳಿಸುವ ಮಾತುಗಳು ಕೇಳಿ ಬರುತ್ತವೆ. ನಂತರ ಯಾರೂ ಗಮನಿಸುವುದಿಲ್ಲ. ಭೂ ದಾಖಲೆಗಳ ಇಲಾಖೆಯು ಸರ್ವೆ ಮಾಡಿ 2022ರ ಮಾರ್ಚ್‌ನಲ್ಲಿಯೇ ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿಗೆ ವರದಿ ಸಲ್ಲಿಸಿದೆ. ಆದರೆ, ಇದುವರೆವಿಗೂ ಯಾವುದೇ ಕ್ರಮವನ್ನು ಕೈಗೊಳ್ಳಲಾಗಿಲ್ಲ’ ಎಂದು ಗ್ರಾಮಸ್ಥರು ಹೇಳುತ್ತಾರೆ.

ಒತ್ತುವರಿಯ ಈ ಪರಿ...

ಮಲಪ್ರಭಾ ಘಟಪ್ರಭಾ ನದಿಗಳ ಪಾತ್ರದಲ್ಲಿ ಸರ್ವೆ ಮಾಡಿ ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿಗೆ ವರದಿ ಸಲ್ಲಿಸಲಾಗಿದೆ.
–ನಜ್ಮಾ ಪೀರಜಾದೆ, ಜಂಟಿ ನಿರ್ದೇಶಕಿ ಭೂದಾಖಲೆಗಳ ಇಲಾಖೆ, ಬೆಳಗಾವಿ

ಮಲಪ್ರಭಾ ನದಿಯಲ್ಲಿ ಪ್ರವಾಹ ಬಂದಾಗ ನಮ್ಮ ಗ್ರಾಮಗಳಿಗೆಲ್ಲ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಲಿದೆ.
–ಮಹಾಂತೇಶ ಕೊಪ್ಪದ ಕಜಗಲ್ ಗ್ರಾಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.