ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ಹಿಂದಿನ ವರ್ಷಗಳಂತೆಯೇ ರೈತರು ನಿರಾಸಕ್ತಿ ತೋರಿದ್ದಾರೆ. ‘ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ’ಗೆ ಈ ವರೆಗೆ 794 ರೈತರಷ್ಟೇ ನೋಂದಣಿ ಮಾಡಿಕೊಂಡಿದ್ದಾರೆ.

ಬಳ್ಳಾರಿ ಜಿಲ್ಲೆಯ ಭೌಗೋಳಿಕ ವ್ಯಾಪ್ತಿ 4.43ಲಕ್ಷ ಹೆಕ್ಟೇರ್. ಸಾಗುವಳಿ ಕ್ಷೇತ್ರದ ವ್ಯಾಪ್ತಿ 2.78 ಲಕ್ಷ ಹೆಕ್ಟೇರ್. ಮುಂಗಾರು ಹಂಗಾಮಿನಲ್ಲಿ 1.73 ಲಕ್ಷ ಹೆಕ್ಟೇರ್ನಲ್ಲಿ ಕೃಷಿ ಮಾಡಲಾಗುತ್ತಿದೆ. ಇದರಲ್ಲಿ 65 ಲಕ್ಷ ಹೆಕ್ಟೇರ್ ಮಳೆಯಾಶ್ರಿತ. ಉಳಿದಿದ್ದು ನೀರಾವರಿ ಪ್ರದೇಶ. ಜಿಲ್ಲೆಯಲ್ಲಿರುವ ಒಟ್ಟು ರೈತರ ಸಂಖ್ಯೆ 1.59 ಲಕ್ಷ. ಸಣ್ಣ ರೈತರು 1.05ಲಕ್ಷ, ಮಧ್ಯಮ ರೈತರು 45 ಸಾವಿರ. ದೊಡ್ಡ ರೈತರು 8 ಸಾವಿರ.

ಮುಂಗಾರು ಹಂಗಾಮಿನಲ್ಲಿ ಈ ವರೆಗೆ 10.6 ಸೆ.ಮೀ ಮಳೆಯಾಗಬೇಕಿತ್ತು. ಆದರೆ, 17.8 ಸೆಂ.ಮೀ. ಬಂದಿದೆ. ವಾಡಿಕೆಗಿಂತಲೂ 7 ಸೆಂ.ಮೀ ಮಳೆಯಾಗಿದೆ. ತುಂಗಭದ್ರಾ ಜಲಾಶಯದಲ್ಲಿ ಸದ್ಯ ನೀರಿನ ಸಂಗ್ರಹ ಉತ್ತಮವಾಗಿದ್ದು, ನಾಲೆಗಳಿಗೆ ನೀರು ಬಿಡಲು ನಿರ್ಧಾರವಾಗಿದೆ.

ಉತ್ತಮ ಮಳೆಯಾಗಿದೆ, ಜಲಾಶಯದಲ್ಲಿ ಎಂತೂ ನೀರಿದೆ. ಈ ಬಾರಿ ಉತ್ತಮ ಬೆಳೆಯಾಗುತ್ತದೆ ಎಂಬ ಆತ್ಮವಿಶ್ವಾಸವೋ ಏನೋ, ರೈತರು ಬೆಳೆ ವಿಮೆಯ ಕಡೆಗೆ ಈ ಬಾರಿ ತೀವ್ರ ನಿರಾಸಕ್ತಿ ತೋರಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿ ಬಂದಾಗ, ಬೆಳೆಗಳಿಗೆ ರೋಗ–ರುಜಿನುಗಳು ಕಾಡಿದಾಗ ರೈತರನ್ನು ರಕ್ಷಣೆ ಮಾಡಲು ಸರ್ಕಾರ ಬೆಳೆ ವಿಮೆ ಯೋಜನೆ ಜಾರಿಗೊಳಿಸಿದೆ. ಆದರೆ, ವರ್ಷದಿಂದ ವರ್ಷಕ್ಕೆ ‘ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ’ ರೈತರಿಗೆ ಅಪ್ರಿಯವಾಗುತ್ತಿದೆ.

‘2023–24ನೇ ಸಾಲಿನಲ್ಲಿ ಜಿಲ್ಲೆಯ 4757 ರೈತರು ಬೆಳೆ ವಿಮೆ ಮಾಡಿಸಿಕೊಂಡಿದ್ದರು. 804 ರೈತರಿಗೆ ಒಟ್ಟಾರೆ ₹99.84 ಲಕ್ಷ ಬೆಳೆ ವಿಮೆ ಪರಿಹಾರ ಸಿಕ್ಕಿತ್ತು. 2022–23ನೇ ಸಾಲಿನಲ್ಲಿ 4026 ರೈತರು ಬೆಳೆ ವಿಮೆ ಮಾಡಿಸಿಕೊಂಡಿದ್ದರು. 1766 ರೈತರಿಗೆ ಒಟ್ಟು ₹4.26 ಕೋಟಿ ವಿಮಾ ಪರಿಹಾರ ಮೊತ್ತ ಸಿಕ್ಕಿತ್ತು. ಹೀಗಾಗಿ ರೈತರಿಗೆ ಬೆಳೆ ವಿಮೆಯಿಂದ ಯಾವುದೇ ನಷ್ಟವಿಲ್ಲ. ಅಪತ್ತಿನ ಕಾಲದಲ್ಲಿ ವಿಮೆ ರೈತರ ಕೈ ಹಿಡಿಯುತ್ತದೆ. ಸಂಕಷ್ಟದಿಂದ ದೂರ ಮಾಡುತ್ತದೆ’ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

ಜಾಗೃತಿ ಅಭಿಯಾನ: ರೈತರಿಗೆ ಇ–ಗವರ್ನೆನ್ಸ್ ಸಹಯೋಗದೊಂದಿಗೆ ಗುಂಪು ಕರೆ ಮಾಡಿ ಬೆಳೆ ವಿಮೆ ಕುರಿತು ಮಾಹಿತಿ ನೀಡಲಾಗಿದೆ. 68 ಸಾವಿರ ರೈತರೊಂದಿಗೆ ಕೃಷಿ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ಗ್ರಾಮ ಮಟ್ಟದಲ್ಲಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಗಳ ಮೂಲಕ ಜಾಗೃತಿ ಮೂಡಿಸಲಾಗಿದೆ. ಜಿಲ್ಲೆಯಲ್ಲಿ ‘ಟಾಟಾ ಎಐಜಿ’ ಸಂಸ್ಥೆ ವಿಮಾ ಕಂಪನಿಯಾಗಿದ್ದು, ಅವರೂ ಪ್ರಚಾರ ನಡೆಸಿದ್ದಾರೆ. ಗ್ರಾಮ ಮಟ್ಟದಲ್ಲೂ ಜಾಗೃತಿ ಮಾಡಲಾಗುತ್ತಿದೆ. ನಾನಾ ಉದ್ದೇಶಗಳಿಗಾಗಿ ಬ್ಯಾಂಕ್ಗೆ ಬರುವ ರೈತರಿಗೆ ಬೆಳೆ ವಿಮೆ ಮಾಡಿಸುವಂತೆಯೂ ಮನವಿ ಮಾಡಲಾಗುತ್ತಿದೆ. ಇಷ್ಟಾದರೂ ರೈತರು ಬೆಳೆ ವಿಮೆ ಮಾಡಿಸಿಕೊಳ್ಳಲು ಮುಂದೆ ಬರುತ್ತಿಲ್ಲ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಬೇಸರ.

ಎಲ್ಲೆಲ್ಲಿ ಲಭ್ಯ: ಗ್ರಾಮ ಒನ್, ಸಿಎಚ್ಸಿ ನಾಗರಿಕ ಸೇವಾಕೇಂದ್ರ, ಬಳ್ಳಾರಿ ಒನ್, ಪ್ಯಾಕ್ಸ್ -ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಬ್ಯಾಂಕ್ಗಳಲ್ಲಿ ಬೆಳೆ ವಿಮೆ ಮಾಡಲಾಗುತ್ತದೆ.

ಕೊನೆಯ ದಿನಾಂಕ: ಮುಸುಕಿನ ಜೋಳ, ಜೋಳ, ಸೂರ್ಯಕಾಂತಿ, ತೊಗರಿ, ಹತ್ತಿ, ಕೆಂಪು ಮೆಣಸಿನಕಾಯಿ, ಈರುಳ್ಳಿ ಮತ್ತು ಎಳ್ಳು ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಲು ಜುಲೈ 31 ಕೊನೆ ದಿನ. ಭತ್ತ, ತೊಗರಿ, ರಾಗಿ, ನವಣೆ, ಹುರುಳಿ, ನೆಲಗಡಲೆ ಮತ್ತು ಸಜ್ಜೆ ಬೆಳೆಗಳಿಗೆ ವಿಮೆ ಮಾಡಿಸಲು ಆಗಸ್ಟ್ 16 ಕೊನೆ ದಿನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.