ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ | ಬಳ್ಳಾರಿ: ‘ಕೈ’ ಟಿಕೆಟ್‌ ಗೆಲ್ಲೋರು ಯಾರು?

ತುಮಕೂರಿನ ಕೆ.ಎನ್‌ ರಾಜಣ್ಣ ಪುತ್ರನ ಹೆಸರು ಮುನ್ನಲೆಗೆ; ಹೆಚ್ಚಿದ ಪೈಪೋಟಿ
ಹರಿಶಂಕರ್‌ ಆರ್‌.
Published : 20 ಫೆಬ್ರುವರಿ 2024, 4:56 IST
Last Updated : 20 ಫೆಬ್ರುವರಿ 2024, 4:56 IST
ಫಾಲೋ ಮಾಡಿ
Comments
ಗುಜ್ಜಲ್‌ ನಾಗರಾಜ್‌
ಗುಜ್ಜಲ್‌ ನಾಗರಾಜ್‌
ವಿ.ಎಸ್.ಉಗ್ರಪ್ಪ
ವಿ.ಎಸ್.ಉಗ್ರಪ್ಪ
ಬಿ ನಾಗೇಂದ್ರ
ಬಿ ನಾಗೇಂದ್ರ
ಸೌಪರ್ಣಿಕಾ ತುಕಾರಾಂ
ಸೌಪರ್ಣಿಕಾ ತುಕಾರಾಂ
ಬಿ. ವೆಂಕಟೇಶ್‌ ಪ್ರಸಾದ್‌ 
ಬಿ. ವೆಂಕಟೇಶ್‌ ಪ್ರಸಾದ್‌ 
ಹಿರಿತನ ಅನುಭವದ ಆಧಾರದಲ್ಲಿ ನನಗೆ ಟಿಕೆಟ್‌ ಸಿಗಲಿದೆ. ಕಳೆದ ಬಾರಿ ಕಾಂಗ್ರೆಸ್‌ ಅತ್ಯಂತ ಕಡಿಮೆ ಅಂತರದಲ್ಲಿ ಸೋತ ಕ್ಷೇತ್ರ ಬಳ್ಳಾರಿ. ಈ ಬಾರಿಯೂ ನಾನೇ ಅಭ್ಯರ್ಥಿ. ಗೆದ್ದೇ ಗೆಲ್ಲುತ್ತೇವೆ.
–ವಿ.ಎಸ್‌ ಉಗ್ರಪ್ಪ ಮಾಜಿ ಸಂಸದ
ಬಳ್ಳಾರಿ ಅಥವಾ ರಾಯಚೂರಿನಿಂದ ಸ್ಪರ್ಧಿಸಲು ಸೂಚನೆ ಇದೆ. ಆದರೆ ನಾನು ತುಮಕೂರಲ್ಲೇ ಇರುತ್ತೇನೆ. ಸ್ಪರ್ಧಿಸಲೇಬೇಕು ಎಂದು ಪಕ್ಷ ಸೂಚಿಸಿದರೆ ಖಂಡಿತ ಕಣಕ್ಕಿಳಿಯುವೆ.
– ಆರ್.ರಾಜೇಂದ್ರ ವಿಧಾನ ಪರಿಷತ್‌ ಸದಸ್ಯ
ಲೋಕಸಭೆ ಟಿಕೆಟ್‌ಗಾಗಿ ತುಂಬಾ ಪ್ರಯತ್ನ ನಡೆಸಿದ್ದೇವೆ. ಈ ಬಾರಿ ನನ್ನ ಮಗಳು ಸೌಪರ್ಣಿಕಾಗೆ ಖಂಡಿತವಾಗಿ ಟಿಕೆಟ್ ಸಿಗುವ ವಿಶ್ವಾಸವಿದೆ. ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ
– ತುಕಾರಾಂ ಶಾಸಕ ಸಂಡೂರು
ಎನ್.ವೈ. ಗೋಪಾಲಕೃಷ್ಣ .
ಎನ್.ವೈ. ಗೋಪಾಲಕೃಷ್ಣ .
ನಮ್ಮ ಸಾಮರ್ಥ್ಯಕ್ಕೆ ತಕ್ಕ ಭಾರವನ್ನು ನಾವು ಹೊರಬೇಕು. ಲೋಕಸಭೆ ಚುನಾವಣೆ ಎಂಬುದು ನನ್ನ ಸಾಮರ್ಥ್ಯಕ್ಕೆ ಮೀರಿದ್ದು. ನಾನು ಸ್ಪರ್ಧಿಸುತ್ತೇನೆ ಎಂಬುದು ಸಂಪೂರ್ಣ ಸುಳ್ಳು.
– ಎನ್‌. ವೈ ಗೋಪಾಲಕೃಷ್ಣ ಶಾಸಕ ಮೊಳಕಾಲ್ಮೂರು
‘ಕಾಂಗ್ರೆಸ್‌ನಿಂದ ಎಚ್ಚರದ ನಡೆ’
ಕ್ಷೇತ್ರದಲ್ಲಿ ಈ ಬಾರಿ ಪಕ್ಷಕ್ಕೆ ಪೂರಕ ವಾತಾವರಣ ಇದೆ ಎಂಬುದು ಕಾಂಗ್ರೆಸ್‌ನವರ ಮನಸ್ಥಿತಿ. ಇದರ ಲಾಭ ಪಡೆಯಬೇಕು ಎಂಬುದು ರಾಜ್ಯ ನಾಯಕರ ನಿಲುವು. ಆದರೆ ಮತ್ತೊಂದು ಕಡೆ ಮಾಜಿ ಸಚಿವ ಬಿ. ರಾಮುಲು ಅವರು ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಪಕ್ಷ ಎಚ್ಚರದ ಹೆಜ್ಜೆಗಳನ್ನು ಇಡುತ್ತಿದೆ. ‘ವಿಧಾನಸಭೆ –ಲೋಕಸಭೆ ಚುನಾವಣೆ ಸನ್ನಿವೇಶಗಳೇ ಬೇರೆ. ಕಳೆದ ಬಾರಿ ಉಪಚುನಾವಣೆಯಲ್ಲಿ ಉಗ್ರಪ್ಪ ಭಾರಿ ಅಂತರದಲ್ಲಿ ಗೆದ್ದರೂ ಸಾರ್ವತ್ರಿಕ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತರು. ಅದೂ ಅಲ್ಲದೇ ಈ ಬಾರಿ ಶ್ರೀರಾಮುಲು ಸೋಲಿನ ಸಹಾನುಭೂತಿ ವಾಲ್ಮೀಕಿ ಸಮುದಾಯದಲ್ಲಿ ಮನೆ ಮಾಡಿದೆ. ಹೀಗಾಗಿ ಬಳ್ಳಾರಿ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ಗೆ ಸಂಕೀರ್ಣವಾಗಿದೆ’ ಎಂದು ರಾಜಕೀಯ ತಜ್ಞರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT