ಕಲ್ಯಾಣ ಕರ್ನಾಟಕ ಮತ್ತು ಇಡೀ ರಾಜ್ಯಕ್ಕಾಗಿ ಸರ್ಕಾರ ಹಲವು ನಿರ್ಣಯಗಳನ್ನು ಸರ್ಕಾರ ಘೋಷಿಸಿದೆ. ಅದರ ಲಾಭ ಬಳ್ಳಾರಿಗೂ ಆಗಲಿದೆ
ಬಿ. ಝಡ್. ಜಮೀರ್ ಅಹಮದ್ ಖಾನ್ ಜಿಲ್ಲಾ ಉಸ್ತುವಾರಿ ಸಚಿವ
‘ಕಲ್ಯಾಣ’ ಎರಡು ಭಾಗ ಮಾಡಿ
ಬಳ್ಳಾರಿ ಜಿಲ್ಲೆ ಹೊಸ ತಾಲ್ಲೂಕುಗಳಿಗೆ ಮೂಲಸೌಕರ್ಯವಾದ ರಸ್ತೆ ಸಂಪರ್ಕ ಕಲ್ಪಿಸಿಲ್ಲ. ಬಳ್ಳಾರಿಯಿಂದ ಕಲಬುರಗಿ ರಸ್ತೆ ನನೆಗುದಿಗೆ ಬಿದ್ದಿದೆ. ಕೌಶಲಾಭಿವೃದ್ಧಿಗೆ ಅನುದಾನ ಕೊಡದಿರುವುದು ದುರಂತ. ಕಲಬುರಗಿ ಜಿಲ್ಲೆಗೆ ಸಿಂಹಪಾಲು ಕೊಡಲಾಗಿದೆ. ವಸತಿಯಲ್ಲಿ ಬಳ್ಳಾರಿಗೆ ಸೊನ್ನೆ. ಹೆಚ್ಚು ಉದ್ಯೋಗ ಸೃಷ್ಟಿಸಬಲ್ಲ ಎಂಎಸ್‌ಎಂಇ ಕ್ಷೇತ್ರಕ್ಕೆ ಬಿಡಿಗಾಸು ನೀಡಿದಿರುವುದು ದುಃಖಕರ. ಕಂದಾಯ ಇಲಾಖೆಯಲ್ಲೂ ಹೊಸ ತಾಲ್ಲೂಕುಗಳಿಗೆ ಸಹಾಯಹಸ್ತ ಇಲ್ಲ. ಕಲ್ಯಾಣ ಕರ್ನಾಟಕದ ಪರಿಕಲ್ಪನೆಯಲ್ಲಿ ಬೀದರ್ ಕಲಬುರಗಿ ಜಿಲ್ಲೆಗಳು ಹೆಚ್ಚಿನ ಲಾಭ ಪಡೆಯುತ್ತಿವೆ. ಹೀಗಾಗಿ ಕಲ್ಯಾಣ ಕರ್ನಾಟಕವನ್ನು ಎರಡು ಭಾಗವಾಗಿ ಮಾಡಿ ಬಳ್ಳಾರಿ ರಾಯಚೂರು ವಿಜಯನಗರ ಕೊಪ್ಪಳವನ್ನು ಪ್ರತ್ಯೇಕ ವಿಭಾಗವಾಗಿ ಮಾಡುವುದು ಲೇಸು-ಪನ್ನರಾಜ್ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ