ಕಂಪ್ಲಿ (ಬಳ್ಳಾರಿ): ತಾಲ್ಲೂಕಿನ ಮೆಟ್ರಿ ಗ್ರಾಮದಲ್ಲಿ ಮಂಗಳವಾರ ಹಲ್ಲಿ ಬಿದ್ದಿದ್ದ ಬಿಸಿಯೂಟ ತಿಂದು ಹೊನ್ನಳ್ಳಿ ಸಿದ್ದಪ್ಪನವರ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ 110ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡರು. ಅವರನ್ನು ತಕ್ಷಣವೇ ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು.

50 ವಿದ್ಯಾರ್ಥಿಗಳಿಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಮುಂದುವರಿದಿದೆ. ಇನ್ನುಳಿದ ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸಲಾಗಿದೆ . ಕಾವೇರಿ, ಸುಮಾ, ವಿದ್ಯಾ ಎಂಬ ವಿದ್ಯಾರ್ಥಿಗಳನ್ನು ಬಳ್ಳಾರಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಮೇಶ್ ಬಾಬು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

‘ಇಬ್ಬರು ವಿದ್ಯಾರ್ಥಿಗಳಿಗೆ ಊಟದಲ್ಲಿ ಹಲ್ಲಿ ಸಿಕ್ಕಿದ್ದು, ಇದರಿಂದಲೇ ಆರೋಗ್ಯ ಸಮಸ್ಯೆ ಉಂಟಾಗಿರಬಹುದು’ ಎಂದು ಅಂದಾಜಿಸಲಾಗಿದೆ. ಈ ವಿಷಯ ಗ್ರಾಮದಲ್ಲಿ ಹರಡುತ್ತಿದ್ದಂತೆ ಪಾಲಕರು, ಪೋಷಕರು ಶಾಲೆ ಬಳಿ ಜಮಾಯಿಸಿದರು. ಹೀಗಾಗಿ ಕೆಲ ಕಾಲ ಆತಂಕ ಮನೆ ಮಾಡಿತ್ತು.

ಶಾಸಕ ಜೆ.ಎನ್. ಗಣೇಶ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ವೈದ್ಯರ ಒಂದು ತಂಡವನ್ನು ಶಾಲೆಗೆ ಕಳುಹಿಸಿದರು.

‘ಮಧ್ಯಾಹ್ನದ ಬಿಸಿಯೂಟವನ್ನು ಇಸ್ಕಾನ್ಗೆ ವಹಿಸದಂತೆ ಬಿಸಿಯೂಟ ಅಡುಗೆದಾರರ ಸಂಘದಿಂದ ಮನವಿ ಬಂದಿತ್ತು. ಹೀಗಾಗಿ ಹಳೇ ಅಡುಗೆದಾರರನ್ನೇ ಮುಂದುವರಿಸಲಾಗಿದೆ. ಯಾರೇ ಆದರೂ, ಆಹಾರದಲ್ಲಿ ಉದಾಸೀನತೆ ತೋರುವುದು ಸರಿಯಲ್ಲ’ ಎಂದರು.

ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಎಚ್. ಜಗದೀಶ ಮಾತನಾಡಿ, ಅಡುಗೆದಾರರ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ. ಇಸ್ಕಾನ್ ಊಟ ಶಾಲೆಗೆ ಬರುವವರೆಗೆ ಬಿಸಿಯೂಟ ತಯಾರಿಸಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

‘ಕಳೆದ ವರ್ಷ ಅಡುಗೆದಾರರ ಅಸಡ್ಡೆಯಿಂದ ಕುಕ್ಕರ್ ಸ್ಫೋಟಗೊಂಡಿತ್ತು. ಐದಾರು ವರ್ಷಗಳ ಹಿಂದೆ ಬಿಸಿಯೂಟದಲ್ಲಿ ಹಲ್ಲಿ ಬಿದ್ದ ಪ್ರಕರಣವು ನಡೆದಿತ್ತು’ ಎಂದು ನೆನಪಿಸಿದರು.

ಸತ್ತ ಹಲ್ಲಿ ಚಿತ್ರ ತೆಗೆದು ಸ್ಟೇಟಸ್ ಹಾಕಿದ್ದ ಶಿಕ್ಷಕರು: ಸಾಂಬಾರ್ನಲ್ಲಿ ಹಲ್ಲಿ ಪತ್ತೆಯಾದ ಬಳಿಕ ಮೊಬೈಲ್ನಲ್ಲಿ ಫೋಟೊ ತೆಗೆದ ಶಾಲಾ ಶಿಕ್ಷಕರೊಬ್ಬರು ತಮ್ಮ ಸ್ಟೇಟಸ್ನಲ್ಲಿ ಹಲ್ಲಿ ಚಿತ್ರ ಅಪ್ಲೋಡ್ ಮಾಡಿದ್ದರು ಎನ್ನಲಾಗಿದೆ. ಅದನ್ನೇ ಗ್ರಾಮದ ಕೆಲವರು ಸ್ಕ್ರೀನ್ ಶಾಟ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಅದನ್ನು ನೋಡಿದ ಪಾಲಕ, ಪೋಷಕರು ತೀವ್ರವಾಗಿ ಖಂಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.