ಹರಪನಹಳ್ಳಿ: ಬಸವ ವಸತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಯೋಜನೆಯಡಿ 3 ಸಾವಿರ ಮನೆ ನಿರ್ಮಾಣಕ್ಕೆ ಆದೇಶ ಪತ್ರ ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರು ತಿಳಿಸಿದರು.

ತಾಲ್ಲೂಕಿನ ಅಡವಿಹಳ್ಳಿಯಲ್ಲಿ ಜರುಗಿದ ಸಮಾರಂಭದಲ್ಲಿ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು. ಗ್ರಾಮ ಪಂಚಾಯಿತಿ ಹಂತದಲ್ಲಿ ಮನೆ ಹಂಚಿಕೆ ವಿಚಾರದಲ್ಲಿ ದೂರುಗಳು ಬರುತ್ತಿವೆ. ಮನೆಗಳ ಹಂಚಿಕೆಯಲ್ಲಿ ಹಣದ ಆಮಿಷಕ್ಕೆ ಬಲಿಯಾಗಬಾರದು, ಪಿಡಿಒ, ಗ್ರಾಮ ಪಂಚಾಯಿತಿ ಸದಸ್ಯರು ಸಹ ಹಣ ಪಡೆಯಬಾರದು ಎಂದು ತಿಳಿಸಿದರು.

2022ನೇ ಸಾಲಿನಲ್ಲಿ ಮಂಜೂರಾಗಿದ್ದ 3 ಸಾವಿರ ಮನೆ ಅನುದಾನ ಬ್ಲಾಕ್ ಆಗಿದ್ದವು. ತಾಂತ್ರಿಕ ದೋಷ ಸರಿಪಡಿಸಿ ಅವುಗಳಿಗೆ ಮರುಜೀವ ನೀಡಲಾಗಿದೆ. 27 ಪಂಚಾಯಿತಿಗಳಿಗೆ 1900 ಮನೆಗಳು ಮಂಜೂರಾಗಿವೆ. ಹೊಸದಾಗಿ 1496 ಮನೆಗಳು ಮುಂಜೂರಾಗಿವೆ. ಮಂಜೂರಾಗದೇ ಇರುವ 10 ಗ್ರಾಮ ಪಂಚಾಯಿತಿಗಳಿಗೆ ಶೀಘ್ರ 1300 ಮನೆಗಳು ಮಂಜೂರಾಗುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಣ್ಣಿಹಳ್ಳಿ, ಸಾಸ್ವಿಹಳ್ಳಿ, ಕಡಬಗೆರೆ, ನಿಚ್ಚವ್ವನಹಳ್ಳಿ, ನೀಲಗುಂದ, ಹಲವಾಗಲು, ದುಗ್ಗಾವತಿ, ಚಿರಸ್ತಹಳ್ಳಿ, ಗುಂಡಗತ್ತಿ, ನಂದಿಬೇವೂರು, ತೊಗರಿಕಟ್ಟೆ ಕೆ.ಕಲ್ಲಹಳ್ಳಿ ವ್ಯಾಪ್ತಿಯಲ್ಲಿ ಆಶ್ರಯ ಮನೆ ನಿರ್ಮಾಣದ ಹಕ್ಕುಪತ್ರ ಆದೇಶ ಪತ್ರ ವಿತರಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಚ್.ಚಂದ್ರಶೇಖರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ಕೆ.ಕುಬೇರಪ್ಪ, ಮತ್ತೂರು ಬಸವರಾಜ್, ಅಡವಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನುಷಾ ನಾಗರಾಜ್, ಉಪಾಧ್ಯಕ್ಷೆ ಕವಿತಾ ಬಸವರಾಜ್, ಮುಖಂಡರಾದ ಪೂಜಾರ ದಕ್ಷಿಣಮೂರ್ತಿ, ನಸರುಲ್ಲಾ, ಮೂಕಪ್ಪ, ಸಿದ್ದಲಿಂಗಸ್ವಾಮಿ, ತಿಪ್ಪನಾಯಕನಹಳ್ಳಿ ಬಸವರಾಜ, ರಾಜು ಪೂಜಾರ, ಈಶಪ್ಪ, ರೇಣುಕಮ್ಮ, ಬಸವನಕೋಟೆ ನಾಗರಾಜ್, ದೇವರ ತಿಮ್ಲಾಪುರ ರಮೇಶ್, ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.