ತೆಕ್ಕಲಕೋಟೆ(ಬಳ್ಳಾರಿ ಜಿಲ್ಲೆ): ಹಚ್ಚೊಳ್ಳಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ನೂತನ ಕಟ್ಟಡ ಉದ್ಘಾಟನೆಗೊಂಡು ಏಳು ತಿಂಗಳು ಆಗಿವೆ. ಆದರೆ, ಬಾಡಿಗೆ ಗೋದಾಮಿನಲ್ಲಿ ಶಾಲೆ ನಡೆಯುತ್ತಿದ್ದು, ವಿದ್ಯಾರ್ಥಿನಿಯರಿಗೆ ಅಲ್ಲಿಯೇ ವಸತಿ ಕಲ್ಪಿಸಲಾಗಿದೆ.

‘9.02 ಎಕರೆ ಜಾಗದಲ್ಲಿ ₹21.88 ಕೋಟಿ ವೆಚ್ಚ ಮಾಡಿ ಕಟ್ಟಡ ನಿರ್ಮಿಸಲಾಗಿದೆ. ಆದರೂ ಅಲ್ಲಿ ಸ್ಥಳಾಂತರವಾಗದೇ ತಿಂಗಳಿಗೆ ₹93 ಸಾವಿರ ಕಟ್ಟಿ ಗೋದಾಮಿನಲ್ಲಿ ವಸತಿ ಶಾಲೆ ನಡೆಸಲಾಗುತ್ತಿದೆ’ ಎಂದು ಹಚ್ಚೊಳ್ಳಿ ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

ವಸತಿ ನಿಲಯದಲ್ಲಿ 6 ರಿಂದ 10ನೇ ತರಗತಿವರೆಗಿನ 247 ವಿದ್ಯಾರ್ಥಿನಿಯರು ಇದ್ದು, ಅವರಲ್ಲಿ ಹೆಚ್ಚಿನವರು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯವರು. ಗೋದಾಮಿನಲ್ಲಿ ಸೌಲಭ್ಯಗಳ ಕೊರತೆ ಇದೆ. ಮಲಗಲು ಜಾಗ ಇಲ್ಲ, ಮಳೆ ಬಂದರೆ ಕಟ್ಟಡ ಸೋರುತ್ತದೆ. ಗಾಳಿ ಬೆಳಕಿನ ವ್ಯವಸ್ಥೆ ಸಮರ್ಪಕವಾಗಿಲ್ಲ.

‘ಗೋದಾಮುಗಳಲ್ಲಿ ಪಾರಿವಾಳಗಳು ಗೂಡು ಕಟ್ಟಿರುವುದರಿಂದ ಹಗಲು ಮತ್ತು ರಾತ್ರಿ ಸಮವಸ್ತ್ರ ಮತ್ತು ಹಾಸಿಗೆ ಮೇಲೆ ಹಿಕ್ಕೆ ಹಾಕುತ್ತವೆ. ಗೋದಾಮು ಪಕ್ಕದಲ್ಲಿ ಗಿಡಗಂಟಿ ಬೆಳೆದಿರುವುದರಿಂದ ರಾತ್ರಿ ವೇಳೆ ಸೊಳ್ಳೆ ಕಾಟ ಹೆಚ್ಚಿರುತ್ತದೆ’ ಎಂದು ವಿದ್ಯಾರ್ಥಿನಿಯರು ತಿಳಿಸಿದರು.

ಮಕ್ಕಳಿಗೆ ಹತ್ತು ಸ್ನಾನ ಹಾಗೂ ಶೌಚಾಲಯ ಕೋಣೆಗಳಿದ್ದು, ಸುಸ್ಥಿತಿಯಲ್ಲಿ ಇಲ್ಲ. ವಿದ್ಯುತ್ ಸಮಸ್ಯೆಯೂ ಇದೆ. ವಿದ್ಯುತ್ ಪೂರೈಕೆ ಕಡಿತವಾದರೆ, ಬೆಳಕಿಗೆ ಪರ್ಯಾಯ ವ್ಯವಸ್ಥೆಯಿಲ್ಲ. ರಾತ್ರಿ ಹಾವು, ಚೇಳಿನ ಭಯವೂ ಇದೆ’ ಎಂದು ಅವರು ತಿಳಿಸಿದರು.

‘ಅಧಿವೇಶನದ ನಂತರ ಸಚಿವರು ನಿಗದಿ ಪಡಿಸುವ ದಿನಾಂಕ ಆಧರಿಸಿ ಇಲ್ಲವೆ ಜನವರಿ 1ಕ್ಕೆ ಮಕ್ಕಳನ್ನು ಶೀಘ್ರವಾಗಿ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು' ಎಂದು ಜಿಲ್ಲಾ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ
ಉಪನಿರ್ದೇಶಕ ದಿವಾಕರ್ ಕೆ. ಶಂಕಿನದಾಸರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕಟ್ಟಡ ಕಾಮಗಾರಿ ಮುಕ್ತಾಯಗೊಂಡಿದ್ದು ರಸ್ತೆ ಹಾಗೂ ವಿದ್ಯುತ್ ಸಂಪರ್ಕ ಕೆಲಸ ಬಾಕಿ ಇದೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ
-ಕೋಟೇಶ್ವರ ಕೆ.ವಿ. ಪ್ರಾಂಶುಪಾಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.