ಸಂಡೂರು (ಬಳ್ಳಾರಿ ಜಿಲ್ಲೆ): ಸಂಡೂರು ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಯಾಗಿ ಪಕ್ಷದ ರಾಜ್ಯ ಎಸ್.ಟಿ ಮೋರ್ಚಾದ ಅಧ್ಯಕ್ಷ ಬಂಗಾರು ಹನುಮಂತ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ
ನಡೆದ ಮೆರವಣಿಗೆಯು ಪಕ್ಷದ ಶಕ್ತಿ, ನಾಯಕರ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆಯಾಯಿತು.

ಸಂಡೂರಿನ ಎಪಿಎಂಸಿ ಪ್ರಾಂಗಣದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಪಕ್ಷದ ಮುಖಂಡರು, ಕಾರ್ಯ
ಕರ್ತರು ಪಾಲ್ಗೊಂಡರು. ಅಲ್ಲಿಂದ ಚುನಾವಣಾಧಿಕಾರಿ ಕಚೇರಿ ಅಂತರ ಒಂದು ಕಿಲೋಮೀಟರ್ ಆಗಿ
ದ್ದರೂ ಸ್ಥಳ ತಲುಪಲು ಮೂರು ಗಂಟೆಗೂ ಹೆಚ್ಚು ಸಮಯ ಬೇಕಾಯಿತು.

ಟಿಕೆಟ್ ಹಂಚಿಕೆ, ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಬಳ್ಳಾರಿಯ ಪ್ರಮುಖ ನಾಯಕರಲ್ಲಿ ಮುನಿಸು ಇಲ್ಲ ಎಂದು ಹೇಳಲು ಮತ್ತು ಕಾರ್ಯಕರ್ತರಲ್ಲಿನ ಗೊಂದಲ ನಿವಾರಿಸಲು ಪ್ರಯತ್ನಿಸಲಾಯಿತು.

ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿರದ ಶ್ರೀರಾಮುಲು ಮತ್ತು ಟಿಕೆಟ್ ಸಿಗದೆ ಮುನಿಸಿಕೊಂಡಿದ್ದ ದಿವಾಕರ್, ಶಾಸಕ ಜನಾರ್ದನ ರೆಡ್ಡಿ, ಅನಿಲ್ ಲಾಡ್ ಮುಂತಾದವರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವ ವಹಿಸಿದರು. ಆದರೆ, ಪ್ರಮುಖ ನಾಯಕ ಕಾರ್ತಿಕ್ ಘೋರ್ಪಡೆ ಗೈರಾಗಿದ್ದರು.

ಅಭ್ಯರ್ಥಿ ಬಂಗಾರು ಹನುಮಂತ ಮಾತನಾಡಿ, ‘ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲ ನಾಯಕರೂ ಒಟ್ಟಾಗಿ ಈ ಚುನಾವಣೆ ಗೆಲ್ಲುತ್ತೇವೆ’ ಎಂದರು.

ಪಕ್ಷದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಮಾತನಾಡಿ, ‘ರಾಜ್ಯ ಸರ್ಕಾರದ ವಿರುದ್ದ ಆಡಳಿತ ವಿರೋಧಿ ಅಲೆ ಎದ್ದಿದೆ. ಸಾಲು ಸಾಲು ಹಗರಣಗಳನ್ನು ಬಿಜೆಪಿ ಬಯಲಿಗೆಳೆದಿದೆ. ‘ಗ್ಯಾರಂಟಿ’ಗಳ ಹೆಸರಲ್ಲಿ ಚುನಾವಣೆ ನಡೆಯುತ್ತಿದೆ. ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾವಿಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳೇ ಗೆಲುವು ಸಾಧಿಸುವರು. ರಾಜ್ಯ ರಾಜಕೀಯದ ದಿಕ್ಕನ್ನು ಈ ಉಪಚುನಾವಣೆ ಫಲಿತಾಂಶ ಬದಲಿಸಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.