ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೆಕ್ಕಲಕೋಟೆ ಪಟ್ಟಣ ಪಂಚಾಯ್ತಿ | ಸಿಬ್ಬಂದಿ ಕೊರತೆ; ದೂಳು ಹಿಡಿದ ಕಡತ

ಚಾಂದ್ ಬಾಷ
Published : 20 ಮೇ 2024, 6:35 IST
Last Updated : 20 ಮೇ 2024, 6:35 IST
ಫಾಲೋ ಮಾಡಿ
Comments
ತೆಕ್ಕಲಕೋಟೆ ಪಟ್ಟಣದ 4ನೇ ವಾರ್ಡಿನ ಅಂಗನವಾಡಿಗೆ ತೆರಳುವ ರಸ್ತೆ ಸ್ವಚ್ಛತೆ ಇಲ್ಲದೆ ಗಬ್ಬು ನಾರುತ್ತಿದೆ
ತೆಕ್ಕಲಕೋಟೆ ಪಟ್ಟಣದ 4ನೇ ವಾರ್ಡಿನ ಅಂಗನವಾಡಿಗೆ ತೆರಳುವ ರಸ್ತೆ ಸ್ವಚ್ಛತೆ ಇಲ್ಲದೆ ಗಬ್ಬು ನಾರುತ್ತಿದೆ
ತೆಕ್ಕಲಕೋಟೆ ಪಟ್ಟಣ ಪಂಚಾಯಿತಿಯಲ್ಲಿ ದೂಳು ಹಿಡಿದ ಕಡತಗಳು
ತೆಕ್ಕಲಕೋಟೆ ಪಟ್ಟಣ ಪಂಚಾಯಿತಿಯಲ್ಲಿ ದೂಳು ಹಿಡಿದ ಕಡತಗಳು
ಪಟ್ಟಣ ಪಂಚಾಯ್ತಿಗೆ ಖಾಯಂ ಸಿಬ್ಬಂದಿ ನೇಮಕವಾಗುವವರೆಗೆ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು
ಶಂಶಾ ಆಲಂ ಸಿರುಗುಪ್ಪ ತಹಶೀಲ್ದಾರ್
ಸಿಬ್ಬಂದಿ ಕೊರತೆಯಿಂದಾಗಿ ಪಟ್ಟಣದ ಚರಂಡಿ ನೀರು ಹಾಗೂ ನೈರ್ಮಲ್ಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೆಚ್ಚಿನ ಸಿಬ್ಬಂದಿ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ
ಸಿದ್ದವೇಂದ್ರ ಬಾಲಪ್ಪ ಪಟ್ಟಣ ಪಂಚಾಯಿತಿ ಸದಸ್ಯರು
‘ಸದಸ್ಯತ್ಯ ಇದ್ದರೂ ಇಲ್ಲದಂತಾದ ಅಧಿಕಾರ’
‘ಹಾಲಿ ಆಡಳಿತ ಮಂಡಳಿ ಅಧಿಕಾರದ ಅವಧಿ ಇನ್ನು ಕೇವಲ 18 ತಿಂಗಳಷ್ಟೇ ಉಳಿದಿದೆ. ಲೋಕಸಭೆ ಚುನಾವಣೆ ಫಲಿತಾಂಶ ಬರುವವರೆಗೆ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ನಿಗದಿಯಾಗುವುದಿಲ್ಲ. ಅಲ್ಲಿಗೆ 15 ತಿಂಗಳು ಮಾತ್ರ ಉಳಿಯುತ್ತದೆ. ಫಲಿತಾಂಶದ ನಂತರ ತಕ್ಷಣ ಮೀಸಲಾತಿ ಪ್ರಕಟಗೊಂಡು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿದರೂ ಆಡಳಿತ ಸರಿದಾರಿಗೆ ಬರಲು 2ರಿಂದ 3 ತಿಂಗಳು ಬೇಕು. ಆಗ ಉಳಿಯುವುದು ಕೇವಲ ಒಂದು ವರ್ಷ ಮಾತ್ರ. ಪ್ರತಿಯೊಂದು ಕೆಲಸಕ್ಕೂ ಜಿಲ್ಲಾ ಆಡಳಿತ ಆಡಳಿತಾಧಿಕಾರಿ ಅನುಮೋದನೆ ಪಡೆಯುವ ಅನಿವಾರ್ಯತೆ ಇದೆ. ಯಾವ ಕೆಲಸವೂ ಸಮರ್ಪಕ ರೀತಿಯಲ್ಲಿ ನಡೆಯುತ್ತಿಲ್ಲ. ಜನ ನಮ್ಮನ್ನು ಶಪಿಸುತ್ತಿದ್ದಾರೆ. ಸದಸ್ಯತ್ವ ಇದ್ದರೂ ಇಲ್ಲದಂತಾಗಿದೆ’ ಎಂದು ವ್ಯವಸ್ಥೆ ಬಗ್ಗೆ ಕೆಲ ಸದಸ್ಯರು ಬೇಸರ ಅಸಹಾಯಕತೆ ಹೊರಹಾಕುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT