ಕೋಳಿ ಫಾರಂಗಳಲ್ಲಿ ಸತ್ತ ಕೋಳಿಗಳನ್ನು ತಂದು ಹೊರಗೆ ಬೀಸಾಡುತ್ತಿದ್ದಾರೆ. ಅವುಗಳನ್ನು ತಿನ್ನಲು ಬರುವ ನಾಯಿಗಳು, ಬಯಲಿನಲ್ಲೆ ಮಲಗಿರುತ್ತವೆ. ಕುರಿಗಳು ಮೇಯುವುದಕ್ಕೆಂದು ಹೋದಾಗ ಅವುಗಳನ್ನು ಅಟ್ಟಿಸಿಕೊಂಡು ಬಂದು ಕುಚ್ಚುತ್ತವೆ. ನಾವು ಬಿಡಿಸಲು ಹೋದರೂ ನಮ್ಮ ಮೇಲೆ ಎರಗುತ್ತವೆ. ನಾಯಿಗಳನ್ನು ಓಡಿಸದಿದ್ದರೆ ಕ್ಷಣಾರ್ಧದಲ್ಲಿ ಕುರಿಗಳನ್ನು ತಿಂದು ಮುಗಿಸುತ್ತವೆ
ಬೀದಿನಾಯಿ ಹಿಡಿಯಲು ಪುರಸಭೆಯಲ್ಲಿ ₹16 ಲಕ್ಷ ಅನುದಾನ ಮೀಸಲಿಟ್ಟಿದ್ದೇವೆ. ನಾಲ್ಕು ಬಾರಿ ಟೆಂಡರ್ ಕರೆದಿದ್ದೇವೆ. ಯಾರೂ ಟೆಂಡರ್‌ನಲ್ಲಿ ಭಾಗವಹಿಸುತ್ತಿಲ್ಲ. ಯಾರಾದರೂ ಭಾಗವಹಿಸಿ, ನಾಯಿಗಳು ಹಿಡಿಯಲು ಬಂದರೆ ಅವರಿಗೆ ಅಗತ್ಯವಾಗಿರುವ ರಕ್ಷಣೆಯ ಜೊತೆಗೆ ಸಿಬ್ಬಂದಿ ಒದಗಿಸಲಾಗುತ್ತದೆ. ಎಬಿಸಿ ಮಾಡಲು ನಿಬಂಧನೆಗಳಿಗೆ ಅನುಸಾರವಾಗಿ ನಮ್ಮಲ್ಲಿ ಸಾಧ್ಯವಾಗುತ್ತಿಲ್ಲ.