ಆನೇಕಲ್: ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ತಮ್ಮ ಮನೆ ಗೋಡೆ ಮೇಲೆ ಮತೀಯ ಸೌಹಾರ್ದ ಕದಡುವ ಗೋಡೆ ಬರಹ ಬರೆದಿರುವ ಘಟನೆ ತಾಲ್ಲೂಕಿನ ಸೂರ್ಯಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ಬಂಡಾಪುರದಲ್ಲಿ ನಡೆದಿದೆ.

ಬೆಂಗಳೂರಿನ ಬಾಣಸವಾಡಿ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಮುನಿರಾಜು ಬಂಡಾಪುರದ ತಮ್ಮ ಮನೆ ಕಾಂಪೌಂಡ್ ಮೇಲೆ ಕೋಮು ಸೌಹಾರ್ದ ಕದಡುವ ಗೋಡೆ ಬರಹ ಇಂಗ್ಲಿಷ್‌ನಲ್ಲಿ ಬರೆದಿದ್ದರು. ಇದನ್ನು ಗಮನಿಸಿದ ರಾಜು ಎಂಬುವವರು ಇಂತಹ ಬರವಣಿಗೆ ಬರೆಯಬಾರದು ಅಳಿಸಿ ಹಾಕಿ ಎಂದು ಹೇಳಿದ್ದರು. ಆದರೆ, ಮುನಿರಾಜು ’ನನ್ನ ಜಾಗ ನನ್ನ ಮನೆ ನನ್ನ ಇಷ್ಟದಂತೆ ಬರೆಯುತ್ತೇನೆ’ ಎಂದು ತಿಳಿಸಿದ್ದರು. ಈ ಸಂಬಂಧ ಬಂಡಾಪುರ ಪಿ.ರಾಜು ಎಂಬುವವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಸೂರ್ಯಸಿಟಿ ಪೊಲೀಸರು ಮುನಿರಾಜು ವಿರುದ್ಧ ಪ್ರಕಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.