ಬೆಳಗಾವಿ: ಹೊರವಲಯದ ಮಂಡೋಳ್ಳಿ ರಸ್ತೆ ಸಮೀಪದ ಗುಡ್ಡದ ಪ್ರದೇಶದಲ್ಲಿ ಅನಾಥವಾಗಿ ಬಿದ್ದಿರುವ ಯುದ್ಧ ಟ್ಯಾಂಕ್ಗೆ ಸೇನಾಡಳಿತದವರು ಬಣ್ಣ ಬಳಿದು ಸಿಂಗಾರಗೊಳಿಸಿ ಆಕರ್ಷಿಸುವಂತೆ ಮಾಡಿದ್ದಾರೆ. ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಐತಿಹಾಸಿಕ ಕುರುಹೊಂದನ್ನು ಸಂರಕ್ಷಿಸುವ ಕೆಲಸ ಮಾಡಿರುವುದಕ್ಕೆ ಬೆಳಗಾವಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಾ ಖುಷಿ ಹಂಚಿಕೊಳ್ಳುತ್ತಿದ್ದಾರೆ.

ನೆರೆಯ ಗೋವಾ ವಿಮೋಚನೆ ಚಳವಳಿಯಲ್ಲಿ ಬಳಸಲಾಗಿದ್ದ ಯುದ್ಧ ಟ್ಯಾಂಕ್ ಇದು. ಎಂಬ ಮಾಹಿತಿ ಇದೆ. ಕೋವಿಡ್ ಲಾಕ್ಡೌನ್ ನಿರ್ಬಂಧ ತೆರವುಗೊಂಡ ನಂತರ ಇದು ಸೆಲ್ಫಿ ಸ್ಪಾಟ್ ಆಗುವುದರಲ್ಲಿ ಸಂದೇಹವಿಲ್ಲ.

1947 ಆ.15ರಂದು ದೇಶಕ್ಕೆ ಸ್ವಾತಂತ್ರ್ಯ ಬಂದಿತಾದರೂ ಗೋವಾ ಪೋರ್ಚುಗೀಸರ ವಶದಲ್ಲೇ ಇತ್ತು. ಗೋವಾ ವಿಮೋಚನೆಗಾಗಿ 1960ರ ದಶಕದ ಆರಂಭದಲ್ಲಿ ದೊಡ್ಡ ಹೋರಾಟವೇ ನಡೆಯಿತು. ಇಲ್ಲಿನ ಮಿಲಟರಿ ಪ್ರದೇಶವೇ ಹೋರಾಟದ ನೆಲವಾಗಿತ್ತು. ಆಗ ಬಳಸಿದ ಕ್ಷಿಣಣಿಗಳು, ಯುದ್ಧ ಟ್ಯಾಂಕ್ಗಳು ಮಂಡೋಳಿ ಸುತ್ತಲಿನ ಪರಿಸರದಲ್ಲಿ ಬಿದ್ದಿದ್ದವು. ಬಹಳ ಭಾರವಿದ್ದ ಕಾರಣಕ್ಕೆ ಯುದ್ಧ ಟ್ಯಾಂಕ್ ತೆರವುಗೊಳಿಸಿರಲಿಲ್ಲ. ಅದು ಹಿಂದಿನಿಂದಲೂ ಅಲ್ಲಿಯೇ ಎಂದು ಸ್ಥಳೀಯರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.