ಬೆಂಗಳೂರು: ‘ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದಲೇ ತಾತ್ಕಾಲಿಕವಾಗಿ ಶೌಚದ ಟ್ಯಾಂಕ್ ನಿರ್ಮಿಸಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಬಡಾವಣೆಯ ಎಲ್ಲ ನಿವೇಶನಗಳ ಹಂಚಿಕೆದಾರರಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ’.

ಇದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(ಬಿಡಿಎ) ಎಂಜಿನಿಯರ್ಗಳು, ಬಡಾವಣೆ ಅಭಿವೃದ್ಧಿ ಕುರಿತು ಸರ್ಕಾರಕ್ಕೆ ನೀಡಿರುವ ಮಾಹಿತಿ. ಇದಕ್ಕೆ ನಿವೇಶನದಾದರರು ಆಕ್ರೋಶ ಹೊರಹಾಕಿದ್ದಾರೆ.

‘ಬಡಾವಣೆಯಲ್ಲಿ ಅರೆಬರೆ ಕಾಮಗಾರಿ ನಡೆದಿದ್ದು ಮೂಲಸೌಕರ್ಯ ಇಲ್ಲವಾಗಿದೆ. ಆದರೆ, ಅಧಿಕಾರಿಗಳು ವಾಸ್ತವ ಪರಿಸ್ಥಿತಿ ಮರೆಮಾಚಿ ತಪ್ಪು ಮಾಹಿತಿ ಕೊಡಿಸಿದ್ದಾರೆ’ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ.

‘2024ರ ಡಿಸೆಂಬರ್ ವೇಳೆಗೆ ಎಲ್ಲ ರೀತಿಯ ಮೂಲಸೌಕರ್ಯ ಕಲ್ಪಿಸಲಾಗುವುದು. ಸುಸಜ್ಜಿತ ಬಡಾವಣೆ ನಿರ್ಮಿಸುವುದಾಗಿ ಸರ್ಕಾರ ಹೇಳುತ್ತಿದೆ. ವಾಸ್ತವದಲ್ಲಿ 13 ವರ್ಷ ಕಳೆದರೂ 1,400 ಎಕರೆಯಷ್ಟು ಭೂಸ್ವಾಧೀನ ಕೆಲಸವೇ ನಡೆದಿಲ್ಲ. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ಹೈಕೋರ್ಟ್ನಲ್ಲಿವೆ. ಇನ್ನು ಸಿ.ಎ ನಿವೇಶನಗಳನ್ನು ಕಂದಾಯ ನಿವೇಶನಗಳಾಗಿ ರಚಿಸಿ ಮಾರಾಟ ಮಾಡಲಾಗಿದೆ. ಈ ತೊಡಕು ನಿವಾರಣೆಗೆ ಬಿಡಿಎ ಅಧಿಕಾರಿಗಳು ಕಾರ್ಯಪ್ರವೃತ್ತವಾಗಿಲ್ಲ. ಎಂಜಿನಿಯರ್ಗಳು ವಾಸ್ತವಕ್ಕೆ ವಿರುದ್ಧವಾದ ಮಾಹಿತಿ ಕೊಡಿಸುತ್ತಿದ್ದಾರೆ’ ಎಂಬುದು ನಿವೇಶನದಾರರು ಅಳಲಾಗಿದೆ.

‘ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿರುವ ಪ್ರದೇಶವನ್ನು ಬಿಡಿಎ ಎಂಜಿನಿಯರ್ ವಿಭಾಗವು ಸ್ವಾಧೀನಕ್ಕೆ ಪಡೆದು ಕುಡಿಯುವ ನೀರು ಸಂಪರ್ಕ, ಒಳಚರಂಡಿ, ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿದೆ. ವಿದ್ಯುತ್ ಸಂಪರ್ಕ ಸಹ ಕಲ್ಪಿಸಿದೆ. ಕೆಲವು ಬ್ಲಾಕ್ನಲ್ಲಿ ಭೂಮಾಲೀಕರು ಹೈಕೋರ್ಟ್ಗೆ ತೆರಳಿದ್ದು, ತಡೆಯಾಜ್ಞೆ ತಂದಿದ್ದಾರೆ. ಅಂತಹ ಜಮೀನಿನಲ್ಲಿ ಮಾತ್ರ ಬಡಾವಣೆ ರಚನೆ ಸಾಧ್ಯವಾಗಿಲ್ಲ. ಆ ಬ್ಲಾಕ್ಗಳಲ್ಲಿ ಕುಡಿಯುವ ನೀರು, ಒಳಚರಂಡಿ ಹಾಗೂ ರಸ್ತೆ ನಿರ್ಮಾಣ ಜಾಲಗಳಲ್ಲಿ ನಿರಂತರತೆ ಕಾಪಾಡಿಕೊಳ್ಳುವಲ್ಲಿ ಸಮಸ್ಯೆಯಾಗಿದೆ. ಈ ಭಾಗದ ನಿವೇಶನದಾರರಿಗೆ ಪರ್ಯಾಯ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಕಲ್ಪಿಸಿದ್ದೇವೆ’ ಎಂಬುದು ಎಂಜಿನಿಯರ್ಗಳ ಮಾಹಿತಿ.

‘ಸ್ವಾಧೀನ ಪಡಿಸಿಕೊಂಡಿರುವ ಪ್ರದೇಶದಲ್ಲೇ ಮೂಲಸೌಕರ್ಯ ಮರೀಚಿಕೆಯಾಗಿದ್ದು, ನಿವೇಶನದಾರರಿಗೆ ಮನೆ ನಿರ್ಮಾಣಕ್ಕೆ ಸಾಧ್ಯವಿಲ್ಲದ ಸ್ಥಿತಿಯಿದೆ’ ಎಂದು ವೇದಿಕೆ ಕಾರ್ಯದರ್ಶಿ ಅಶೋಕ್ ಮಾಯಿಗೌಡ ದೂರಿದರು.

ಇದುವರೆಗೂ ಕಲ್ಪಿಸಿರುವ ಮೂಲಸೌಕರ್ಯ ವ್ಯವಸ್ಥೆ ನಿವೇಶನದಾರರಿಗೆ ಮನೆ ನಿರ್ಮಿಸಲು ಪೂರಕವಾಗಿಲ್ಲ. ವಿದ್ಯುತ್ ಜಾಲದ ಪರಿಕರ ಅಳವಡಿಕೆಯೂ ಅರೆಬರೆಯಾಗಿವೆ. ವಿದ್ಯುತ್ ವೈರ್ಗಳು ಅಪಾಯ ಆಹ್ವಾನಿಸುತ್ತಿವೆ. ನಿವೇಶನದಾರರು ‘ತ್ರಿಶಂಕು’ ಸ್ಥಿತಿಯಲ್ಲಿದ್ದಾರೆ ಎಂದೂ ದೂರುತ್ತಾರೆ. ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ಬಿಡಿಎ ಎಂಜಿನಿಯರ್ಗಳು ಸಂಪರ್ಕಕ್ಕೆ ಸಿಗಲಿಲ್ಲ.

ಆರು ತಿಂಗಳಲ್ಲಿ ಆನ್ಲೈನ್ ಅನುಮೋದನೆ

‘ಹಂಚಿಕೆದಾರರು ತಮ್ಮ ನಿವೇಶನಗಳಲ್ಲಿ ಮನೆ ಕಟ್ಟಲು ಅನುಮತಿ ಪಡೆಯಲು ಸದ್ಯ ಪರದಾಡುವ ಸ್ಥಿತಿಯಿದೆ. ಸಮಸ್ಯೆ ನಿವಾರಿಸಲು ಆನ್ಲೈನ್ ಮೂಲಕವೇ ಅನುಮತಿ ಪಡೆಯುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಆರು ತಿಂಗಳಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ’ ಎಂದು ಬಿಡಿಎ ಮೂಲಗಳು ತಿಳಿಸಿವೆ.

‘ಹಸಿರು ಪೀಠದ ಆದೇಶ ಉಲ್ಲಂಘನೆ’

‘ಅರೆಬರೆ ಒಳಚರಂಡಿ ಕಾಮಗಾರಿ ನಡೆಸಲಾಗಿದೆ. ಮನೆ ನಿರ್ಮಿಸುತ್ತಿರುವ ನಿವೇಶನದಾರರಿಗೆ ಕೊಳಚೆ ನೀರು ವಿಲೇವಾರಿಗೆ ತಾತ್ಕಾಲಿಕವಾಗಿ ಶೌಚದ ಗುಂಡಿ ತಾವೇ ನಿರ್ಮಿಸಿಕೊಳ್ಳುವಂತೆ ಮಾಲೀಕರಿಗೆ ಮೌಖಿಕವಾಗಿ ಬಿಡಿಎ ಸಿಬ್ಬಂದಿಯೇ ಮನವಿ ಮಾಡುತ್ತಿದ್ದಾರೆ. ಇದು ಹಸಿರು ಪೀಠದ ಆದೇಶದ ಉಲ್ಲಂಘನೆಯಾಗಿದೆ’ ಎಂದು ವೇದಿಕೆ ಪದಾಧಿಕಾರಿಯೊಬ್ಬರು ಹೇಳಿದ್ದಾರೆ. ‘ಕೊಳವೆಬಾವಿ ನೀರನ್ನೇ ಬಳಸಿಕೊಂಡು ಹಲವರು ಮನೆ ನಿರ್ಮಿಸುತ್ತಿದ್ದಾರೆ. ಕೆಲವು ಕೊಳವೆಬಾವಿಗಳು ನೀರಿಲ್ಲದೇ ಬತ್ತಿ ಹೋಗಿದ್ದು ಸಮಸ್ಯೆಯಾಗಿದೆ. ಬಡಾವಣೆಯ ಬಹುತೇಕ ಭಾಗವು ಕತ್ತಲಿನಲ್ಲಿದೆ. ವಿದ್ಯುತ್ ಸಂಪರ್ಕಕ್ಕೂ ತಿಂಗಳುಗಟ್ಟಲೆ ಅಲೆಯಬೇಕಾಗಿದೆ’ ಎಂದು ನೋವು ತೋಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.