ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ನಿರ್ಮಿಸಿರುವ ವಸತಿ ಸಮುಚ್ಚಯಗಳ ಫ್ಲ್ಯಾಟ್‌ಗಳನ್ನು ಆನ್‌ಲೈನ್‌ನಲ್ಲೇ ಮಾರಾಟ ಮಾಡುವ ಪ್ರಕಿಯೆಗೆ ಇತ್ತೀಚೆಗೆ ಚಾಲನೆ ನೀಡಿದೆ. ಒಂದು ವಾರ ಪ್ರಾಯೋಗಿಕವಾಗಿ ನಡೆದ ಮಾರಾಟ ಪ್ರಕ್ರಿಯೆ ವೇಳೆಯೇ 40 ಫ್ಲ್ಯಾಟ್‌ಗಳು ಬಿಕರಿ ಆಗಿವೆ.

ಬಿಡಿಎ ಈ ಹಿಂದೆ ವಿವಿಧ ಬಡಾವಣೆಗಳಲ್ಲಿ ನಿವೇಶನಗಳನ್ನು ಹಂಚಿಕೆ ಮಾಡುವ ತೆರದಲ್ಲೇ ಅರ್ಜಿ ಕರೆದು ಲಾಟರಿ ಎತ್ತುವ ಮೂಲಕ ಫ್ಲ್ಯಾಟ್‌ಗಳನ್ನು ಹಂಚಿಕೆ ಮಾಡುತ್ತಿತ್ತು. ಈ ವಿಧಾನದಲ್ಲಿ ಗ್ರಾಹಕರಿಗೆ ಅವರು ಬಯಸಿದ ಫ್ಲ್ಯಾಟ್ ಸಿಗುತ್ತದೆ ಎಂಬ ಖಾತರಿ ಇರಲಿಲ್ಲ. ಹಾಗಾಗಿ ಖರೀದಿಗೆ ಜನ ಹಿಂದೇಟು ಹಾಕುತ್ತಿದ್ದರು. ಬಿಡಿಎ ವಸತಿ ಸಮುಚ್ಚಯಗಳಲ್ಲಿ ಸಾವಿರಾರು ಫ್ಲ್ಯಾಟ್‌ಗಳು ಈ ಕಾರಣದಿಂದಾಗಿ ಬಿಕರಿ ಆಗದೇ ಉಳಿದಿದ್ದವು.

ಗ್ರಾಹಕರು ನೇರವಾಗಿ ವಸತಿ ಖರೀದಿಸಲು ಬಿಡಿಎ ನಾಲ್ಕು ವರ್ಷಗಳ ಹಿಂದೆ ಅವಕಾಶ ಕಲ್ಪಿಸಿತು. ಈ ಸಲುವಾಗಿ ಕೇಂದ್ರ ಕಚೇರಿಯಲ್ಲಿ ಸಹಾಯ ಕೇಂದ್ರವನ್ನೂ ತೆರೆಯಿತು. ಆ ಬಳಿಕವೂ ಖಾಸಗಿ ಬಿಲ್ಡರ್‌ಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಮಾರುಕಟ್ಟೆ ವಿಸ್ತರಣೆ ತಂತ್ರಗಾರಿಕೆ ರೂಪಿಸುವಲ್ಲಿ ವಿಫಲವಾಗಿದ್ದರಿಂದ ಬಿಡಿಎ ಫ್ಲ್ಯಾಟ್‌ಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಬೇಡಿಕೆ ಸೃಷ್ಟಿಯಾಗಿರಲಿಲ್ಲ. ಕೆಲವು ವಸತಿ ಸಮುಚ್ಚಯಗಳಲ್ಲಿ, ಲಿಫ್ಟ್, ಕುಡಿಯುವ ನೀರು ಪೂರೈಕೆ, ವಾಹನ ನಿಲುಗಡೆ ತಾಣ, ವಿದ್ಯುತ್ ಮುಂತಾದ ಮೂಲಸೌಕರ್ಯಗಳ ಕೊರತೆ ಇದ್ದುದೂ ಇದಕ್ಕೆ ಕಾರಣವಾಗಿತ್ತು.

‘ವಸತಿ ಸಮುಚ್ಚಯಗಳ ಮೂಲಸೌಕರ್ಯಗಳ ಕೊರತೆ ನೀಗಿಸುವುದರ ಜೊತೆಗೆ ಫ್ಲ್ಯಾಟ್ ಖರೀದಿ ವಿಧಾನವನ್ನೂ ಸರಳಗೊಳಿಸಿದ್ದೇವೆ. ಜನ ಆನ್‌ಲೈನ್‌ನಲ್ಲಿ ಬಸ್ ಟಿಕೆಟ್ ಕಾಯ್ದಿರಿಸಿದಷ್ಟೇ ಸುಲಭವಾಗಿ ಬಿಡಿಎ ಫ್ಲ್ಯಾಟ್‌ಗಳನ್ನು ಖರೀದಿಸಬಹುದು. ಹಾಗಾಗಿ ಬಿಡಿಎ ಫ್ಲ್ಯಾಟ್‌ಗಳ ಖರೀದಿಗೂ ಜನ ಆಸಕ್ತಿ ತೋರಿಸುತ್ತಿದ್ದಾರೆ’ ಎಂದು ಆಯುಕ್ತ ಎಚ್.ಆರ್.ಮಹಾದೇವ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದೇ ವಾರದಲ್ಲಿ 40 ಫ್ಲ್ಯಾಟ್‌ಗಳು ಮಾರಾಟವಾಗಿರುವುದು ಸಣ್ಣ ವಿಚಾರವೇನಲ್ಲ. ಗ್ರಾಹಕರು ಫ್ಲ್ಯಾಟ್‌ಗಳ ಸಕಲ ವಿವರಗಳನ್ನೂ ಬಿಡಿಎ ವೆಬ್‌ಸೈಟ್‌ನಲ್ಲೇ (https://housing.bdabangalore.org/) ನೋಡಬಹುದು. ವಸತಿ ಸಮುಚ್ಚಯ ಎಲ್ಲಿದೆ ಎಂಬುದನ್ನು ಗೂಗಲ್ ಮ್ಯಾಪ್‌ನಲ್ಲಿ ಗುರುತಿಸಬಹುದು. ಪ್ರತಿ ವಸತಿಯ ಒಳಗಡೆ ಹೇಗಿದೆ ಎಂಬ ವಿಡಿಯೊಗಳನ್ನೂ ವೆಬ್‌ಸೈಟ್‌ನಲ್ಲೇ ನೋಡಬಹುದು. ಶೀಘ್ರವೇ ಬಿಡಿಎ ಎಲ್ಲ ಫ್ಲ್ಯಾಟ್‌ಗಳೂ ಮಾರಾಟವಾಗಲಿವೆ’ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತಿಳಿಸಿದರು.

ಖುದ್ದು ವೀಕ್ಷಣೆಗೂ ಅವಕಾಶ
‘ಯಾರಾದರೂ ಗ್ರಾಹಕರು ವಸತಿ ಸಮುಚ್ಚಯಕ್ಕೆ ಭೇಟಿ ನೀಡಿ ಫ್ಲ್ಯಾಟ್‌ಗಳನ್ನು ವೀಕ್ಷಿಸಲು ಆಸಕ್ತಿ ತೋರಿಸಿದರೆ ಅದಕ್ಕೂ ಅವಕಾಶ ಕಲ್ಪಿಸಲಾಗುತ್ತದೆ. ಅಲ್ಲಿ ಸೂಕ್ತ ಮೂಲಸೌಕರ್ಯ ಕಲ್ಪಿಸಲಾಗಿದೆಯೇ ಇಲ್ಲವೇ ಎಂಬುದನ್ನು ಅವರು ಖುದ್ದಾಗಿ ಪರಿಶೀಲಿಸಬಹುದು. ಗ್ರಾಹಕರಿಗೆ ಈ ಬಗ್ಗೆ ಮಾಹಿತಿ ನೀಡಲೆಂದೇ ಪ್ರತಿ ವಸತಿ ಸಮುಚ್ಚಯದ ಬಳಿಯೂ ಸಹಾಯಕ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಫ್ಲ್ಯಾಟ್ ಆನ್‌ಲೈನ್‌ನಲ್ಲೇ ಖರೀದಿ ಹೇಗೆ?

‘ಬಿಡಿಎ ವೆಬ್‌ಸೈಟ್‌ನಲ್ಲಿ ವಸತಿಗಳನ್ನು ಆನ್‌ಲೈನ್‌ನಲ್ಲಿ ಖರೀದಿಸುವ ಕಿಂಡಿಯನ್ನು ಕ್ಲಿಕ್ ಮಾಡಿದಾಗ ಪ್ರಾಧಿಕಾರದ ವಸತಿ ಯೋಜನೆಗಳ ವಿವರಗಳು ಒಂದೊಂದಾಗಿ ತೆರೆದುಕೊಳ್ಳುತ್ತವೆ. ಪ್ರತಿ ವಸತಿ ಸಮುಚ್ಚಯದಲ್ಲಿ ಏನೆಲ್ಲ ಸೌಕರ್ಯಗಳಿವೆ ಎಂಬ ವಿವರಗಳು ಲಭಿಸುತ್ತವೆ. ಗ್ರಾಹಕರು ತಮ್ಮಿಷ್ಟದ ಬ್ಲಾಕ್ ಅನ್ನು ಕ್ಲಿಕ್ಕಿಸಿದರೆ ಅದರಲ್ಲಿ ಎಷ್ಟು ವಸತಿಗಳಿವೆ ಎಂದು ತಿಳಿಯುತ್ತದೆ. ಫ್ಲ್ಯಾಟ್‌ಗಳು ಬುಕ್ ಆಗಿದ್ದರೆ ಅದರ ಸಂಖ್ಯೆ ಕೆಂಬಣ್ಣದಲ್ಲಿ, ಖರೀದಿಗೆ ಯಾರಾದರೂ ಆಸಕ್ತಿ ತೋರಿಸಿ ಪೂರ್ತಿ ಹಣ ಪಾವತಿ ಮಾಡಿರದಿದ್ದರೆ ಹಳದಿ ಬಣ್ಣದಲ್ಲಿ ಹಾಗೂ ಮಾರಾಟಕ್ಕೆ ಲಭ್ಯ ಇರುವ ಫ್ಲ್ಯಾಟ್‌ಗಳ ಸಂಖ್ಯೆ ಹಸಿರು ಬಣ್ಣದಲ್ಲಿರುತ್ತದೆ’ ಎಂದು ಪ್ರಾಧಿಕಾರದ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ್ ಎಲ್.ಪಿ ಮಾಹಿತಿ ನೀಡಿದರು.

‘ಗ್ರಾಹಕರು ಮಾರಾಟಕ್ಕೆ ಲಭ್ಯವಿರುವ ಫ್ಲ್ಯಾಟ್ ಮೇಲೆ ಕ್ಲಿಕ್ ಮಾಡಿದಾಗ ಅದರ ವಿಸ್ತೀರ್ಣ, ಅಂದಾಜು ವೆಚ್ಚ, ಅರ್ಜಿ ಸಲ್ಲಿಸುವ ವೇಳೆ ಎಷ್ಟು ಮುಂಗಡ ಪಾವತಿಸಬೇಕಾಗುತ್ತದೆ ಎಂಬ ವಿವರಗಳು ತೆರೆದುಕೊಳ್ಳುತ್ತವೆ. ಅದನ್ನು ಬುಕ್ ಮಾಡಿದ ಬಳಿಕ ಗ್ರಾಹಕರು ತಮ್ಮ ಹೆಸರು ವಿಳಾಸ, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪ್ಯಾನ್ ಸಂಖ್ಯೆ ಮತ್ತಿತರ ವಿವರಗಳನ್ನು ಭರ್ತಿ ಮಾಡಬೇಕು. ಪೂರಕ ದಾಖಲೆ ಅಪ್‌ಲೋಡ್ ಮಾಡಬೇಕು. ಮುಂಗಡ ಪಾವತಿಸಿದರೆ ಫ್ಲ್ಯಾಟ್ ತಮ್ಮ ಹೆಸರಿನಲ್ಲೇ ಬುಕ್ ಆಗುತ್ತದೆ’ ಎಂದು ವಿವರಿಸಿದರು. ‘ಗ್ರಾಹಕರು ಪೂರ್ಣ ಮೊತ್ತವನ್ನು ಆನ್‌ಲೈನ್‌ನಲ್ಲೇ ಪಾವತಿಸಬಹುದು. ಇದಾಗಿ 20 ದಿನಗಳಲ್ಲಿ ಆನ್‌ಲೈನ್‌ನಲ್ಲೇ ಫ್ಲ್ಯಾಟ್‌ನ ಖರೀದಿಗೆ ಸಂಬಂಧಿಸಿದ ದಾಖಲೆಗಳನ್ನೂ ಆನ್‌ಲೈನ್‌ನಲ್ಲೇ ಕಳುಹಿಸಿಕೊಡಲಾಗುತ್ತದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.