ಬೆಂಗಳೂರು: ನಗರದಲ್ಲಿ ನಕ್ಷೆ ಉಲ್ಲಂಘಿಸಿ ನಿರ್ಮಿಸಲಾಗುತ್ತಿರುವ ಕಟ್ಟಡಗಳು ಹಾಗೂ ಅನಧಿಕೃತ ನಿರ್ಮಾಣಗಳನ್ನು ತೆರೆವುಗೊಳಿಸಲು ವಲಯ ಆಯುಕ್ತರಿಗೆ ಜವಾಬ್ದಾರಿ ನೀಡಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ.

ಮಂಜೂರು ನಕ್ಷೆಗಳ ಉಲ್ಲಂಘನೆ, ಅನಧಿಕೃತ ಕಟ್ಟಡಗಳ ನಿರ್ಮಾಣ ತಡೆಗೆ ಸಂಬಂಧಿಸಿದಂತೆ ಅಧಿಕಾರ ಪ್ರತ್ಯಾಯೋಜನೆ ಆದೇಶವನ್ನು ಹೊರಡಿಸಿರುವ ಮುಖ್ಯ ಆಯುಕ್ತರು, ಎಲ್ಲ ರೀತಿಯ ಉಲ್ಲಂಘನೆಗಳನ್ನು ತಡೆಯಲು ಸೂಚಿಸಿದ್ದಾರೆ.

ನಗರದಲ್ಲಿ ಮಂಜೂರಾಗುವ ಕಟ್ಟಡ ನಕ್ಷೆಗಳನ್ನು ಆನ್ಲೈನ್ನಲ್ಲಿ ಪ್ರಕಟಿಸಲಾಗುತ್ತದೆ. ಈ ನಕ್ಷೆ ಮಂಜೂರಾದ 30 ದಿನಗಳೊಳಗೆ ಕಟ್ಟಡ ಮಾಲೀಕರು ಅಥವಾ ಅವರ ಪ್ರತಿನಿಧಿಗಳ ಸಮ್ಮುಖದಲ್ಲಿ ‘ಬಿಲ್ಡಿಂಗ್ ಪ್ಲಿಂಥ್ ಲೈನ್’ ಅನ್ನು ನಗರ ಯೋಜನೆ ಅಧಿಕಾರಿಗಳು ಗುರುತು ಮಾಡಿಕೊಡಬೇಕು. ಅದನ್ನು ಕೇಂದ್ರ ಹಾಗೂ ವಲಯ ಕಚೇರಿಯ ಜಂಟಿ ನಿರ್ದೇಶಕರು ದೃಢೀಕರಿಸಬೇಕು.

ವಾರ್ಡ್ನಲ್ಲಿ ಕಿರಿಯ, ಸಹಾಯಕ ಎಂಜಿನಿಯರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ), ಕಾರ್ಯಪಾಲಕ ಎಂಜಿನಿಯರ್ಗಳು ಮಂಜೂರಾದ ನಕ್ಷೆಯ ವಿವರ ಪಡೆದುಕೊಂಡು, ಅದರ ಅನುಸಾರ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿರುವುದನ್ನು ಕಾಲಕಾಲಕ್ಕೆ ಖಾತರಿಪಡಿಸಿಕೊಳ್ಳಬೇಕು.

ಕಟ್ಟಡ ನಿರ್ಮಾಣದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದರೆ, ಉಪ ವಿಭಾಗದ ಎಇಇ ಅವರು ಕಿರಿಯ ಎಂಜಿನಿಯರ್ ಅವರನ್ನು ಪರಿಶೀಲನೆಗೆ ಕಳುಹಿಸಬೇಕು. ದೂರು ಸ್ವೀಕೃತವಾದ 24 ಗಂಟೆಯೊಳಗೆ ಆ ಕಟ್ಟಡದ ಸಮಗ್ರ ವರದಿಯನ್ನು ಎಇಇಗೆ ಸಲ್ಲಿಸಬೇಕು.

ಕಟ್ಟಡ ನಿರ್ಮಾಣದಲ್ಲಿನ ನಕ್ಷೆ ಉಲ್ಲಂಘನೆಗಳನ್ನು ಮಾಲೀಕರ ಸಮಕ್ಷಮದಲ್ಲಿ ಪರಿಶೀಲಿಸಲು ಎಇಇ ಅವರು ನೋಟಿಸ್ ಜಾರಿ ಮಾಡಬೇಕು. 15 ದಿನದಲ್ಲಿ ಸ್ಥಳ ಪರಿಶೀಲನೆ ಮಾಡಬೇಕು. ಉಲ್ಲಂಘನೆಯ ವರದಿಯನ್ನು ವಲಯ ಆಯುಕ್ತರು ಪರಾಮರ್ಶಿಸಿದ ನಂತರ, ಎಇಇ ಅವರು ಕಟ್ಟಡ ನಿರ್ಮಾಣ ತಡೆಯಲು ಮಾಲೀಕರಿಗೆ ನೋಟಿಸ್ ನೀಡಿ 15 ದಿನ ಕಾಲಾವಕಾಶ ನೀಡಬೇಕು. ಈ ಅವಧಿಯಲ್ಲಿ ಎಲ್ಲ ರೀತಿಯ ತನಿಖೆಗಳನ್ನು ಮಾಡಿ, ವಲಯ ಆಯುಕ್ತರು 30 ದಿನಗಳ ಕಾಲಾವಕಾಶ ನೀಡಿ ನಿರ್ಮಾಣವಾಗುತ್ತಿರುವ ಕಟ್ಟಡವನ್ನು ತೆರವು ಮಾಡಲು ಆದೇಶ ಜಾರಿ ಮಾಡಬೇಕು ಎಂದು ತುಷಾರ್ ಗಿರಿನಾಥ್ ಸೂಚಿಸಿದ್ದಾರೆ.

‘ಎಂಜಿನಿಯರ್ಗಳ ಮೇಲೆ ಶಿಸ್ತುಕ್ರಮ’

ಕಟ್ಟಡ ನಿರ್ಮಾಣ ತಡೆಯಲು ಮಾಲೀಕರಿಗೆ ನೋಟಿಸ್ ಜಾರಿಯಾದ ಮೇಲೆ ಯಾವುದೇ ನಿರ್ಮಾಣವಾಗದಂತೆ ತಡೆಯುವ ಜವಾಬ್ದಾರಿ ಆಯಾ ವಾರ್ಡ್ನ ಕಿರಿಯ/ ಸಹಾಯಕ ಎಂಜಿನಿಯರ್ ಹಾಗೂ ಎಇಇ ಅವರದ್ದಾಗಿರುತ್ತದೆ. ಅವರು ನಿರ್ಲಕ್ಷ್ಯ ವಹಿಸಿದರೆ ಶಿಸ್ತುಕ್ರಮ ಜರುಗಿಸಲಾಗುತ್ತದೆ.

ನಿಯಮ ಉಲ್ಲಂಘಿಸಿರುವ ಕಟ್ಟಡಗಳನ್ನು ತೆರವುಗೊಳಿಸಲು ವಲಯ ಆಯುಕ್ತರು ಆದೇಶ ಹೊರಡಿಸಿ, ಕಾಲಮಿತಿಯಲ್ಲಿ ತೆರವು ಕಾರ್ಯವನ್ನು ಪೂರ್ಣಗೊಳಿಸಬೇಕು. ದರಪಟ್ಟಿಗಳ ಅನುಸಾರ ಅನಧಿಕೃತ ಕಟ್ಟಡ ನಿರ್ಮಾಣಗಳನ್ನು ತೆರವುಗೊಳಿಸಲು, ಅಂತಸ್ತುವಾರು ಪ್ರತಿ ಚದರ ಮೀಟರ್ ವೆಚ್ಚವನ್ನು ಸಿದ್ಧಮಾಡಿ, ಅದನ್ನು ವಲಯ ಆಯುಕ್ತರಿಂದ ಕಾರ್ಯಪಾಲಕ ಎಂಜಿನಿಯರ್ ಅವರು ಅನುಮೋದನೆ ಪಡೆಯಬೇಕು. ಕಟ್ಟಡ ತೆರವು ಕಾರ್ಯಕ್ಕೆ ಏಜೆನ್ಸಿಯನ್ನು ನೇಮಿಸಿಕೊಳ್ಳಬೇಕು.

ಕಟ್ಟಡ ತೆರವಿನ ವೆಚ್ಚವನ್ನು ವಲಯದ ಆವರ್ತ ನಿಧಿಯಿಂದ ಒದಗಿಸಬೇಕು. ನಂತರ ಆ ವೆಚ್ಚವನ್ನು ಕಂದಾಯ ವಿಭಾಗದಿಂದ ಕಟ್ಟಡ ಮಾಲೀಕರಿಂದ ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿ ಕಾಯ್ದೆ–2020ರ ಹಲವು ಕಲಂಗಳನ್ನು ನಮೂದಿಸಿ ಮುಖ್ಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.