ಬೆಂಗಳೂರು: ಸುಗಮ ಸಂಗೀತವು ಮನರಂಜನೆ ಮತ್ತು ಮೌಲ್ಯಗಳಿಂದ ಕೂಡಿರುವ ಕ್ಷೇತ್ರ. ಇದು ಇನ್ನಷ್ಟು ವಿಸ್ತಾರಗೊಳ್ಳಬೇಕು ಎಂದು ಸಂಗೀತ ನಿರ್ದೇಶಕಿ ಜಯಶ್ರೀ ಅರವಿಂದ್ ತಿಳಿಸಿದರು.

ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟ ಹಾಗೂ ಅನುರಾಗ್ಸ್ ಸಂಗೀತ ಗುರುಕುಲ ಸಂಸ್ಥೆ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ‘ಭಾವಾಭಿಯಾನ’ ಹಳೆಯ ಮತ್ತು ನೂತನ ಭಾವಗೀತೆಗಳ ಸರಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಒಕ್ಕೂಟದ ಅಧ್ಯಕ್ಷ ಕಾ.ವೆಂ. ಶ್ರೀನಿವಾಸಮೂರ್ತಿ ಮಾತನಾಡಿ, ‘ರೋಚಕ ಸಂಗತಿಗಳಿಗೆ ಸಿಗುತ್ತಿರುವ ಪ್ರಚಾರವು ರಚನಾತ್ಮಕ ಸಂಗತಿಗಳಿಗೆ ಸಿಗುತ್ತಿಲ್ಲ. ಜನರ ಮತ್ತು ಸಮಾಜದ ಆರೋಗ್ಯವನ್ನು ವೃದ್ಧಿಸಲು ಕಾವ್ಯ, ಸಂಗೀತ ಮತ್ತು ಉತ್ತಮ ಸುಗಮ ಸಂಗೀತ ಅಗತ್ಯ ಎಂದು ಹೇಳಿದರು.

ಒಕ್ಕೂಟದ ಗೌರವ ಅಧ್ಯಕ್ಷ ಆನಂದ್ ಮಾದಲಗೆರೆ ಶುಭ ಹಾರೈಸಿದರು. ಅನುರಾಗ್ಸ್ ಸಂಗೀತ ಗುರುಕುಲದ ವಿದ್ಯಾರ್ಥಿಗಳು ಸಮೂಹ ಗಾಯನವನ್ನು ನಡೆಸಿಕೊಟ್ಟರು.

ಕೀಬೋರ್ಡ್‌ನಲ್ಲಿ ಪುಣ್ಯೇಶ್ ಕುಮಾರ್, ತಬಲಾದಲ್ಲಿ ಶರಣ್ ಕುಮಾರ್ ಹೂಗಾರ್, ರಿದಂಪ್ಯಾಡ್‌ನಲ್ಲಿ ಪವನಕುಮಾರ್ ಸಾಥ್ ನೀಡಿದರು. ಇಂಚರ ಪ್ರವೀಣ್ ಕುಮಾರ್, ಆನಂದ ಮಾಸಲಗೆರೆ, ವೆಂಕಟೇಶ್ ಮೂರ್ತಿ ಶಿರೂರ್, ಅನುರಾಗ ಗದ್ದಿ, ಬಂಡ್ಲಳ್ಳಿ ವಿಜಯಕುಮಾರ್, ವಿಜಯ ಹವಾನೂರು, ರಾಜಶೇಖರ್ ನೂಲಿ, ಕೆ. ಶಿಲ್ಪಶ್ರೀ, ಪ್ರಶಾಂತ್ ಬೂದಿಹಾಳು, ರಂಜಿತಾ ಶೃಂಗೇರಿ ಗಾಯನ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.