ಬೆಂಗಳೂರು: ಕ್ರಿಪ್ಟೊ ಹೂಡಿಕೆ ನೆಪ ಹಾಗೂ ಲಿಂಕ್ ಕಳುಹಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಆರೋಪದಡಿ ಶಾನೀದ್ ಅಬ್ದುಲ್ ಅಮೀದ್ (29) ಎಂಬುವವರನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಕೇರಳದ ಕಣ್ಣೂರಿನ ಶಾನೀದ್, ಹಲವು ತಿಂಗಳಿನಿಂದ ಕೃತ್ಯ ಎಸಗುತ್ತಿದ್ದ. ಇತ್ತೀಚೆಗಷ್ಟೇ ಸುಳಿವು ಪತ್ತೆ ಮಾಡಿ ಈತನನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಮೊಹಮ್ಮದ್ ನಿಹಾಲ್ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಅಪರಿಚಿತರ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು ಸಿಮ್ಕಾರ್ಡ್ ಖರೀದಿಸುತ್ತಿದ್ದ ಆರೋಪಿಗಳು, ಅವುಗಳನ್ನೇ ಕೃತ್ಯಕ್ಕೆ ಬಳಸುತ್ತಿದ್ದರು. ಬಂಧಿತರಿಂದ 222 ಸಿಮ್ಕಾರ್ಡ್, 10 ಮೊಬೈಲ್, 10 ಡೆಬಿಟ್ ಕಾರ್ಡ್, ಡೆಬಿಟ್ ಕಾರ್ಡ್ಗಳು, ಬ್ಯಾಂಕ್ ಪಾಸ್ಬುಕ್ ಹಾಗೂ ಚೆಕ್ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.

ಟೆಲಿಗ್ರಾಮ್ ಆ್ಯಪ್ನಲ್ಲಿ ಗ್ರೂಪ್: ‘ಆರೋಪಿ ಶಾನೀದ್ ಹಾಗೂ ನಿಹಾಲ್, ‘ಲಿಂಕ್ ಕ್ಲಿಕ್ ಮಾಡಿ ಉಚಿತ ಶಾಪಿಂಗ್ ಮಾಡಿ ಹಾಗೂ ಕ್ರಿಪ್ಟೊ ಕರೆನ್ಸಿ ಮೇಲೆ ಹೂಡಿಕೆ ಮಾಡಿ ಹಣ ಗಳಿಸಿ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸುತ್ತಿದ್ದರು. ಇದನ್ನು ನಂಬಿ ಸಂಪರ್ಕಿಸುತ್ತಿದ್ದ ಸಾರ್ವಜನಿಕರ ಮೊಬೈಲ್ ನಂಬರ್ ಪಡೆದು, ಟೆಲಿಗ್ರಾಮ್ ಆ್ಯಪ್ನಲ್ಲಿ ಗ್ರೂಪ್ ರಚಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಗ್ರೂಪ್ನಲ್ಲಿ ವಿವಿಧ ಲಿಂಕ್ ಕಳುಹಿಸುತ್ತಿದ್ದ ಆರೋಪಿಗಳು, ಸಾರ್ವಜನಿಕರ ವೈಯಕ್ತಿಕ ಮಾಹಿತಿ ಪಡೆಯುತ್ತಿದ್ದರು. ನಂತರ, ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಡ್ರಾ ಮಾಡಿಕೊಂಡು ವಂಚಿಸುತ್ತಿದ್ದರು’ ಎಂದು ತಿಳಿಸಿವೆ.

‘ಆರೋಪಿಗಳು ಇದುವರೆಗೂ ನೂರಾರು ಜನರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಮಾಹಿತಿ ಇದೆ. ಆರೋಪಿಯಿಂದ ವಂಚನೆಗೀಡಾದವರು ಯಾರಾದರೂ ಇದ್ದರೆ ಠಾಣೆಗೆ ದೂರು ನೀಡಬಹುದು’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.