ನಾಡಪ್ರಭು ಕೆಂಪೇಗೌಡ ಬಡಾವಣೆಯ ಒಂದು ಬ್ಲಾಕ್‌ನಲ್ಲಿರುವ ಕಚ್ಚಾ ರಸ್ತೆ
‘ಭರವಸೆಯಷ್ಟೇ.. ಕೆಲಸ ಇಲ್ಲ’
4040 ಎಕರೆಯಲ್ಲಿ ಬಡಾವಣೆ ನಿರ್ಮಿಸಲು 2010ರಲ್ಲಿ ಬಿಡಿಎ ಯೋಜನೆ ರೂಪಿಸಿತ್ತು. ಅದರಲ್ಲಿ 2200 ಎಕರೆಯಲ್ಲಿ ಬಡಾವಣೆಯನ್ನು ನಿರ್ಮಿಸಿದೆ. ಎಲ್ಲ 9 ಬ್ಲಾಕ್‌ಗಳ ನಿವೇಶನದಾರರಿಂದ ಹಂತ ಹಂತವಾಗಿ ಹಣ ಪಡೆಯದೇ ಒಂದೇ ಬಾರಿಗೆ ನಿವೇಶನ ಮೊತ್ತವನ್ನು ಬಿಡಿಎ ಕಟ್ಟಿಸಿಕೊಂಡು 2016 ಮತ್ತು 2018ರಲ್ಲಿ ನಿವೇಶನ ಹಂಚಿಕೆ ಮಾಡಿದೆ. ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಮಾಡಲಾಗುವುದು ಎಂದು 2016ರಿಂದಲೂ ಹೇಳಿಕೊಂಡು ಬಂದಿರುವ ಬಿಡಿಎ ಇನ್ನೂ ಮೂಲಸೌಕರ್ಯಗಳನ್ನು ಕಲ್ಪಿಸಿಲ್ಲ. ಈಗ 7ನೇ ಬ್ಲಾಕ್‌ನಲ್ಲಿ ಮಾತ್ರ ಕೆಲಸ ಮಾಡುತ್ತಿದೆ. ಉಳಿದ ಬ್ಲಾಕ್‌ನ ನಿವೇಶನದಾರರು ಮನೆ ಕಟ್ಟುವುದು ಬೇಡವೇ? ಚನ್ನಬಸವರಾಜ ಅಧ್ಯಕ್ಷ ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ
‘ಯಾವ ಗಡುವೂ ಪಾಲನೆಯಾಗಿಲ್ಲ’
7ನೇ ಬ್ಲಾಕ್ ಹೊರತುಪಡಿಸಿ ಉಳಿದವುಗಳಲ್ಲಿ ವಾಹನ ಸಂಚಾರವೇ ಕಷ್ಟವಾಗುವ ಕಚ್ಚಾ ರಸ್ತೆಗಳಷ್ಟೇ ಇವೆ. ವಿದ್ಯುತ್ ಬೀದಿದೀಪದ ಡಮ್ಮಿ ಕಂಬಗಳು ಕಾರ್ಯನಿರ್ವಹಿಸದ ಉಪ ಕೇಂದ್ರಗಳಿವೆ. ವಿದ್ಯುತ್ ವಿತರಣಾ ಜಾಲ ಇನ್ಣೂ ಎಲ್ಲ ಕಡೆ ತಲುಪಿಲ್ಲ. ಒಳಚರಂಡಿ ಜಾಲ ಪೂರ್ಣಗೊಳಿಸದ ಕಾರಣ ಮ್ಯಾನ್‌ಹೋಲ್‌ಗಳು ತುಂಬಿ ಹರಿಯುತ್ತಿವೆ. ಕುಡಿಯುವ ನೀರಿನ ಸೌಕರ್ಯವಿಲ್ಲ. ಈ ಬಗ್ಗೆ ‘ರೇರಾ’ಕ್ಕೆ ಹಿಂದೆಯೇ ವೇದಿಕೆ ದೂರು ನೀಡಲಾಗಿತ್ತು. 2018 2020 ಮತ್ತು 2021ರಲ್ಲಿ ‘ರೇರಾ’ ಗಡುವು ನೀಡಿದ್ದರೂ ಬಿಡಿಎ ಪಾಲಿಸಿಲ್ಲ. ಆನಂತರ ಅರ್ಜಿ ಸಮಿತಿ ನೀಡಿದ ಎರಡು ಗಡುವುಗಳಲ್ಲಿಯೂ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಎಂ. ಅಶೋಕ್ ಕಾರ್ಯದರ್ಶಿ ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ
ಮನೆ ಕಟ್ಟುವುದು ಹೇಗೆ?
ಸರಿಯಾದ ರಸ್ತೆ ಇಲ್ಲ ನೀರು ವಿದ್ಯುತ್ ಇಲ್ಲ. ನಿವೇಶನದಾರರು ಮನೆ ಕಟ್ಟಿಕೊಳ್ಳುವುದು ಹೇಗೆ? ಹಾಗಾಗಿ ಇಲ್ಲಿವರೆಗೆ 25–30 ಮನೆಗಳಷ್ಟೇ ನಿರ್ಮಾಣಗೊಂಡಿವೆ. ಈ ಯೋಜನೆಯಡಿ 1300 ಎಕರೆ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳಬೇಕಿದ್ದು ಆ ಸಮಸ್ಯೆಯೂ ಇತ್ಯರ್ಥವಾಗಿಲ್ಲ. ಈಗಾಗಲೇ ಭೂಸ್ವಾಧೀನ ಮಾಡಿಕೊಂಡು ನಿವೇಶನ ಹಂಚಿರುವಲ್ಲಿಯೂ ಸಮಸ್ಯೆಗಳು ಪರಿಹಾರವಾಗಿಲ್ಲ. ಗುತ್ತಿಗೆದಾರರಿಗೆ ಪಾವತಿ ಬಾಕಿ ಉಳಿಸಿಕೊಂಡಿರುವುದೇ ಕಾಮಗಾರಿ ಕುಂಠಿತವಾಗಲು ಕಾರಣ. ಸೂರ್ಯಕಿರಣ್ ಜಂಟಿ ಕಾರ್ಯದರ್ಶಿ ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ