ಭಾನುವಾರ, 7 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಪರ್ಶ್‌ ಆಸ್ಪತ್ರೆಯಲ್ಲಿ ತಾಯಿ, ಮಕ್ಕಳ ಆರೈಕೆ ವಿಭಾಗ ಆರಂಭ

Published 4 ಜುಲೈ 2024, 15:48 IST
Last Updated 4 ಜುಲೈ 2024, 15:48 IST
ಅಕ್ಷರ ಗಾತ್ರ

ಬೆಂಗಳೂರು: ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನ ಆರ್‌.ಆರ್‌. ನಗರ ಘಟಕದಲ್ಲಿ ಗುರುವಾರ ತಾಯಿ ಮತ್ತು ಮಕ್ಕಳ ಆರೈಕೆಗೆ ಮೀಸಲಾದ ವಿಭಾಗ ಆರಂಭಗೊಂಡಿತು.

ಚಿತ್ರ ನಟಿ ಪ್ರಿಯಾಂಕಾ ಉಪೇಂದ್ರ ಉದ್ಘಾಟಿಸಿ ಮಾತನಾಡಿ, ‘ತಾಯ್ತನದ ಸಂತೋಷವನ್ನು ಅನುಭವಿಸಲು ಈ ವಿಭಾಗದಿಂದ ಅನುಕೂಲವಾಗಲಿದೆ’ ಎಂದು ತಿಳಿಸಿದರು.

ಸ್ಪರ್ಶ್‌ ಗ್ರೂಪ್ ಆಫ್ ಹಾಸ್ಪಿಟಲ್ಸ್‌ ಅಧ್ಯಕ್ಷ ಡಾ. ಶರಣ್‌ ಪಾಟೀಲ್‌ ಮಾತನಾಡಿ, ‘ಗರ್ಭಾವಸ್ಥೆಯಲ್ಲಿ ಉಂಟಾಗುವ ಸಂಕೀರ್ಣ ವೈದ್ಯಕೀಯ ಸವಾಲುಗಳನ್ನು ನಿರ್ವಹಿಸಲು ನಮ್ಮ ತಾಯಿ ಮತ್ತು ಮಕ್ಕಳ ಆರೈಕೆ ಸೌಲಭ್ಯವು ಸಿದ್ಧವಾಗಿದೆ. ಈ ಆಸ್ಪತ್ರೆ 400 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದೆ. ಆಸುಪಾಸಿನಲ್ಲಿ ತಾಯಿ ಮತ್ತು ಮಕ್ಕಳ ಆರೈಕೆಗಾಗಿ ಮೀಸಲಾದ ವಿಭಾಗ ಹೊಂದಿರುವ ಮೊದಲ ಆಸ್ಪತ್ರೆ ಇದಾಗಿದೆ’ ಎಂದು ಮಾಹಿತಿ ನೀಡಿದರು.

‘ಕ್ಲಿಷ್ಟಕರ ಗರ್ಭಧಾರಣೆ ಮತ್ತು ಮಲ್ಟಿ ಸ್ಪೆಷಾಲಿಟಿ ಪರಿಣತಿಯ ಅಗತ್ಯವಿರುವ ಶಸ್ತ್ರಚಿಕಿತ್ಸೆಗಳನ್ನು ಒಂದೇ ಸೂರಿನಡಿ ನಿರ್ವಹಿಸಲು ಹೆಸರಾಂತ ವೈದ್ಯರು ಮತ್ತು ಅಧುನಿಕ ಸೌಲಭ್ಯಗಳನ್ನು ಹೊಂದಿದೆ. ಸಂಕೀರ್ಣ ಶಸ್ತ್ರಚಿಕಿತ್ಸೆಗಳಿಗೆ ಅಗತ್ಯವಿರುವ ತಂತ್ರಜ್ಞಾನಗಳನ್ನು ಒಳಗೊಂಡಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT