ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿನಮೈಸೂರು ರಸ್ತೆ– ಕೆಂಗೇರಿ ವಿಸ್ತರಿತ ಮಾರ್ಗದ ಉದ್ಘಾಟನಾ ಕಾರ್ಯಕ್ರಮ ಭಾನುವಾರ ಬೆಳಿಗ್ಗೆ 10.30ಕ್ಕೆ ನಡೆಯಲಿದೆ.

7.5 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ಸಿಂಗ್ ಪುರಿ ಹಸಿರು ನಿಶಾನೆ ತೋರಲಿದ್ದಾರೆ. ನಂತರ, ಕೆಂಗೇರಿ ಬಸ್ ಟರ್ಮಿನಲ್ ನಿಲ್ದಾಣದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ನೇರಳೆ ಮಾರ್ಗದ ಬಹುನಿರೀಕ್ಷಿತ ವಿಸ್ತರಿತ ಮಾರ್ಗ ಇದಾಗಿದೆ. ಈ ಮಾರ್ಗದಲ್ಲಿ ಏಳು ನಿಲ್ದಾಣಗಳಿವೆ. ಕಾರ್ಯಕ್ರಮ ನಿಮಿತ್ತ ಎಲ್ಲ ನಿಲ್ದಾಣಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

ಫೀಡರ್ ಬಸ್:

ಪ್ರಯಾಣಿಕರು ಮೆಟ್ರೊ ನಿಲ್ದಾಣ ತಲುಪಲು ಅನುವಾಗುವಂತೆ ಬಿಎಂಟಿಸಿಯು ಫೀಡರ್ ಬಸ್ಗಳನ್ನು ಒದಗಿಸಿದೆ. ರಾಜರಾಜೇಶ್ವರಿ ನಗರ ಪ್ರವೇಶದ್ವಾರದಿಂದ ರಾಜರಾಜೇಶ್ವರಿ ನಗರದ ವಿವಿಧ ಪ್ರದೇಶಗಳ ಕಡೆಗೆ 22 ಮಾರ್ಗಗಳಲ್ಲಿ 43 ಬಸ್ಸುಗಳು ದಿನದಲ್ಲಿ 230 ಬಾರಿ ಸಂಚರಿಸಲಿವೆ.

ಬೆಂಗಳೂರು ವಿಶ್ವವಿದ್ಯಾಲಯದ ಕಡೆಗಳಿಂದ ಬರುವ ಪ್ರಯಾಣಿಕರಿಗಾಗಿ 14 ಮಾರ್ಗಗಳಲ್ಲಿ 43 ಬಸ್ಗಳು ದಿನದಲ್ಲಿ 264 ಬಾರಿ ಸಂಚರಿಸಲಿವೆ.

ಉತ್ತರಹಳ್ಳಿ ಕಡೆಗೆ 121, ಕೆಂಗೇರಿ ಉಪನಗರದತ್ತ 266 ಕುಂಬಳಗೋಡು ಕಡೆಗೆ 157 ಬಸ್ಗಳು ಸಂಚರಿಸಲಿವೆ ಎಂದು ಬಿಎಂಟಿಸಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.