ಡೆಂಗಿ ಕುರಿತ ಜಾಗೃತಿ ವಿಡಿಯೊ ಮಾಡಿ ಅತಿ ಹೆಚ್ಚು ವೀಕ್ಷಣೆ ಹಾಗೂ ಲೈಕ್ಸ್ ಪಡೆದ 10 ಮಂದಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಹಾಗೂ ದ್ವಿತೀಯ ಬಹುಮಾನವನ್ನು ತಲಾ ಐದು ಮಂದಿಗೆ ನೀಡಲಾಯಿತು. ಉಡುಪಿಯ ಜೈಸಸ್ ಶಾಲೆಯ ವಂದನಾ ರೈ ಗೋಲ್ಡ್ ಫಿಂಚ್ ನರ್ಸಿಂಗ್ ಕಾಲೇಜಿನ ಆರ್. ಕೊಹಿಲಾ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎ.ವಿ. ದೇವರಾಜ ಎಸ್.ಎಸ್. ಪ್ರವೀಣ ಅವರಿಗೆ ಪ‍್ರಥಮ ಪ್ರಶಸ್ತಿ ತಲಾ ₹25 ಸಾವಿರ ನಗದು ಬಹುಮಾನ ನೀಡಲಾಯಿತು. ಮಲ್ಲತ್ತಹಳ್ಳಿ ಪ್ರುಡೆನ್ಸ್ ಕಾಲೇಜಿನ ಅಜಯ್ ಅಜಯ್‌ಕುಮಾರ್ ಗೋಲ್ಡ್ ಫಿಂಚ್ ನರ್ಸಿಂಗ್ ಕಾಲೇಜಿನ ವಿ. ಐಶ್ವರ್ಯ ಶಾನಿಕಾ ಶಾನ್ ಎ.ಎಂ. ಮಿದ್ಲಜ್ ದೇವೇಶ್ ಅವರು ದ್ವಿತೀಯ ಪ್ರಶಸ್ತಿಯ ತಲಾ ₹10 ಸಾವಿರ ಬಹುಮಾನ ಪಡೆದರು. ವಿಡಿಯೊ ಮಾಡಲು ಹೆಚ್ಚು ಮಕ್ಕಳನ್ನು ಪ್ರೇರೇಪಿಸಿದ ಬೊಮ್ಮನಹಳ್ಳಿ ಹೊಂಗಸಂದ್ರದ ಆಕ್ಸ್‌ಫರ್ಡ್ ಶಾಲೆಯ ಶಿಕ್ಷಕಿ ಚೈತ್ರಾ ಅವರಿಗೆ ₹35 ಸಾವಿರ ಹಾಗೂ ಶಿಕ್ಷಣ ಸಂಸ್ಥೆ ವಿಭಾಗದಲ್ಲೂ ಆಕ್ಸ್‌ಫರ್ಡ್ ಶಾಲೆಗೆ ₹1 ಲಕ್ಷ ಬಹುಮಾನ ನೀಡಲಾಯಿತು.