ಬೀದರ್: ಗುರುನಾನಕ ಝೀರಾ ಫೌಂಡೇಶನ್ ಅಧ್ಯಕ್ಷರಾಗಿದ್ದ ದಿ.ಜೋಗಾಸಿಂಗ್ ಅವರ ಜನ್ಮದಿನವನ್ನು ನಗರದ ಜೋಗಾಸಿಂಗ್ ಸ್ಮಾರಕ ಉದ್ಯಾನದಲ್ಲಿ ಗುರುವಾರ ಆಚರಿಸಲಾಯಿತು.

ಗುರುನಾನಕ ಪ್ರಬಂಧಕ ಕಮಿಟಿಯ ಅಧ್ಯಕ್ಷ ಬಲಬೀರಸಿಂಗ್, ರೇಷ್ಮಾ ಕೌರ್, ಕುಟುಂಬದ ಸದಸ್ಯರು ಹಾಗೂ ಹಿತೈಷಿಗಳು ಸ್ಮಾರಕಕ್ಕೆ ಪುಷ್ಪಗುಚ್ಛ ಇರಿಸಿ ನಮನ ಸಲ್ಲಿಸಿದರು. ಮನ್ಪ್ರೀತ್ಸಿಂಗ್, ಪುನೀತಸಿಂಗ್, ಪವಿತ್ರಸಿಂಗ್ ಇದ್ದರು.

ಜೋಗಾಸಿಂಗ್ ಅವರ ಜನ್ಮದಿನದ ಅಂಗವಾಗಿ ಗುರುದ್ವಾರದಲ್ಲಿ ಅಖಂಡ ಪಾಠ ಆಯೋಜಿಸಲಾಗಿತ್ತು. ಗುರುನಾನಕ ಚೆಕ್ಪೋಸ್ಟ್ ಹತ್ತಿರದ ರಸ್ತೆ ವಿಭಜಕದ ಮಧ್ಯೆ 100 ಸಸಿಗಳನ್ನು ನೆಡಲಾಯಿತು.

ಗುರುನಾನಕ ಶಿಕ್ಷಣ ಸಂಸ್ಥೆಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಜರಿದ್ದರು.

ಜೋಗಾಸಿಂಗ್ ಅವರ ಸ್ಮರಣಾರ್ಥ ನಗರದಲ್ಲಿ ಆಯೋಜಿಸಿರುವ ಅಂತರ ಕಾಲೇಜುಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ 8 ತಂಡಗಳು ಭಾಗವಹಿಸಿದ್ದು, ಟೂರ್ನಿ ಡಿ.30 ರವರೆಗೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.