ಹುಮನಾಬಾದ್‌ನಲ್ಲಿ ವಾರದಿಂದ 80 ಹಂದಿಗಳ ಸಾವು: ಸಾರ್ವಜನಿಕರಲ್ಲಿ ಆತಂಕ
ಗುಂಡು ಅತಿವಾಳ
Published : 17 ಜನವರಿ 2024, 6:41 IST
Last Updated : 17 ಜನವರಿ 2024, 6:41 IST
ಫಾಲೋ ಮಾಡಿ
Comments
ಪೌರಕಾರ್ಮಿಕರು ತಮ್ಮ ಸುರಕ್ಷಿತ ವಸ್ತ್ರಗಳನ್ನು ಧರಿಸದೆ ಸತ್ತ ಹಂದಿಗಳನ್ನು ಬೇರೆಡೆ ತೆಗೆದುಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಅವರ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಸಂಬಂಧಪಟ್ಟವರು ಪೌರ ಕಾರ್ಮಿಕರಿಗೆ ಸುರಕ್ಷಿತ ವಸ್ತ್ರಗಳನ್ನು ನೀಡಬೇಕು.
–ಗಣಪತಿ ಅಷ್ಟೋರೆ, ಭಾರತೀಯ ದಲಿತ ಪ್ಯಾಂಥರ್ ಅಧ್ಯಕ್ಷ
ಪಟ್ಟಣದಲ್ಲಿ ಹಂದಿಗಳು ಸಾಯುತ್ತಿರುವ ಮಾಹಿತಿ ಬಂದಿದೆ. ಸಾವಿನ ಕಾರಣ ತಿಳಿಯಲು ಪರೀಕ್ಷೆ ನಡೆಸಿ ಬೀದರಿಗೆ ಕಳುಹಿಸಲಾಗುವುದು. ಹಂದಿಯ ಮಾಲೀಕರು ಸಹಕಾರ ಮಾಡಿದರೆ ಹಂದಿಗಳಿಗೆ ವ್ಯಾಕ್ಸಿನ್ ಚಿಕಿತ್ಸೆ ನೀಡಬಹುದು.
–ಡಾ.ಗೋವಿಂದ್, ಸಹಾಯಕ ನಿರ್ದೇಶಕ, ಪಶು ಸಂಗೋಪನಾ ಇಲಾಖೆ, ಹುಮನಾಬಾದ್
ಪಟ್ಟಣದಲ್ಲಿ ಹಂದಿಗಳ ಸಾವು ನಿರಂತರವಾಗಿ ಮುಂದುವರಿದಿದೆ. ಸತ್ತ ಹಂದಿಗಳನ್ನು ಎಲ್ಲೆಂದರಲ್ಲಿ ಬಿಸಾಕುತ್ತಿದ್ದಾರೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಪ್ರತ್ಯೇಕ ಒಂದು ಸ್ಥಳ ಮಾಡಬೇಕು.
–ಸವಿತಾ ಸೋಂಡೆ, ಪುರಸಭೆ ಸದಸ್ಯೆ, 19ನೇ ವಾರ್ಡ್
ಕಳೆದ ಒಂದು ವಾರದಿಂದ ಹಂದಿಗಳು ಸಾಯುತ್ತಿವೆ. ಇಲ್ಲಿಯವರೆಗೆ ಸುಮಾರ 80 ಹಂದಿಗಳು ಸತ್ತಿವೆ. ಈ ಬಗ್ಗೆ ಈಗಾಗಲೇ ಪಶುಸಂಗೋಪನಾ ಇಲಾಖೆಯವರಿಗೆ ತಿಳಿಸಲಾಗಿದೆ.
–ವೀರಶೆಟ್ಟಿ, ಪುರಸಭೆ ಪರಿಸರ ಎಂಜಿನಿಯರ್
ಹುಮನಾಬಾದ್ ಪಟ್ಟಣದ ಮೃತಪಟ್ಟಿರುವ ಹಂದಿಗಳು ವಾಹನದಲ್ಲಿ ಹಾಕುತ್ತಿರುವುದು
ಹುಮನಾಬಾದ್ ಪಟ್ಟಣದಲ್ಲಿ ಮೃತಪಟ್ಟಿರುವ ಹಂದಿಯನ್ನು ಪುರಸಭೆ ಪೌರ ಕಾರ್ಮಿಕರು ಸಾಗಿಸುತ್ತಿರುವುದು