ಗುಂಡ್ಲುಪೇಟೆ: ಬಾಳೆ ಬೆಳೆದ ರೈತನ ಬದುಕು ‘ಬಂಗಾರ’ ಎಂಬ ಮಾತು ಸದ್ಯದ ಪರಿಸ್ಥಿತಿಗೆ ಅನ್ವಯವಾಗುತ್ತಿಲ್ಲ. ಕಾರಣ, ಮಾರುಕಟ್ಟೆಯಲ್ಲಿ ಬಾಳೆಗೆ ಬೇಡಿಕೆ ಹಾಗೂ ದರ ಕುಸಿದಿದೆ.

ಮೂರ್ನಾಲ್ಕು ತಿಂಗಳ ಹಿಂದೆ ಬಾಳೆ ಖರೀದಿಸಲು ಬೆಳೆಗಾರರ ತೋಟಕ್ಕೆ ಮುಗಿಬೀಳುತ್ತಿದ್ದ ವ್ಯಾಪಾರಿಗಳು ಸದ್ಯ ಬಾಳೆ ಖರೀದಿಸುವಂತೆ ರೈತರು ಒತ್ತಾಯಿಸಿದರೂ ಖರೀದಿಗೆ ಆಸಕ್ತಿ ತೋರುತ್ತಿಲ್ಲ. ಮನಸ್ಸಿಗೆ ತೋಚಿದ ದರ ಹೇಳುತ್ತಿದ್ದಾರೆ ಎಂದು ರೈತರು ಅಸಮಾಧಾನ ಹೊರಹಾಕಿದ್ದಾರೆ. ಬಾಳೆ ಕೊಳ್ಳುವವರಿಲ್ಲದೆ ಜಮೀನಿನಲ್ಲಿ ಹಣ್ಣಾಗುವ ಸ್ಥಿತಿ ತಲುಪುತ್ತಿದ್ದು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ದಸರಾ, ವರ ಮಹಾಲಕ್ಷ್ಮೀ ಹಬ್ಬದ ಸಂದರ್ಭ ಬಾಳೆಗೆ ಉತ್ತಮ ದರ ಇತ್ತು, ಬೇಡಿಕೆಯೂ ಹೆಚ್ಚಾಗಿತ್ತು. ಕೆ.ಜಿ ಏಲಕ್ಕಿ ಬಾಳೆ ಮಾರುಕಟ್ಟೆಯಲ್ಲಿ 100 ತಲುಪಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ವ್ಯಾಪಾರಿಗಳು ರೈತರಿಂದಲೇ ಕೆ.ಜಿಗೆ 70 ರಿಂದ 75ರ ದರಕ್ಕೆ ಏಲಕ್ಕಿ ಬಾಳೆ ಖರೀದಿ ಮಾಡಿದ್ದರು.

ಆದರೆ, ಈಗಿನ ಪರಿಸ್ಥಿತಿ ತದ್ವಿರುದ್ಧವಾಗಿದ್ದು ಕೆ.ಜಿ ಏಲಕ್ಕಿ ಬಾಳೆಗೆ 20ರಿಂದ 25 ದರ ಇದೆ. ಬಾಳೆಯ ಬೆಲೆ ದಿಢೀರ್ ಕುಸಿತವಾಗಿರುವುದನ್ನು ಕಂಡು ಬೆಳೆಗಾರರು ದಿಕ್ಕು ತೋಚದಂತಾಗಿದ್ದಾರೆ. ಪಚ್ಚಬಾಳೆಯ ದರವೂ ಇಳಿಕೆಯಾಗಿದೆ. ಕೆ.ಜಿಗೆ 10ರಿಂದ ಗರಿಷ್ಠ 15ರ ದರದಲ್ಲಿ ಖರೀದಿ ನಡೆಯುತ್ತಿದ್ದು ವ್ಯಾಪಾರಿಗಳ ಕೊರತೆ ಎದುರಾಗಿದೆ.

ದರ ಕುಸಿತಕ್ಕೆ ಕಾರಣ:

ಈಚೆಗೆ ಬಾಳೆಗೆ ಉತ್ತಮ ದರ ಸಿಗುತ್ತಿರುವುದನ್ನು ಕಂಡು ಈ ವರ್ಷ ಅತಿ ಹೆಚ್ಚಿನ ಪ್ರಮಾಣದಲ್ಲಿ ತಾಲ್ಲೂಕಿನ ರೈತರು ಬಾಳೆ ಬೆಳೆದಿದ್ದರು. ಬಾಳೆ ಬೆಳೆ ವಿಸ್ತರಣೆಯಾಗಿದ್ದರಿಂದ ಮಾರುಕಟ್ಟೆಗೆ ಬಾಳೆಯ ಪೂರೈಕೆ ಹೆಚ್ಚಾಗಿ ಬೇಡಿಕೆ ಕುಸಿದ ಪರಿಣಾಮ ದರ ಕುಸಿತವಾಗಿದೆ ಎನ್ನುತ್ತಾರೆ ಬೆಳೆಗಾರರು.

ನೆರೆಯ ರಾಜ್ಯಗಳಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಬಾಳೆ ಮಾರುಕಟ್ಟೆಯನ್ನು ಪ್ರವೇಶ ಮಾಡುತ್ತಿರುವುದು ದರ ಕುಸಿತಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ತಾಲ್ಲೂಕಿನಲ್ಲಿ 3,000 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆದಿದ್ದು ಖರೀದಿದಾರರು ಸಿಗದೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾಲ್ಲೂಕಿನ ಬಾಳೆ ಬೆಳೆಗಾರರು ತಮಿಳುನಾಡು ಹಾಗೂ ಕೇರಳ ರಾಜ್ಯದ ವ್ಯಾಪಾರಿಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದು ಅಲ್ಲಿಂದಲೂ ಹೆಚ್ಚಿನ ಖರೀದಿದಾರರು ಖರೀದಿಗೆ ಬರುತ್ತಿಲ್ಲ ಎನ್ನುತ್ತಾರೆ ಬೆಳೆಗಾರರು.

ಮಧ್ಯವರ್ತಿಗಳಿಗೆ ಲಾಭ:

ರೈತರಿಂದ ನೇರವಾಗಿ ಖರೀದಿಸುವ ವ್ಯಾಪಾರಸ್ಥರು ಬಾಳೆ ಮಂಡಿಗಳಲ್ಲಿ ಕೆಜಿಗೆ ₹ 60 ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ತಳ್ಳುವ ಗಾಡಿ ವ್ಯಾಪಾರಸ್ಥರು, ಅಂಗಡಿಗಳಲ್ಲಿಯೂ ಇದೆ ದರದಲ್ಲಿ ಮಾರಾಟವಾಗುತ್ತಿದೆ. ಕೆಜಿ ಬಾಳೆ ಮಾರಾಟದ ಮೇಲೆ ಕನಿಷ್ಟ 30 ರಿಂದ 40ರವರೆಗೆ ಲಾಭ ಪಡೆಯುತ್ತಿದ್ದಾರೆ. ಆದರೆ ವರ್ಷವಿಡೀ ಕಷ್ಟಪಟ್ಟು ಬಾಳೆ ಬೆಳೆದ ರೈತ ಮಾತ್ರ ನಷ್ಟದಲ್ಲಿ ಬದುಕು ಸವೆಸುವ ಸ್ಥಿತಿ ನಿರ್ಮಾಣವಾಗಿದೆ.

ಒಂದು ಬಾಳೆ ಗಿಡ ಗೊನೆ ಬಿಡಲು 12 ತಿಂಗಳು ಬೇಕು. ಬೆಳೆದ ಬೆಳೆಗೆ ಬೆಲೆ ಕುಸಿತವಾದರೆ ಒಂದು ವರ್ಷದಿಂದ ಕಾದಿದ್ದಕ್ಕೂ ಪ್ರಯೋಜನ ಇಲ್ಲದಂತಾಗುತ್ತದೆ. ಪ್ರಸ್ತುತ ದರ ಲೆಕ್ಕಹಾಕಿದರೆ ಬಾಳೆ ಬೆಳೆಯಲು ಖರ್ಚು ಮಾಡಿರುವ ಹಣವೂ ಕೈಸೇರುವ ವಿಶ್ವಾಸ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಮೇಲುಕಾಮನಹಳ್ಳಿ ಗ್ರಾಮದ ರೈತರಾದ ಚಿಕ್ಕಣ್ಣ.

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಾಳೆ ಬೆಳೆಯಲಾಗುತ್ತದೆ. ಎರಡು ತಿಂಗಳ ಹಿಂದಿದ್ದ ದರ ಈಗಿಲ್ಲ. ಬೆಲೆ ಕುಸಿತದಿಂದ ನಷ್ಟವಾಗಲಿದೆ.
ಬಾಸ್ಕರ್ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.