ಯಳಂದೂರು: ತಾಲ್ಲೂಕಿನ ಬಿಳಿಗಿರಿಬೆಟ್ಟದಲ್ಲಿ ವೃದ್ಧ ಆನೆಯು ಆಹಾರ ಅರಸಿ ಪ್ರತಿ ರಾತ್ರಿ ಅಂಗಡಿ ಮತ್ತು ಮನೆಗಳತ್ತ ಬರುತ್ತಿದ್ದು, ನಿವಾಸಿಗಳಲ್ಲಿ ಆತಂಕ ತಂದಿದೆ.

ಮಂಗಳವಾರ ರಾತ್ರಿ ಬಾಳೆ ಹಣ್ಣಿಗಾಗಿ ಅಂಗಡಿಯ ತಗಡಿನ ಬಾಗಿಲನ್ನು ಕಿತ್ತು ಅಗಲಗೊಳಿಸಿದೆ. ತೇರಿನ ಸುತ್ತ ಅಡ್ಡಾಡುತ್ತದೆ. ಆದರೆ, ಯಾರಿಗೂ ತೊಂದರೆ ನೀಡಿಲ್ಲ ಎಂದು ಗ್ರಾಮಸ್ಥರು ಹೇಳಿದರು.

‘ಆನೆಗೆ ವಯಸ್ಸಾಗಿದೆ. ಆಹಾರ ಹುಡುಕುವುದು ಕಷ್ಟವಾಗಿದೆ. ಸಂಜೆ ಸಮಯ ಅಕ್ಕಪಕ್ಕದ ಮನೆಗಳ ಸಮೀಪ ಸಂಚರಿಸುತ್ತದೆ. ಮಹಿಳೆ ಮತ್ತು ಮಕ್ಕಳು ಹೊರ ಬರುವುದು ಕಷ್ಟವಾಗಿದೆ. ತೆಂಗು, ಬಾಳೆಹಣ್ಣು, ಜೇನು ಅರಸಿ ತೇರಿನ ಬೀದಿ ಬದಿ ಬರುತ್ತಿದೆ. ಅರಣ್ಯ ಇಲಾಖೆ ಮಾನವೀಯ ದೃಷ್ಟಿಯಿಂದ ಆನೆಗೆ ಮೇವು ಪೂರೈಸಿ, ಮನೆಗಳತ್ತ ಬರದಂತೆ ಎಚ್ಚರ ವಹಿಸಬೇಕು’ ಎಂದು ನಿವಾಸಿ ಮಂಗಳಮ್ಮ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.