ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರದ ಉದ್ದೇಶಿತ ಹೊಸ ಪ್ರವಾಸೋದ್ಯಮ ನೀತಿಯು ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಮತ್ತಷ್ಟು ಅವಕಾಶಗಳನ್ನು ಒದಗಿಸುತ್ತದೆ ಎನ್ನುವ ಆಶಾವಾದಗಳು ಇವೆ.

ಜಿಲ್ಲೆಯು ರಾಜಧಾನಿ ಬೆಂಗಳೂರಿಗೆ ಸಮೀಪವಿದೆ. ತಾಲ್ಲೂಕಿನ ನಂದಿಗಿರಿಧಾಮವು ರಾಜ್ಯದಲ್ಲಿಯೇ ಪ್ರಮುಖ ಪ್ರವಾಸಿ ತಾಣ ಎನಿಸಿದೆ. ನಂದಿಗಿರಿಧಾಮದ ಸುತ್ತಲೂ ದೊಡ್ಡ ಮಟ್ಟದಲ್ಲಿಯೇ ರೆಸಾರ್ಟ್ಗಳು, ಹೋಟೆಲ್ಗಳು ತಲೆ ಎತ್ತಿವೆ.

ಪ್ರವಾಸೋದ್ಯಮ ಇಲಾಖೆಯು ರೆಸಾರ್ಟ್ಗಳಿಗೆ ಒಟ್ಟು ಯೋಜನಾ ವೆಚ್ಚದಲ್ಲಿ ಇಂತಿಷ್ಟು ಎಂದು ಸಬ್ಸಿಡಿ ನೀಡುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಮಾಲೀಕತ್ವದ ರೆಸಾರ್ಟ್ಗಳಿಗೆ ಒಟ್ಟು ಯೋಜನಾ ವೆಚ್ಚದಲ್ಲಿ ಶೇ 20ರಷ್ಟು ಮತ್ತು ಸಾಮಾನ್ಯ ವರ್ಗಕ್ಕೆ ಶೇ 15ರಷ್ಟು ಸಬ್ಸಿಡಿ ಸೌಲಭ್ಯವಿದೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೂ ಈ ಸೌಲಭ್ಯವು ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ತಾಲ್ಲೂಕು ವ್ಯಾಪ್ತಿಗೆ ಮಾತ್ರ ಸೀಮಿತವಾಗಿತ್ತು. ರಾಷ್ಟ್ರೀಯ ಹೆದ್ದಾರಿ, ಪ್ರವಾಸೋದ್ಯಮ ಅಭಿವೃದ್ಧಿ, ಪ್ರವಾಸಿಗರ ಭೇಟಿ ಇತ್ಯಾದಿ ಮಾನದಂಡಗಳಿಂದ ಈ ಎರಡೂ ತಾಲ್ಲೂಕುಗಳಲ್ಲಿ ರೆಸಾರ್ಟ್ಗಳನ್ನು ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಹೋಟೆಲ್ಗಳನ್ನು ನಡೆಸಲು ಸಬ್ಸಿಡಿ ನೀಡಲಾಗುತ್ತಿತ್ತು. ಉಳಿದ ತಾಲ್ಲೂಕುಗಳು ಈ ಸೌಲಭ್ಯದಿಂದ ವಂಚಿತವಾಗಿದ್ದವು.

ಆದರೆ ಈಗ ಸರ್ಕಾರವು ಸಿದ್ಧಗೊಳಿಸಿರುವ ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳೂ ಸಹ ಸಬ್ಸಿಡಿ ಸೌಲಭ್ಯಕ್ಕೆ ಒಳಪಡಲಿವೆ ಎನ್ನುವ ನಿರೀಕ್ಷೆ ಇದೆ.

ಹೊಸ ಪ್ರವಾಸೋದ್ಯಮ ನೀತಿ ರೂಪಿಸುವ ಸಮಯದಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆಯು ಆಯಾ ಜಿಲ್ಲೆಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿತ್ತು. ನಿಮ್ಮ ಜಿಲ್ಲೆಯಲ್ಲಿ ಯಾವ ಯಾವ ಅಂಶಗಳು ಬದಲಾವಣೆ ಆಗಬೇಕು, ಯಾವ ಅಂಶಗಳು ಸೇರ್ಪಡೆ ಆಗಬೇಕು ಎಂದು ಜಿಲ್ಲೆಗಳಿಗೆ ಸಂಬಂಧಿಸಿದಂತೆ ಸಮಗ್ರವಾಗಿ ಮಾಹಿತಿ ಕೋರಿತ್ತು.

ಆ ಪ್ರಕಾರ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯು ರೆಸಾರ್ಟ್ ಸಬ್ಸಿಡಿಯನ್ನು ಚಿಕ್ಕಬಳ್ಳಾಪುರ, ಗೌರಿಬಿದನೂರು ತಾಲ್ಲೂಕಿನ ಜೊತೆಗೆ ಉಳಿದ ಎಲ್ಲ ತಾಲ್ಲೂಕಿಗಳಿಗೂ ವಿಸ್ತರಿಸಬೇಕು ಎಂದು ಕೋರಿತ್ತು. ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಜಿಲ್ಲೆಯಿಂದ ಪ್ರಸ್ತಾವ ಸಹ ಸಲ್ಲಿಸಲಾಗಿತ್ತು.

ಈ ಪ್ರಸ್ತಾವಕ್ಕೆ ಹೊಸ ಪ್ರವಾಸೋದ್ಯಮ ನೀತಿಯಲ್ಲಿ ನಿಶಾನೆ ದೊರೆಯುತ್ತದೆ ಎನ್ನುವ ನಿರೀಕ್ಷೆ ಹೆಚ್ಚಿದೆ. ಇದರಿಂದ ಜಿಲ್ಲೆಯ ಇತರೆ ತಾಲ್ಲೂಕುಗಳಲ್ಲಿ ರೆಸಾರ್ಟ್ಗಳು ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಹೋಟೆಲ್ಗಳು ತಲೆ ಎತ್ತಲು ಹೆಚ್ಚಿನ ಅವಕಾಶಗಳು ಒದಗಿ ಬರುತ್ತವೆ.

ಅಲ್ಲದೆ ಈಗ ನೀಡುತ್ತಿರುವ ಸಬ್ಸಿಡಿಯನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಸಹ ಕೋರಲಾಗಿದೆ.

‘ರೆಸಾರ್ಟ್ನ ಒಟ್ಟು ಯೋಜನಾ ವೆಚ್ಚ ಆಧರಿಸಿ ಸಬ್ಸಿಡಿ ನೀಡಲಾಗುತ್ತದೆ. ಉದಾಹರಣೆಗೆ ರೆಸಾರ್ಟ್ ನಿರ್ಮಾಣಕ್ಕೆ ₹ 2 ಕೋಟಿ ಯೋಜನಾ ವೆಚ್ಚ ನಿಗದಿಗೊಳಿಸಲಾಗಿದೆ ಎಂದರೆ ಪರಿಶಿಷ್ಟರಿಗೆ ಈ ಯೋಜನಾ ವೆಚ್ಚದ ಶೇ 20ರಷ್ಟು ಮತ್ತು ಸಾಮಾನ್ಯ ವರ್ಗಕ್ಕೆ ಶೇ 15ರಷ್ಟು ಸಬ್ಸಿಡಿ ದೊರೆಯುತ್ತದೆ’ ಎಂದು ಪ್ರವಾಸೋದ್ಯಮ ಇಲಾಖೆಯ ಮೂಲಗಳು ತಿಳಿಸಿವೆ.

‘₹ 5 ಕೋಟಿಯವರೆಗಿನ ಯೋಜನಾ ವೆಚ್ಚದಲ್ಲಿ ರೆಸಾರ್ಟ್ ನಿರ್ಮಾಣ ಮಾಡುತ್ತೇವೆ ಎಂದು ಯಾರಾದರೂ ಇಲಾಖೆಗೆ ಅರ್ಜಿ ಸಲ್ಲಿಸಿದರೆ ಅದನ್ನು ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಲ್ಲಿಯೇ ಅಂಗೀಕಾರ ನೀಡಲು ಅವಕಾಶವಿದೆ. ಇದಕ್ಕಿಂತ ಹೆಚ್ಚಿನ ಯೋಜನಾ ವೆಚ್ಚವಿದ್ದರೆ ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಕಡತ ಹೋಗಲಿದೆ’ ಎಂದು ಅಧಿಕಾರಿಗಳು ತಿಳಿಸುವರು.

ಜಿಲ್ಲೆಯಲ್ಲಿ ಈ ಪ್ರವಾಸೋದ್ಯಮ ಸಬ್ಸಿಡಿ ಎರಡು ತಾಲ್ಲೂಕುಗಳಿಗೆ ಸೀಮಿತವಾಗಿತ್ತು. ಅದನ್ನು ಉಳಿದ ತಾಲ್ಲೂಕುಗಳಿಗೂ ವಿಸ್ತರಿಸುವಂತೆ ಪ್ರಸ್ತಾವ ನೀಡಿದ್ದೇವೆ. ಪ್ರಸ್ತಾವ ಅಂಗೀಕಾರವಾಗುತ್ತದೆ ಎನ್ನುವ ನಿರೀಕ್ಷೆ ಇದೆ. ಒಂದು ವೇಳೆ ಆ ರೀತಿಯಲ್ಲಿ ಆದರೆ ಇತರೆ ತಾಲ್ಲೂಕುಗಳಲ್ಲಿಯೂ ರೆಸಾರ್ಟ್ಗಳ ನಿರ್ಮಾಣಕ್ಕೆ ಅವಕಾಶವಾಗಲಿದೆ. ಇದು ನೇರವಾಗಿ ಪ್ರವಾಸಿಗರು ಜಿಲ್ಲೆಗೆ ಬರುವ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಅಧಿಕಾರಿಗಳು ತಿಳಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.