ಶಿಡ್ಲಘಟ್ಟ: ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು

- ಕುವೆಂಪು

ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನಲ್ಲಿ ಒಂದು ಸುತ್ತು ಹಾಕಿ ಬಂದರೆ ಈ ಹಾಡು ಮನದ ಮುನ್ನೆಲೆಗೆ ಬರುವುದರಲ್ಲಿ ಅನುಮಾನವಿಲ್ಲ. ಮೇಲೂರಿನಲ್ಲಿ ಕನ್ನಡಕ್ಕೆ ತನ್ನದೇ ಆದ ಇತಿಹಾಸವಿದೆ. ಹೋರಾಟದ ಪುಟಗಳಿವೆ.

1966ರಲ್ಲೇ ಮೇಲೂರಿನಲ್ಲಿ ಕನ್ನಡ ಸಂಘವಿತ್ತು. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಹಾಗೂ ವಿವಿಧ ಜಿಲ್ಲೆಗಳಲ್ಲಿನ್ನೂ ಕನ್ನಡ ಸಂಘಗಳು ಕಣ್ಣು ಬಿಡದೇ ಇದ್ದ ಕಾಲದಲ್ಲಿಯೇ ಮೇಲೂರಿನಲ್ಲಿ ಕನ್ನಡ ಸಂಘ ಕನ್ನಡ ಕಟ್ಟುವ ಕೆಲಸದಲ್ಲಿ ನಿರತವಾಗಿತ್ತು. ಕನ್ನಡಕ್ಕಾಗಿ ದನಿ ಎತ್ತುವ ಸಮಾನ ಮನಸ್ಕ ಕನ್ನಡಿಗರ ಗುಂಪುಗಳು ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಆಚರಣೆ, ಕನ್ನಡ ನಾಟಕಗಳ ಪ್ರದರ್ಶನದಂತಹ ಕಾರ್ಯಕ್ರಮಗಳನ್ನು ನಡೆಸುತ್ತಿದ್ದವು.

ಬಿ.ಎಂ.ಶ್ರೀಕಂಠಯ್ಯ, ಸಿದ್ಧವನಹಳ್ಳಿ ಕೃಷ್ಣಶರ್ಮ ಅವರಂತಹ ಸಾಹಿತಿಗಳನ್ನು ಊರಿಗೆ ಕರೆಸಿ ಕಾರ್ಯಕ್ರಮ ನಡೆಸಲಾಗುತ್ತಿತ್ತು. ನಟ ದಿನೇಶ್, ರಾಜೇಶ್, ನಟಿಯರಾದ ಗಿರಿಜಾ ಲೋಕೇಶ್, ಶಶಿಕಲಾ, ಜಯಲಕ್ಷ್ಮಿ ಮುಂತಾದವರನ್ನು ಕರೆಸಿ ನಾಟಕ ಹಾಗೂ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿತ್ತು. ಗೋಕಾಕ್ ಚಳುವಳಿಯ ಸಂದರ್ಭದಲ್ಲಿ ವರನಟ ಡಾ.ರಾಜ್ಕುಮಾರ್, ಅಂಬರೀಷ್, ವಿಷ್ಣುವರ್ಧನ್, ಶಂಕರ್ನಾಗ್ ಮುಂತಾದವರು ಈ ಊರಿಗೆ ಬಂದು ಹೋಗಿರುವ ಇತಿಹಾಸವಿದೆ.

ಗೋಡೆಗಳ ಮೇಲೆ ಕನ್ನಡದ ಕಂಪು:

ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿದ್ದ ಕೋಲಾರ ಜಿಲ್ಲೆಯ ಕೆ.ಚಂಗಲರಾಯರೆಡ್ಡಿ ಅವರ ನೆನಪಿನಲ್ಲಿ ಪ್ರಮುಖ ವೃತ್ತಕ್ಕೆ ಅವರ ಹೆಸರಿಡಲಾಗಿದೆ. ಸರ್ಕಾರಿ ಕಟ್ಟಡಗಳ ಗೋಡೆಗಳು ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್, ರಾಷ್ಟ್ರ ಕವಿ ಕುವೆಂಪು, ಡಾ.ರಾಜ್ ಕುಮಾರ್, ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚನ್ನಮ್ಮ, ಸಾಲು ಮರದ ತಿಮ್ಮಕ್ಕ, ಶ್ರೀಬಸವೇಶ್ವರ, ಸಿದ್ದಗಂಗಾ ಮಠದ ಶ್ರೀಗಳು ಸೇರಿದಂತೆ ನಾಡಿನ ಸಾಧು–ಸಂತರು, ಕವಿ–ಸಾಹಿತಿಗಳ, ಮಹನೀಯರ ಚಿತ್ರ ಹಾಗೂ ಅವರ ಜೀವನಗಾಥೆಯನ್ನು ಸಾರುತ್ತವೆ.

ಅಪ್ಪಟ ಕನ್ನಡ ಹೆಸರಿನ ಕರ್ನಾಟಕದ ಸಾಧಕರ ಹೆಸರಿನ ಬಡಾವಣೆಗಳಿವೆ. ರಾಷ್ಟ್ರಕವಿ ಕುವೆಂಪು ಬಡಾವಣೆ, ಹೊಯ್ಸಳ ಬಡಾವಣೆ, ಬಸವೇಶ್ವರ ಬಡಾವಣೆ, ಅಮೋಘವರ್ಷ ನೃಪತುಂಗ ರಸ್ತೆ ಇವರ ಕನ್ನಡ ಪ್ರೇಮವನ್ನು ಪ್ರತಿನಿಧಿಸಿದರೆ, ವಿಜಯನಗರ ಹೆಬ್ಬಾಗಿಲು ಎಂಬ ಹೆಸರಿನಲ್ಲಿ ಬೃಹತ್ ದ್ವಾರ ಕನ್ನಡದ ಪರಂಪರೆಗೆ ಗ್ರಾಮದ ಕೊಡುಗೆಯಂತಿದೆ.

ಕನ್ನಡದಲ್ಲೆ ನಾಟಕ:

70ರ ದಶಕದಲ್ಲಿ, ಈ ಭಾಗದಲ್ಲಿ ತೆಲುಗು ಪ್ರಭಾವ ಹೆಚ್ಚಾಗಿತ್ತು. ತೆಲುಗು ನಾಟಕ, ಚಲನಚಿತ್ರಗಳ ಪ್ರದರ್ಶನ ನಡೆಯುತ್ತಿತ್ತು. ಅಂತಹ ಕಾಲದಲ್ಲಿ ತೆಲುಗು ಚಲನಚಿತ್ರ, ನಾಟಕಗಳಿಗೆ ಪ್ರವೇಶವನ್ನು ನಿರ್ಬಂಧಿಸಿ, ಕನ್ನಡ ನಾಟಕ, ಸಿನಿಮಾಗಳನ್ನು ಬೆಳೆಸಿದ ಉದಾಹರಣೆ ಇಲ್ಲಿ ಸಿಗುತ್ತವೆ. ಇದಕ್ಕೆ ಎದುರಾಗುವ ತೊಡರುಗಳನ್ನು ಎದುರಿಸಲಕು ಕನ್ನಡ ಚಳುವಳಿಗಾರರ ಸಂಘ, ಕನ್ನಡ ಕ್ರಾಂತಿಕಾರರ ಸಂಘಗಳು ಹುಟ್ಟಿಕೊಂಡಿದ್ದವು. ಕನ್ನಡದಲ್ಲಿ ನಾಟಕಗಳನ್ನು ಉಳಿಸಿ ಬೆಳೆಸಲೆಂದೇ ಕಲಾ ತಂಡಗಳು ಹುಟ್ಟಿಕೊಂಡವು. ಕೆ.ಪಿ.ಚಂದ್ರೇಗೌಡ, ರಾಮಾಂಜನೇಯ, ಮುನಿಆಂಜನೇಯ, ಎಚ್.ಟಿ.ಪ್ರಭು, ಎಂ.ಎಂ.ಸ್ವಾಮಿ ಮುಂತಾದವರು ಸೇರಿ ತಂಡ ಕಟ್ಟಿಕೊಂಡು ಜಯ ವಿಜಯ, ಎಚ್ಚಮನಾಯಕ, ಮಕ್ಮಲ್ ಟೋಪಿ, ಕಂಬನಿ, ಮುರಿದ ಮನೆ ಇನ್ನಿತರೆ ಕನ್ನಡ ನಾಟಕಗಳನ್ನು ಪ್ರದರ್ಶಿಸಿ ಕನ್ನಡದ ಹುಚ್ಚು ಬೆಳೆಸಿದ್ದರು.

ಪುಲಿಯ ಪತ್ರಿಕಾ ಪ್ರೇಮ :

ಗ್ರಾಮದಲ್ಲಿ ಪಂಕ್ಚರ್ ಅಂಗಡಿ ಇಟ್ಟುಕೊಂಡಿರುವ ಶ್ರೀನಿವಾಸಮೂರ್ತಿ(ಪುಲಿ)ಗೆ ಕನ್ನಡ ಪತ್ರಿಕೆಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಇವರ ಅಂಗಡಿ ಬಯಲು ಗ್ರಂಥಾಲಯದಂತೆ. ಎಲ್ಲಾ ಕನ್ನಡ ದಿನಪತ್ರಿಕೆಗಳೂ ಅಲ್ಲಿ ಓದಲು ಸಿಗುತ್ತವೆ. ಬಹುಮುಖ್ಯ ಲೇಖನವಿದ್ದರೆ ಅದನ್ನು ಅವರು ಗೋಡೆಯ ಮೇಲೆ ಅಂಟಿಸಿ ಪ್ರದರ್ಶಿಸಿರುತ್ತಾರೆ. ಅಲ್ಲಿ ವಿವಿಧ ಪತ್ರಿಕೆಗಳನ್ನು ಓದಿ ಚರ್ಚಿಸುವುದು ಹಲವರ ದಿನಚರಿಯ ಭಾಗವಾಗಿದೆ. ಆ ಮೂಲಕ ಕನ್ನಡವನ್ನು ಓದುವ ಹವ್ಯಾಸವನ್ನು ಯಾವುದೆ ಸ್ವಾರ್ಥವಿಲ್ಲದೆ ಸದ್ದಿಲ್ಲದೆ ಬೆಳೆಸುವ ಕಾರ್ಯವೂ ನಡೆದುಕೊಂಡು ಬಂದಿದೆ.

ಸಾಧಕ ಕನ್ನಡಿಗರ ಭೇಟಿ :

ಮೈಸೂರಿನ ಮಹರಾಜ ಜಯಚಾಮರಾಜೇಂದ್ರ ಒಡೆಯರ್, ಭಾರತ ರತ್ನ ವಿಶ್ವೇಶ್ವರಯ್ಯ, ಕನ್ನಡ ಕಣ್ಮಣಿ ಡಾ.ರಾಜ್ ಕುಮಾರ್, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ವಾಟಾಳ್ ನಾಗರಾಜ್, ಮಹದೇವ್ ಬಣಕರ್, ಚಂಪಾ, ಬಿ.ಆರ್.ಲಕ್ಷ್ಮಣರಾವ್, ಕೆಂಗಲ್ ಹನುಮಂತರಾಯ, ಕಡಿದಾಳ್ ಮಂಜಣ್ಣ, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ, ವಿಶ್ವ ವಿಖ್ಯಾತ ಕಲಾವಿದ ಬಿ.ಕೆ.ಎಸ್. ವರ್ಮರಂತ ಕನ್ನಡನಾಡಿನ ಹಿರಿಮೆಯನ್ನು ಹೆಚ್ಚಿಸಿದ ಸಾಧಕರು ಮೇಲೂರಿಗೆ ಭೇಟಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.