ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬಿರುಗಾಳಿ, ಮಳೆಗೆ ಕಾಫಿ ಫಸಲು ಉದುರಿ ನೆಲಕಚ್ಚುತ್ತಿದ್ದು, ಕೊಳೆರೋಗ ಕೂಡ ಕಾಣಿಸಿಕೊಂಡಿದೆ. ಕಾಫಿಗೆ ಬೆಳೆ ವಿಮೆ ಸೌಲಭ್ಯ ಇಲ್ಲದಿರುವುದು ಬೆಳೆಗಾರರನ್ನು ಆತಂಕಕ್ಕೆ ದೂಡಿದೆ.

ಕಳೆದ ವರ್ಷ ಮಳೆ ಕೊರತೆಯಿಂದ ಬೇಸಿಗೆಯಲ್ಲಿ ಕಾಫಿ ಉಳಿಸಿಕೊಳ್ಳಲು ರೈತರು ಪರದಾಡಿದ್ದರು. ಈ ವರ್ಷ ನಿರಂತರ ಮಳೆ ಮತ್ತು ಗಾಳಿಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಫಿ ಗಿಡದಲ್ಲಿ ಹೂವುಗಳು ಕಾಯಿಗಳ ರೂಪ ಪಡೆದಿದ್ದು, ಹಣ್ಣಾಗುವ ಹಂತದಲ್ಲಿವೆ.

ಆದರೀಗ ತೋಟಗಳಿಗೆ ಕಾಲಿಟ್ಟರೆ ಎಲ್ಲೆಡೆ ಫಸಲು ಉದುರಿರುವುದೇ ಕಾಣಿಸುತ್ತಿದೆ. ನೆಲದಲ್ಲಿ ಹಸಿರು ಬಣ್ಣದ ಕಾಫಿ ಕಾಯಿಗಳನ್ನು ಕಂಡು ಬೆಳೆಗಾರರು ಕಣ್ಣೀರಿಡುತ್ತಿದ್ದಾರೆ. ‘ಬೇಸಿಗೆಯಲ್ಲಿ ಕಷ್ಟಪಟ್ಟು ತೋಟಗಳನ್ನು ಉಳಿಸಿಕೊಂಡಿದ್ದೆವು. ಈಗ ಫಸಲು ನೆಲಕಚ್ಚಿರುವುದನ್ನು ನೋಡಿದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

‘ಮತ್ತೊಂದೆಡೆ ಗಿಡದಲ್ಲಿ ಕಾಫಿ ಕಾಯಿಗಳ ಗೊಂಚಲುಗಳೇ ಕೊಳೆಯುತ್ತಿರುವುದು ಕಾಣಿಸುತ್ತಿದೆ. ಮಳೆ ಹೆಚ್ಚಾಗಿರುವುದರಿಂದ ಕೊಳೆರೋಗ ಆರಂಭವಾಗಿದೆ. ಕೊಳೆತಿರುವ ಕಾಯಿಗಳೂ ನೆಲಕ್ಕೆ ಬೀಳುತ್ತಿವೆ. ಈ ವರ್ಷವೂ ಬೆಳೆಗಾರರ ಬದುಕು ಮೂರಾಬಟ್ಟೆಯಾಗಲಿದೆ’ ಎಂದು ಹೇಳುತ್ತಾರೆ.

ಗಾಳಿಯಿಂದ ತೋಟಗಳಲ್ಲಿರುವ ಮರಗಳು ಉರುಳಿ ಬೀಳುತ್ತಿವೆ. ಅವುಗಳ ಜತೆಗೆ ಕಾಫಿ ಫಸಲು ಕೂಡ ನೆಲಕ್ಕೆ ಬೀಳುತ್ತಿದೆ. ಒಟ್ಟಾರೆ, ಶೇ 50ರಿಂದ ಶೇ60ರಷ್ಟು ಫಸಲು ಮಣ್ಣು ಪಾಲಾಗಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಚ್.ಟಿ ಮೋಹನ್ಕುಮಾರ್ ಹೇಳುತ್ತಾರೆ.

‘ಕಾಫಿಗೆ ಈಗ ಉತ್ತಮ ಬೆಲೆ ಇದೆ. ಈ ಸಂದರ್ಭದಲ್ಲಿ ತೋಟಗಳಲ್ಲಿ ಫಸಲು ಉಳಿದಿಲ್ಲ. ಕೊಡಗು, ಹಾಸನ, ಚಿಕ್ಕಮಗಳೂರು ಮೂರೂ ಜಿಲ್ಲೆಗಳ ಬೆಳೆಗಾರರ ಸ್ಥಿತಿ ಇದೇ ಇದೆ. ಮಳೆ ಒಂದು ವಾರ ಬಿಡುವು ನೀಡಿದ್ದರೂ ಔಷಧ ಸಿಂಪಡಿಸಿ ಕೊಳೆರೋಗ ತಡೆಯಬಹುದಿತ್ತು. ನಿರಂತರವಾಗಿ ಸುರಿಯುತ್ತಿರುವುದರಿಂದ ಔಷಧ ಸಿಂಪಡಣೆಯೂ ಸಾಧ್ಯವಾಗಿಲ್ಲ’ ಎಂದು ಹೇಳಿದರು.

‘ಕಾಫಿಗೆ ಬೆಳೆವಿಮೆ ಸೌಲಭ್ಯ ಇಲ್ಲ. ಮಳೆಯಿಂದ ಶೇ 33ಕ್ಕಿಂತ ಹೆಚ್ಚು ಹಾನಿಯಾದರೆ ಎನ್ಡಿಆರ್ಎಫ್ನಿಂದ ಹೆಕ್ಟೇರ್ಗೆ ₹18 ಸಾವಿರ ನೀಡಲಾಗುತ್ತದೆ. ಅದು ಕೂಡ ಎರಡು ಹೆಕ್ಟೇರ್ಗೆ (5 ಎಕರೆ) ಸೀಮಿತ. ಎಸ್ಡಿಆರ್ಎಫ್ ಮೂಲಕ ಹೆಕ್ಟೇರ್ಗೆ ₹10 ಸಾವಿರ ನೀಡಲಾಗುತ್ತದೆ. ಅದು ಕೂಡ ಎರಡು ಹೆಕ್ಟೇರ್ಗೆ ಸೀಮಿತ. ಬೆಳೆಗಾರರು ಎಕರೆಗೆ ₹1 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದಾರೆ. ಈಗ 5 ಎಕರೆಗೆ ₹56 ಸಾವಿರ ಪರಿಹಾರ ಸಿಕ್ಕರೆ ಪ್ರಯೋಜನವಿಲ್ಲ’ ಎಂದು ಹೇಳುತ್ತಾರೆ.

ಜಂಟಿ ಸರ್ವೆಗೆ ಮನವಿ

‘ಎನ್ಡಿಆರ್ಎಫ್ ಮತ್ತು ಎಸ್ಟಿಆರ್ಎಫ್ನಿಂದ ಪರಿಹಾರ ದೊರಕಬೇಕೆಂದರೆ ಕಂದಾಯ ತೋಟಗಾರಿಕೆ ಇಲಾಖೆ ಮತ್ತು ಕಾಫಿ ಮಂಡಳಿ ಜಂಟಿ ಸರ್ವೆ ನಡೆಸಬೇಕು. ಜಂಟಿ ಸರ್ವೆ ನಡೆಸುವಂತೆ ಕಾಫಿ ಮಂಡಳಿಗೆ ಮನವಿ ಮಾಡಲಾಗಿದೆ’ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಚ್.ಟಿ. ಮೋಹನ್ಕುಮಾರ್ ತಿಳಿಸಿದರು. ‘ಜಂಟಿ ಸರ್ವೆ ನಡೆಸಲು ಕಾಫಿ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಮನವಿ ಮಾಡಿದ್ದೇವೆ. ಕೊಡಗು ಹಾಸನ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಅವರು ಭರವಸೆ ನೀಡಿದ್ದಾರೆ’ ಎಂದು ಹೇಳಿದರು.

ಬೆಳೆ ವಿಮೆ ಸೌಲಭ್ಯಕ್ಕೆ ಚಿಂತನೆ

‘ಕಾಫಿ ಮಂಡಳಿಯಿಂದ ಮೂರು ಜಿಲ್ಲೆಗಳಲ್ಲಿ ಸರ್ವೆ ನಡೆಸಲಾಗುತ್ತಿದೆ. ಕಾಫಿ ಸಂಶೋಧನಾ ಕೇಂದ್ರದ ವಿಜ್ಞಾನಿಗೂ ತಂಡದಲ್ಲಿ ಇದ್ದಾರೆ’ ಎಂದು ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ತಿಳಿಸಿದರು. ‘ಸರ್ವೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಎಷ್ಟು ಹಾನಿಯಾಗಿದೆ ಎಂಬುದನ್ನು ನೋಡಿಕೊಂಡು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ’ ಎಂದು ‘ಪ್ರಜಾವಾಣಿ’ಗೆ ಹೇಳಿದರು. ‘ಕಾಫಿಗೆ ಬೆಳೆ ವಿಮೆ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಅದಕ್ಕೆ ಬೇಕಿರುವ ಮಾಹಿತಿಯನ್ನು ಮಂಡಳಿಯಿಂದ ನೀಡಲಾಗುತ್ತಿದೆ. ಈ ಸೌಲಭ್ಯ ದೊರೆತರೆ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.