ಶೃಂಗೇರಿ: ದೀಪಾವಳಿ ಅಂಗವಾಗಿ ಸರಣಿ ರಜೆ ಲಭಿಸಿರುವುದರಿಂದ ಶುಕ್ರವಾರ ಶಾರದಾ ಪೀಠಕ್ಕೆ ಪ್ರವಾಸಿಗರ ದಂಡು ಹರಿದು ಬಂದಿದೆ.

ಶೃಂಗೇರಿ ಪಟ್ಟಣದ ವಾಹನ ನಿಲುಗಡೆ ಸ್ಥಳವಾದ ಗಾಂಧಿ ಮೈದಾನದಲ್ಲಿ ಪ್ರವಾಸಿ ವಾಹನಗಳ ದಟ್ಟಣೆ ಕಂಡು ಬಂತು. ಶಾರದಾ ಮಠದ ಎದುರು ಭಕ್ತರ ಸರತಿ ಸಾಲು ಇತ್ತು. ಪಟ್ಟಣದ ವಸತಿ ಗೃಹಗಳು, ಹೋಂಸ್ಟೇಗಳಲ್ಲಿ ಕೊಠಡಿಗಳು ಭರ್ತಿಯಾಗಿವೆ. ಶಾರದಾ ಮಠದಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಇದ್ದು, ಅಪಾರ ಸಂಖ್ಯೆಯ ಜನರು ಪ್ರಸಾದ ಸ್ವೀಕರಿಸಿದರು. ಉಭಯ ಗುರುಗಳು ವಾಸ್ತವ್ಯ ಇರುವ ಗುರು ಭವನಕ್ಕೆ ಮತ್ತು ಶಾರದಾ ಮಠದ ದೇವಾಲಯಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದರು. ಶಾರದಾ ಮಠದ ಎದುರಿನ ಚಂದ್ರಶೇಖರ ಭಾರತಿ ಸಭಾಂಗಣದಲ್ಲಿ ಮಕ್ಕಳ ಅಕ್ಷರಭ್ಯಾಸ ನಡೆಯುತ್ತಿದ್ದು, ದಿನವೂ ಸಾವಿರಾರು ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.